ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರೈತ ಸಂಘದಿಂದ ಕರ್ನಾಟಕ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಗುಜರಾತ್ ನ ಅಮೂಲ್ ಜೊತೆಗೆ ಸೇರಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಕರ್ನಾಟಕದ ನಂದಿನಿ ಸಂಸ್ಥೆ ಸದೃಢವಾಗಿ ವಾರ್ಷಿಕವಾಗಿ ಸಾವಿರಾರು ಕೋಟಿ ಗಳಿಸುತ್ತಿದೆ ಹಾಲು ಉತ್ಪಾದಕರ ಸೇರಿದಂತೆ ಮಾರಾಟಗಾರರು ಗ್ರಾಹಕರು ಒಂದು ಕೋಟಿಗೆ ಹೆಚ್ಚು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ ನಂದಿನಿ ಸಂಸ್ಥೆಯನ್ನು ಅಮೂಲ್ ಜೊತೆ ವಿಲೀನಗೊಳಿಸುವುದು ಅಮೂಲ್ ಕರ್ನಾಟಕದಲ್ಲಿ ಹಾಲುಮತ ರೈತರ ಉತ್ಪನ್ನಗಳನ್ನು ಆನ್ಲೈನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡುವುದರಿಂದ ಮುಂದೊಂದು ದಿನ ನಂದಿನಿ ಸಂಸ್ಥೆ ನಷ್ಟವಾಗಲಿದೆ ಎಂದು ಕಾರಣಕೊಟ್ಟು ಮುಚ್ಚು ಹೊನ್ನೂರ ಅಡಗಿದೆ ಎಂದು ರೈತ ಸಂಘದ ಉಪಾಧ್ಯಕ್ಷರಾದ ಕುರೋವ ಗಣೇಶ್ ನಮ್ಮ ಪತ್ರಿಕೆ ಜೊತೆ ಮಾತನಾಡಿದರು ಕರ್ನಾಟಕದ ರೈತರು ಕೃಷಿ ಕಾರ್ಮಿಕರು ಅತಿವೃಷ್ಟಿ ಅನಾವೃಷ್ಟಿಯಿಂದ ವ್ಯವಸಾಯ ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟವನ್ನು ಅನುಭವಿಸಿದರು ರೈತರು ಮತ್ತು ಕೃಷಿ ಕಾರ್ಮಿಕರು ಹಾಲು ಮಾರಿ ಜೀವನ ನಡೆಸಲು ಭದ್ರತೆ ಒದಗಿಸಿದ ಕೆಎಂಎಫ್ ರೈತರಿಂದ ಕಡಿಮೆ ದರದಲ್ಲಿ ಖರೀದಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುತ್ತಾ ಬಂದಿದೆ ಹೀಗೆ ಸರ್ಕಾರವು ಭದ್ರಾವತಿ ಮೈಸೂರು ಪೇಪರನ್ನು ವಿಶ್ವೇಶ್ವರ ಉಕ್ಕು ಕಬ್ಬಿಣ ಕಾರ್ಖಾನೆ, ಬ್ಯಾಂಕುಗಳ ವಿಲೀನ ಹೀಗೆ ಮಾಡುತ್ತಾ ಬಂದಿದೆ ಅದರಂತೆಯೇ ನಂದಿನಿ ಡೈರಿಯನ್ನು ಅಮೂಲ್ನೊಂದಿಗೆ ವಿಲೀನಗೊಳಿಸುವುದನ್ನು ಕೈಬಿಡಬೇಕು ಮುಂದಿನ ದಿನಗಳಲ್ಲಿ ರೈತರ ಅತಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಇದು ಕನ್ನಡಿಗರ ಅಸ್ತಿತ್ವತೆ ನಂದಿನಿಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದಂತ ಜಿ ಗಣೇಶ್ ಶುಂಠಿ ಅಧ್ಯಕ್ಷರಾದ ಬಸವರಾಜಪ್ಪ ಎಚ್ಆರ್ ಉಮೇಶ್ ದೀರ್ಗನಹಳ್ಳಿ ಇಂದು ಹಲವರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.