ಯಾದಗಿರಿ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆವತಿಯಿಂದ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಪಡಿತರ ಆಹಾರ ವಿತರಣೆವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಏಪ್ರಿಲ್-2023ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯ ಎಎವೈ 29,384 ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗಳಿಗೆ 35 ಕೆಜಿ ಅಕ್ಕಿ ಹಾಗೂ ಬಿಪಿಎಲ್ 8,83,820 ಪಡಿತರ ಸದಸ್ಯರಿದ್ದು, ಪ್ರತಿ ಪಡಿತರ ಸದಸ್ಯರಿಗೆ 5 ಕೆಜಿ ಎನ್‌ಎಫ್‌ಎಸ್‌ಎ ಅಕ್ಕಿ ಹಾಗೂ 1ಕೆ.ಜಿ ಓಎಂಎಸ್‌ಎಸ್(ಡಿ) ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಏಪ್ರಿಲ್ 2023ರ ಮಾಹೆಯಲ್ಲಿ ಪ್ರತಿ ಪಡಿತರ ಸದಸ್ಯರಿಗೆ 5 ಕೆ.ಜಿ ಎನ್‌ಎಫ್‌ಎಸ್‌ಎ ಅಕ್ಕಿ ಹಾಗೂ 1 ಕೆ.ಜಿ ಓಎಂಎಸ್‌ಎಸ್(ಡಿ) ಅಕ್ಕಿ ಸೇರಿ ಒಟ್ಟಾರೆ 6 ಕೆ.ಜಿ ಅಕ್ಕಿ ಏಪ್ರಿಲ್ 2023ರ ಮಾಹೆಗೆ ಉಚಿತವಾಗಿ ವಿತರಿಸಲಾಗುವುದು.
ಏಪ್ರಿಲ್-2023ರ ಮಾಹೆಯ ಆಹಾರಧಾನ್ಯ ಪಡೆಯಲು ಇಚ್ಛೆಯನ್ನು ವ್ಯಕ್ತಪಡಿಸಲು ಆಧ್ಯತೇತರ ಎಪಿಎಲ್4,833 ಪಡಿತರ ಚೀಟಿಗಳಿದ್ದು, ಈ ಎಪಿಎಲ್ ಪಡಿತರ ಚೀಟಿಯ ಫಲಾನುಭವಿಗಳ ಪೈಕಿ ಏಕ ಸದಸ್ಯರ ಪಡಿತರ ಚೀಟಿಗಳಿಗೆ 5 ಕೆಜಿ ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರ ಪಡಿತರ ಚೀಟಿಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂ.ಗಳಂತೆ ನೀಡಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಜಿಲ್ಲೆಯ ಎಲ್ಲಾ 401 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಒ.ಟಿ.ಪಿ ಮುಖಾಂತರ ಅಥವಾ ಬೆರಳಚ್ಚನ್ನು, ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪಡಿತರ ಚೀಟಿ ಪ್ರಕಾರ ತಿಳಿದುಕೊಂಡು ಆಹಾರ ಧಾನ್ಯ ಪಡೆದುಕೊಳ್ಳಬಹುದಾಗಿರುತ್ತದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯಾ ತಾಲ್ಲೂಕಿನ ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಉಪ ನಿರ್ದೇಶಕರ ಕಛೇರಿಗೆ ದೂ.ಸಂ.08473-253707 ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಕೋರಿದೆ.
ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದಕೊಂಡು ನ್ಯಾಯಬೆಲೆ ಅಂಗಡಿಯಿಂದ ಆಹಾರಧಾನ್ಯವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.