ಕಲಬುರ್ಗಿ:ಚಿತ್ತಾಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಬಿಜೆಪಿಯ ಅಭ್ಯರ್ಥಿ ರೌಡಿ ಶೀಟರ್, ಇತ್ತೀಚೆಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಮಣಿಕಂಠ ರಾಠೋಡ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ.
ಕಲಬುರ್ಗಿ ಪೋಲಿಸ್ ಕಮಿಷನರ್ ಡಾ|| ವೈ.ಎಸ್.ರವಿಕುಮಾರ ಅವರು ಗಡಿಪಾರು ಮಾಡಿದ್ದರು ಇದಕ್ಕೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೈಕೋರ್ಟನಿಂದ ತಡೆಯಾಜ್ಞೆ ತಂದಿದ್ದರು.
ಅನ್ನಭಾಗ್ಯ ರೇಷನ್ ಅಕ್ಕಿ ಅಕ್ರಮವಾಗಿ ಸಾಗಣೆಕೆ ಪ್ರಕರಣದಲ್ಲಿ ಭಾಗಿಯಾಗಿರುವ ಮಣಿಕಂಠ ರಾಠೋಡ ವಿರುದ್ಧ ಬೀದರ್,ಕಲಬುರ್ಗಿ ಹಾಗೂ ಯಾದಗಿರಿ ಮೂರು ಜಿಲ್ಲೆಗಳಲ್ಲಿ ವಿವಿಧ ಪೋಲಿಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಚಿತ್ತಾಪುರ ಕ್ಷೇತ್ರದ ವಿಧಾನಪರಿಷತ್ತಿನ ಸದಸ್ಯರಾದ ಸುನೀಲ್ ವಲ್ಲಾಪುರಿ ಇನ್ನೊಬ್ಬ ಬಿಜೆಪಿ ಮುಖಂಡರಾದ ಅರವಿಂದ ಚವ್ಹಾಣ,ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಪುತ್ರ ವಿಠಲ್ ನಾಯಕ್, ಇವರುಗಳು ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ