ರಾಯಚೂರು/ಸಿಂಧನೂರು ತಾಲೂಕಿನ ಗೋಮರ್ಶಿ ಗ್ರಾಮದ ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿದ್ಯಾಶ್ರೀ ಬಿ ಎಮ್ ಪಿ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳಿಗೆ ಅರವಟ್ಟಿಗೆ ತಯಾರಿಸಿ ಕಾಳು ಮತ್ತು ನೀರುಣಿಸುವ ಕಾಯಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅದ್ಯಕ್ಷರಾದ ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಅವರು ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಪಂಪಯ್ಯ ಸ್ವಾಮಿ ಸಾಲಿಮಠ ಮಾತನಾಡಿ ವನಸಿರಿ ಫೌಂಡೇಶನ್ ತಂಡ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಕಳೆದ 5 -6 ವರ್ಷಗಳಿಂದ ಎಪ್ರಿಲ್ ಪೂಲ್ ಅನ್ನುವುದರ ಬದಲಾಗಿ ಎಪ್ರಿಲ್ ಕೂಲ್ ಅನ್ನುವ ವಿನೂತನವಾಗಿರುವ ಕಾರ್ಯಕ್ರಮದ ಪ್ರಾಣಿ ಪಕ್ಷಿಗಳಿಗೆ ವನ್ಯಜೀವಿಗಳನ್ನ ರಕ್ಷಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತು ಹತ್ತು ಸಾವಿರಕ್ಕೂ ಹೆಚ್ಚು ಮಣ್ಣಿನ ಮಡಿಕೆಗಳನ್ನು ಆಯಾ ನಗರ ಗ್ರಾಮೀಣ ಪ್ರದೇಶಗಳಲ್ಲಿ ಗಿಡಮರಗಳಿಗೆ ಕಟ್ಟಿ ಕಾಳು ಮತ್ತು ನೀರುಣಿಸುವ ಕಾರ್ಯ ಮಾಡುತ್ತಿದ್ದಾರೆ ನಾವು ಇವತ್ತು ಕಂಪ್ಯೂಟರ್ ಯುಗದಲ್ಲೂ ಸಹ ಎತ್ತೋಎತ್ತ ಸಾಗುವ ದಿನಮಾನಗಳಲ್ಲಿ ವನ್ಯಜೀವಿಗಳ ರಕ್ಷಣೆಗಾಗಿ ಈ ಕಾರ್ಯ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಒಂದೇ ಎರಡಲ್ಲದೆ ಸಾದು ಸಂತರೂ ಮಹಾರಾಜರು ಸಹ ವನ್ಯಜೀವಿಗಳನ್ನು ನರಿ,ಆನೆ,ಕುರಿ,ಕೋಳಿ, ಚೋಳು,ಮೊಲ,ಚೋಳು ಹಾವುಗಳನ್ನು ರಕ್ಷಣೆ ಮಾಡಿದಂತಹ ಉದಾಹರಣೆ ಈ ನೆಲದಲ್ಲಿ ಇದೆ.ಆ ನಿಟ್ಟಿನಲ್ಲಿ ಅಂತಹ ವನ್ಯಜೀವಿಗಲ್ಲಿ ಇರುವೆಗೂ ಮೊದಲು ಮಾಡಿಕೊಂಡು ಕಾಳು ಮತ್ತು ನೀರು ದೊರಕಲಿ ಎನ್ನುವ ನಿಟ್ಟಿನಲ್ಲಿ ಹಳ್ಳದ ಪ್ರದೇಶದಲ್ಲಿ ತಗ್ಗುದಿನ್ನಿ ಪ್ರದೇಶದಲ್ಲಿ ನೀರನ್ನು ಇರುವಂತಹ ಕಾರ್ಯ ಮಾಡುತ್ತಿದ್ದಾರೆ ಅವರಿಗೆ ಬಹಳ ದೊಡ್ಡ ಜವಾಬ್ದಾರಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ವಿದ್ಯಾಶ್ರೀ ಬಿ.ಎಮ್.ಶ್ರೀ ಶಾಲೆಯ ಕಾರ್ಯದರ್ಶಿಯಾದ ಶ್ರೀಮತಿ ದ್ರಾಕ್ಷಾಯಣಿ ಮಾಲಿ ಪಾಟೀಲ,ಶಿಕ್ಷಕರಾದ ಬಿ.ಕೊಟ್ರೇಶ,ಬಸನಗೌಡ ಗೋಮರ್ಶಿ,ಜೀವಸ್ಪಂದನ ಕಾರ್ಯದರ್ಶಿ ಅವಿನಾಶ ದೇಶಪಾಂಡೆ,ಗಿರಿಸ್ವಾಮಿ ಹಡಗಿನಾಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ,ವೆಂಕಟರಡ್ಡಿ ಹಡಗಿನಾಳ ಹಾಗೂ ಇನ್ನೂ ಹೆಚ್ಚಿನ ಪರಿಸರ ಭಾಗವಹಿಸಿದ್ದರು.