ಸಿಂಧನೂರಿನ ಗೋಮರ್ಶಿಯ ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿದ್ಯಾಶ್ರೀ ಬಿ ಎಮ್ ಪಿ ಶಾಲೆಯ ಆವರಣದಲ್ಲಿ ಪಕ್ಷಿಗಳ ಅರವಟ್ಟಿಗೆ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೀವಸ್ಪಂದನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ಮಾತನಾಡಿ ವನಸಿರಿ ಫೌಂಡೇಶನ್ 10 ಸಾವಿರಕ್ಕೂ ಹೆಚ್ಚು ಮಣ್ಣಿನ ಮಡಿಕೆಗಳನ್ನು ತಯಾರಿಸಿ ಕಾಳು ಮತ್ತು ನೀರುಣಿಸುವ ಕಾಯಕಕ್ಕೆ ಅಮರೇಗೌಡ ಮಲ್ಲಾಪೂರ ಮುಂದಾಗಿರುವುದು ಶ್ಲಾಘನೀಯ ಇವರ ಕಾರ್ಯ ಹಲವಾರು ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ಪಂಪಯ್ಯಸ್ವಾಮಿ ಸಾಲಿಮಠ,ವಿದ್ಯಾಶ್ರೀ ಬಿ.ಎಮ್.ಶ್ರೀ ಶಾಲೆಯ ಕಾರ್ಯದರ್ಶಿಯಾದ ಶ್ರೀಮತಿ ದ್ರಾಕ್ಷಾಯಣಿ ಮಾಲಿ ಪಾಟೀಲ,ಶಿಕ್ಷಕರಾದ ಬಿ.ಕೊಟ್ರೇಶ,ಬಸನಗೌಡ ಗೋಮರ್ಶಿ,ಜೀವಸ್ಪಂದನ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಗಿರಿಸ್ವಾಮಿ ಹಡಗಿನಾಳ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ,ವೆಂಕಟರಡ್ಡಿ ಹಡಗಿನಾಳ ಹಾಗೂ ಇನ್ನೂ ಹೆಚ್ಚಿನ ಪರಿಸರ ಭಾಗವಹಿಸಿದ್ದರು.