ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಈಗಾಗಲೇ ರಣಕಲಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಆ ನಿಟ್ಟಿನಲ್ಲಿ ಹಲವು ಕಡೆ ಅಸಮಾಧಾನ ಮತ್ತು ಬಂಡಾಯದ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧರಾಗಿರುವ ಕೇಂದ್ರ ನಾಯಕರಾದ ಶ್ರೀ ಅಮಿತ್ ಷಾ ಒಂದೇ ಮಾತಿನಲ್ಲಿ ಕಡ್ಡಿ ಮುರಿದಂತೆ ಹಮ್ ದೇಖಲೆಂಗೆ ಎಂಬ ಸಂದೇಶ ರವಾನಿಸಿದ್ದಾರೆ ಕಾರಣ ಅವರಿಗೊತ್ತು ಈ ಹಿಂದಿನ ಸಂಪ್ರದಾಯ ಕಿತ್ತೊಗೆದು ಸಹಜವಾಗಿ ಆಡಳಿತ ಪಕ್ಷದ ವಿರೋಧವನ್ನು ಬಗ್ಗುಬಡಿಯಲು ಕೆಲವೊಂದು ಅಭ್ಯರ್ಥಿಗಳಿಗೆ ಈ ಬಾರಿ ಟಿಕೆಟ್ ನೀಡಿಲ್ಲ ಕೆಲವು ಕಡೆ ಅಸಮಾಧಾನದ ಹೊಗೆ ಭುಗಿಲೆದ್ದರು ಅದನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಈ ಮೊದಲೇ ಕೆಲವು ಅಭ್ಯರ್ಥಿಗಳಿಗೆ ಮೌಖಿಕವಾಗಿ ಕೆಲವರಿಗೆ ಪರ್ಯಾಯ ಸ್ಥಾನಮಾನ ಇನ್ನು ಕೆಲವರಿಗೆ ಮಗದೊಂದು ದಾರಿಯಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಕೊಟ್ಟು ಮುಂದುವರೆಯಲು ಹೇಳಿದ್ದಾರೆ ಇದನ್ನು ಮೀರಿ ಬಂಡಾಯ ಸ್ಫೋಟಗೊಳ್ಳುವ ಸಾಧ್ಯತೆಯಿದ್ಧರೂ ಅದನ್ನು ಶಮನಗೊಳಿಸುವ ಷಾ ತಂತ್ರ ಕರ್ನಾಟಕದಲ್ಲಿ ಅದ್ಭುತವಾಗಿದೆ ಎಂದು ಹೇಳಬಹುದು ಕಾರಣವಿಷ್ಟೇ ಸಹಜವಾಗಿ ಕೈ ಪಾಳೆಯದಲ್ಲಿ ಹೊಂದಾಣಿಕೆಯ ಕೊರತೆ ಜಾತ್ಯತೀತ ಜನತಾದಳದಲ್ಲಿ ನಿಯಂತ್ರಣಕ್ಕೆ ತರಬಹುದಾದ ತಂತ್ರಗಳ ಕೊರತೆ ಇವೆಲ್ಲವನ್ನು ಅಳೆದು ತೂಗಿ ನೋಡಿ ಬಲವಾದ ನಿರ್ಣಯ ಕೈಗೊಂಡು ಅದಕ್ಕೆ ಪೂರಕವಾಗಿ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದು ರಾಜಕೀಯ ಪಂಡಿತರ ಲೆಕ್ಕಾಚಾರ ಏಕೆಂದರೆ ರಾಜ್ಯ ಕಾಂಗ್ರೆಸ್ನಲ್ಲಿ ಜನರ ಒಲವು ಅವರ ಪರವಾಗಿದೆ ಎಂಬ ಅತೀಯಾದ ಆತ್ಮವಿಶ್ವಾಸವು ಅದನ್ನು ಹೊಂದಾಣಿಕೆಯಿಂದ ನಿಭಾಯಿಸುವಲ್ಲಿ ಎಡವಿದ್ದಾರೆ ಕಾರಣ ಪಕ್ಷಾಂತರಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು ಈ ಬಾರಿ ಅದೆ ಪಕ್ಷದಲ್ಲಿ ಇನ್ನು ಮೂಲ ಸಿದ್ಧಾಂತವನ್ನು ಬದಿಗೊತ್ತಿ ಅತೀಯಾದ ಆಮಿಷಗಳಿಗೆ ಮಣೆ ಹಾಕಿದ್ದು ಗ್ಯಾರಂಟಿ ಕಾರ್ಡ್ ವಿತರಣೆ ಜನರಿಗೆ ಅನುಮಾನ ಬರುವಂತೆ ಅಸಾಧ್ಯ ಎಂಬಂತಹ ಘೋಷನೆಗಳೂ ಜನರ ಮೇಲೆ ಗಂಭೀರ ಪರಿಣಾಮ ಬೀರಿದ್ದು ಇದರ ಲಾಭವನ್ನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಪಡೆದುಕೊಳ್ಳುವ ಲೆಕ್ಕಾಚಾರ ಕೇಂದ್ರ ನಾಯಕರದ್ದಾಗಿದೆ ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಅಮಿತ್ ಷಾ ಹಮ್ ದೇಖಲೆಂಗೆ ಎಂಬ ಮಾತುಗಳನ್ನು ರಾಜ್ಯ ನಾಯಕರಿಗೆ ಹೇಳಿದ್ದಾರೆ ಜೊತೆಗೆ ಕಾರ್ಯಕರ್ತರ ಮತದಾರನ ಮನಸ್ಥಿತಿಯನ್ನು ಅರ್ಥೈಸಿಕೊಂಡು ನೋಡುವ ಮನೋಭಾವ ಭಾರತೀಯ ಜನತಾ ಪಕ್ಷದ ಗುರಿಯಾಗಿದೆ ಅದನ್ನು ರಾಜ್ಯ ನಾಯಕರು ಹೇಗೆ ನಿಯಂತ್ರಣಕ್ಕೆ ತಂದುಕೊಂಡು ಮತ್ತೆ ಕರ್ನಾಟಕದಲ್ಲಿ ಕೇಸರಿ ಬಾವುಟವನ್ನು ರಾರಾಜಿಸುತ್ತಾರೆ ಎಂಬುದೂ ನಿಗೂಢವಾಗಿದೆ.
ವರದಿಗಾರ ದಿನೇಶಕುಮಾರ ಅಜಮೇರಾ ಬೆಳಗಾವಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.