ಶಿವಮೊಗ್ಗ/ಸೊರಬ.ಏ15:ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು,ನಿಷ್ಟಾವಂತ ಬಾಸೂರು ಚಂದ್ರೇಗೌಡ ಅವರನ್ನು ಜೆಡಿಎಸ್ ಸೊರಬ ಕ್ಷೇತ್ರದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿ ಪ್ರಕಟಿಸಿದೆ.
ತೀವ್ರ ಕಗ್ಗಂಟಾಗಿದ್ದ ಸೊರಬ ಕ್ಷೇತ್ರದ ಜೆಡಿಎಸ್ ಟಿಕೆಟ್ ನ್ನು ಗಿಟ್ಟಿಸಿಕೊಳ್ಳುವಲ್ಲಿ ಬಾಸೂರು ಚಂದ್ರೇಗೌಡರು ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಪಕ್ಷದ ಇಬ್ಬರು ಆಕಾಂಕ್ಷಿಗಳ ನಡುವೆ ಟಿಕೇಟ್ ಗಾಗಿ ತೀವ್ರ ಪೈಪೋಟಿ ನಡೆದಿತ್ತು ಪ್ರಸನ್ನ ಕುಮಾರ್ ಸಮನವಳ್ಳಿ ಮತ್ತು ಬಾಸೂರು ಚಂದ್ರೇಗೌಡ ಇಬ್ಬರ ನಡುವೆ ಟಿಕೇಟ್ ಗಾಗಿ ಹಣಾಹಣಿ ನಡೆದಿತ್ತು. ಈ ಮಧ್ಯೆ ಜೆಡಿಎಸ್ ಮುಖಂಡ ಕೆ.ಅಜ್ಜಪ್ಪ ಸಹ ಈಡಿಗ ಸಮುದಾಯದವರಾದ ತಮಗೆ ಟಿಕೆಟ್ ನೀಡುವಂತೆ ಅಗ್ರಹಿಸಿದ್ದರು ಇದೀಗ ಜೆಡಿಎಸ್ ಪಕ್ಷಕ್ಕೆ ಸಲ್ಲಿಸಿದ ಸೇವೆ ಹಾಗೂ ನಿಷ್ಠೆಯನ್ನು ಪರಿಗಣಿಸಿ ಬಾಸೂರು ಚಂದ್ರೇಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.
ಎಸ್.ಬಂಗಾರಪ್ಪ ಕುಟುಂಬ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿರುವ ಬಾಸೂರು ಚಂದ್ರೇಗೌಡ
ವೀರಶೈವ ಸಮಾಜದ ಬಾಸೂರು ಚಂದ್ರೇಗೌಡರು ಸಮಾಜವಾದಿ ಸಿದ್ಧಾಂತದ ಕುಪಗಡ್ಡೆ ಮರಿಯಪ್ಪ, ಶಾಂತವೇರಿ ಗೋಪಾಲಗೌಡರ ಸಿದ್ಧಾಂತ ಹಾಗೂ ಆದರ್ಶಗಳನ್ನು ಒಪ್ಪಿಕೊಂಡು ಸಮಾಜವಾದಿ ಚಿಂತನೆಗಳೊಂದಿಗೆ ರಾಜಕೀಯ ಜೀವನ ಆರಂಭಿಸಿದ್ದರು.ಬಿಜೆಪಿ,ಜನತಾಪಕಗಳಿಂದ ಸೊರಬ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಗೆ ಪ್ರಯತ್ನಿಸಿ ವಿಫಲರಾಗಿದ್ದರು.4 ದಶಕಗಳ ರಾಜಕೀಯ ಬದುಕಿನಲ್ಲಿ ಕಡೆಗೂ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿದೆ ತಾಲೂಕಿನಲ್ಲಿ ಬಿಜೆಪಿಯನ್ನು ಮುನ್ನಡೆಸಲು ಸಮರ್ಥ ವ್ಯಕ್ತಿ ಯಾರೂ ಇಲ್ಲದ ಕಾರಣ 2000ರಲ್ಲಿ ಅವರನ್ನು ಬಿಜೆಪಿಗೆ ಕರೆತರಲಾಗಿತ್ತು. ಯಡಿಯೂರಪ್ಪ ಜತೆ ರಾಮಮಂದಿರ ಹೋರಾಟದಲ್ಲಿ ಪಾಲ್ಗೊಂಡು ಅಯೋಧ್ಯೆಗೆ ಹೋಗುವಾಗ ಬಂಧಿತರಾಗಿದ್ದರು
ಈಗಾಗಲೇ ತಾಲೂಕಿನಾದ್ಯಂತ ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ಪಾದಯಾತ್ರೆ ನಡೆಸಿ ಪಕ್ಷ ಸಂಘಟಿಸಿ ತಾಲೂಕಿನಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿದ್ದಾರೆ.
–ಸಂದೀಪ ಯು.ಎಲ್.ಸೊರಬ