ಸಿಂದಗಿ:ಪಕ್ಷಕ್ಕೆ ರಾಜೀನಾಮೆ ನೀಡದೆ ಮತ್ತೊಂದು ಪಕ್ಷವನ್ನು ಸೇರಿದ ಸುನಂದ ಯಂಪೂರೆಯನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.
ಸಿಂದಗಿಯ ಶಾಸಕರ ಕಚೇರಿಯಲ್ಲಿ ಮಾದ್ಯಮಗೋಷ್ಠೀಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡದೆ ಮತ್ತೊಂದು ಪಕ್ಷದ ಚಟುವಟಿಕೆಯಲ್ಲಿ ತೊಡಗಿರುವುದು ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಆಗಿದೆ ಅವರನ್ನು ಉಚ್ಚಾಟನೆ ಮಾಡಿ ಸಿಂದಗಿ ಮಹಿಳಾ ಮೋರ್ಚಾದ ಅಧ್ಯಕ್ಷರನ್ನಾಗಿ ನೀಲಮ್ಮ ಯಡ್ರಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಏ.೧೯ ರಂದು ಅಂಬೇಡ್ಕರ ವೃತ್ತದ ಮಾರ್ಗವಾಗಿ, ಅಂಬಿಗೇರ ಚೌಡಯ್ಯ ವೃತ್ತದ ಮೂಲಕ,ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಲಾಗುವುದು ಎಂದರು.
ಈ ವೇಳೆ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಚುನಾವಣಾ ಉಸ್ತುವಾರಿ ಬಾಲಚಂದ್ರ, ಸಂತೋಷಗೌಡ ಪಾಟೀಲ ಡಂಬಳ, ಶ್ರೀಶೈಲಗೌಡ ಬಿರಾದಾರ, ರಾಜಶೇಖರ ಪೂಜಾರಿ, ಬಿ.ಎಚ್.ಬಿರಾದಾರ, ಎಮ್.ಎಸ್.ಮಠ, ಗುರು ತಳವಾರ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.