ಯಾದಗಿರಿ/ಸುರಪುರ ಸುದ್ದಿ
2023 ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನರಸಿಂಹ ನಾಯಕ (ರಾಜುಗೌಡ) ನಾಮಪತ್ರ ಸಲ್ಲಿಸಿದರು.
ನಗರದ ತಹಶೀಲ್ದಾರ ಕಚೇರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಮುಂದಾಗುತ್ತಿದ್ದಾರೆ.
ಅದರಂತೆ ಬಿಜೆಪಿಯ ಅಭ್ಯರ್ಥಿ ನರಸಿಂಹ ನಾಯಕ ರಾಜುಗೌಡ ಅವರು ಸಾಂಕೇತಿಕವಾಗಿ ಲೋಕಸಭೆ ಸದಸ್ಯರಾದ ಅಮರೇಶ ನಾಯಕ, ಕಲಬುರ್ಗಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಗದ್ದೆಪ್ಪ ಪೂಜಾರಿ, ಯಾದಗಿರಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ ತಾತಾ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿ ಅಮರೇಶ ನಾಯ್ಕ್ ಅವರಿಗೆ ನಾಮಪತ್ರ ಸಲ್ಲಿಸಿದರು.