ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂವಿಧಾನ ಶಿಲ್ಪಿಯ 132ನೇ ಜನ್ಮದಿನಕ್ಕೆ ಮೆರುಗು ನೀಡಿದ ಭವ್ಯ ಮೆರವಣಿಗೆ | ಕುಣಿದು ಕುಪ್ಪಳಿಸಿದ ಯುವ ಸಮೂಹ

ಜಿಲ್ಲಾದ್ಯಂತ ಅದ್ದೂರಿ ಅಂಬೇಡ್ಕರ್ ಜಯಂತಿ

ಬೀದರ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಶುಕ್ರವಾರ ನಗರ ಸೇರಿ ಜಿಲ್ಲಾದ್ಯಂತ ಸಂಭ್ರಮದ ಜತೆಗೆ ಅದ್ದೂರಿಯಿಂದ ಜರುಗಿತು. ಅಂಬೇಡ್ಕ‌ರ್ ಭಾವಚಿತ್ರ, ಪ್ರತಿಮೆಗಳಿಗೆ ಪೂಜಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಲಾಯಿತು. ಭವ್ಯ ಮೆರವಣಿಗೆ, ಸಭೆ-ಸಮಾರಂಭಗಳಲ್ಲಿ ಅಂಬೇಡ್ಕರ್ ಜೀವನ ಮತ್ತು ಸಾಧನೆ ಕುರಿತು ಚಿಂತನ-ಮಂಥನ ನಡೆಯಿತು.

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆಡಳಿತದಿಂದ ಸರಳ ಜಯಂತಿ ಕಾರ್ಯಕ್ರಮ ಜರುಗಿತು. ಆದರೆ ಸಮಾಜ ಮತ್ತು ವಿವಿಧ ದಲಿತಪರ ಸಂಘಟನೆಗಳಿಂದ ಜಯಂತಿ ವೈಭವ, ಅದ್ದೂರಿಯಿಂದ ಆಚರಿಸಲಾಯಿತು. ಅಂಬೇಡ್ಕರ್ ವೃತ್ತದ ಡಾ.ಬಾಬಾಸಾಹೇಬ ಪುತ್ಥಳಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಇತರರು ಪುಷ್ಪಾರ್ಚನೆ ಮಾಡಿ ಗೌರವಿಸಿದರು.

ಶಾಸಕರಾದ ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ಎಂಎಲ್ಸಿ ಅರವಿಂದಕುಮಾರ ಅರಳಿ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ದಲಿತ ಮುಖಂಡರು ಸೇರಿ ಹಲವರು ಬಾಬಾಸಾಹೇಬರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರಮುಖರು, ಯಾವುದೇ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ. ಅವರ ತತ್ವ, ಚಿಂತನೆ ಮತ್ತು ಆದರ್ಶಗಳು ಸಮಾಜದ ಎಲ್ಲರಿಗೂ ಒಳಿತನ್ನೇ ಮಾಡುತ್ತವೆ. ಡಾ.ಅಂಬೇಡ್ಕರ್ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ. ಶೋಷಿತರಿಗೆ ನ್ಯಾಯಸಮ್ಮತ ಹಕ್ಕುಗಳನ್ನು ಕಲ್ಪಿಸಿಕೊಟ್ಟ, ಸಮಾಜದ ಪ್ರತಿಯೊಬ್ಬರಿಗೂ ಗೌರವಯುತ ಬದುಕಿಗಾಗಿ ಸಂವಿಧಾನ ಕೊಟ್ಟ ಮೇಧಾವಿ ಎಂದು ಬಣ್ಣಿಸಿದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಉಪ ನಿರ್ದೇಶಕ ಗಿರೀಶ್ ರಂಜೋಳಕರ್‌, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ರಮೇಶ ಪಾಟೀಲ್‌ ಸೋಲಪುರ, ಚಂದ್ರಾಸಿಂಗ್‌, ಮಾರುತಿ ಬೌದ್ಧ, ಫರ್ನಾಂಡಿಸ್ ಹಿಪ್ಪಳಗಾಂವ, ಸಂಜಯ ಜಾಗೀರದಾರ್, ಅನೀಲಕುಮಾರ ಬೆಲ್ದಾರ್,
ಬಾಬುರಾವ ಪಾಸ್ವಾನ್, ರಾಜು ಕಡ್ಯಾಳ,
ವಿಜಯಕುಮಾರ ಸೋನಾರೆ, ಅಬ್ದುಲ್
ಮನ್ನಾನ್‌ ಸೇಠ, ಉಮೇಶಕುಮಾರ ಸ್ವಾರಳ್ಳಿಕರ, ಮಹೇಶ ಗೋರನಾಳಕ‌, ರಾಜಕುಮಾರ ಮೂಲಭಾರತಿ, ರಾಜಕುಮಾರ ಶೇರಿಕಾರ, ಅಶೋಕ ಮಾಳಗೆ, ಸಾಯಿ ಶಿಂಧೆ ಇತರರಿದ್ದರು.

ಈ ವೇಳೆ ಪಂಚಶೀಲ ಮತ್ತು ನೀಲಿ ಧ್ವಜಾರೋಹಣವೂ ಜರುಗಿತು. ಭೀಮಗೀತೆಗಳು ಮೊಳಗಿದವು. ಪ್ರಮುಖರು ಡೊಳ್ಳು ಬಾರಿಸಿ ಸಂಭ್ರಮಿಸಿದರು. ಜನಪ್ರತಿನಿಧಿಗಳು, ಗಣ್ಯರು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಮೆರವಣಿಗೆಕಾರರಿಗೆ ಜೋಶ್ ನೀಡಿದರು. ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಸಾಂಸ್ಕೃತಿಕ ವೈಭವ ನೀಡಿತು.

ವೈಭವದಿಂದ ನಡೆದ ಮೆರವಣಿಗೆ
ಜಯಂತಿ ಅಂಗವಾಗಿ ಬೀದರ್ ನಗರದಲ್ಲಿ ಡಾ.ಅಂಬೇಡ್ಕರ್
ಭಾವಚಿತ್ರದೊಂದಿಗೆ ಜೋಲ್ದಾ‌ ಮೆರವಣಿಗೆ ನಡೆದವು. ವಿವಿಧ
ಬಡಾವಣೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಅಲಂಕೃತ ವಾಹನಗಳಲ್ಲಿ ಆಗಮಿಸಿದ ಮೆರವಣಿಗೆಗಳ ವೈಭವ, ಅಬ್ಬರ ತಡರಾತ್ರಿವರೆಗೂ ನಡೆಯಿತು. ದಲಿತ ಸಂಘಟನೆಗಳ ಒಕ್ಕೂಟದಿಂದ ಜಯಂತ್ಯುತ್ಸವ ವಿಶಿಷ್ಟವಾಗಿ ಜರುಗಿತು. ಮೆರವಣಿಗೆ ಅದ್ದೂರಿ ಜತೆಗೆ ಅರ್ಥಪೂರ್ಣವಾಗಿತ್ತು. ಡಾ.ಅಂಬೇಡ್ಕರ್ ವೃತ್ತ ಸೇರಿ ವಿವಿಧೆಡೆ ಕುಡಿವ ನೀರು ಮತ್ತು ತಂಪು ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಯಾ ಬಡಾವಣೆ ಜನ ಡಾ.ಅಂಬೇಡ್ಕರರ ಬೃಹತ್ ಭಾವಚಿತ್ರ ಹಾಕಿಕೊಂಡು ವಾದ್ಯಮೇಳ, ಡಿಜೆ ಸೌಂಡ್‌ನೊಂದಿಗೆ ಅಂಬೇಡ್ಕರ್ ವೃತ್ತದ ಕಡೆಗೆ ಆಗಮಿಸಿದರು. ನಯಾಕಮಾನ್ -ಚೌಬಾರಾ-ಮುಖ್ಯ ರಸ್ತೆ ಮೆರವಣಿಗೆಕಾರರಿಂದ ತುಂಬಿತ್ತು. ಯುವಕರು ಕುಣಿದು ಕುಪ್ಪಳಿಸಿದರು. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ನಜರ್ ಇಡಲಾಗಿತ್ತು.

ವರದಿ: ಸಾಗರ ಪಡಸಾಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ