ಯಾದಗಿರಿ ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮೀನರೆಡ್ಡಿ ಯಾಳಗಿ ಅವರು ನಾಮಪತ್ರ ಸಲ್ಲಿಸಿದರು.
ರಾಜಕೀಯ ವಿದ್ಯಮಾನಗಳಲ್ಲಿ ಯುವ ನಾಯಕ ಅಮೀನರೆಡ್ಡಿ ಯಾಳಗಿ ಅವರು ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಡಾ||ಚಂದ್ರಶೇಖರ ಸುಬೇದಾರ್, ಮರೆಪ್ಪ ಹೈಯಾಳಕರ್ ರವರು ತಾಲೂಕ ದಂಡಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣೆ ಅಧಿಕಾರಿಗಳಾದ ನಿತಿನ್ ಚುಕ್ಕಿ ಹಾಗೂ ತಾಲೂಕ ದಂಡಾಧಿಕಾರಿ ಉಮಾಕಾಂತ ಹಳೆಯವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ಶ್ರೀ ಬಲಭೀಮೇಶ್ವರ ಭೀಮರಾಯನ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ