ಯಾದಗಿರಿ ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ನಾಮಪತ್ರ ಸಲ್ಲಿಸಿದರು.
ರಾಜಕೀಯ ವಿದ್ಯಮಾನಗಳಲ್ಲಿ . ಬಿಜೆಪಿ ಪಕ್ಷದ ಟಿಕೆಟ್ ಸಿಗದ ಕಾರಣ ಗುರು ಪಾಟೀಲ್ ಶಿರವಾಳ ಅವರು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಅಭಿಮಾನಿಗಳೊಂದಿಗೆ ಹಾಗೂ ಮಾಜಿ ವಿಧಾನಪರಿಷತ್ತಿನ ಸದಸ್ಯರಾದ ಅಮತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಲಾಲನಸಾಬ್ ಖುರೇಶಿ, ರಾಮಚಂದ್ರ ಕಾಶಿರಾಜ ವನದುರ್ಗ, ರವರು ತಾಲೂಕ ದಂಡಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣೆ ಅಧಿಕಾರಿಗಳಾದ ನಿತಿನ್ ಚುಕ್ಕಿ ಹಾಗೂ ತಾಲೂಕ ದಂಡಾಧಿಕಾರಿ ಉಮಾಕಾಂತ ಹಳೆಯವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ಸ್ವಗ್ರಾಮ ಶಿರವಾಳ ಆರಾಧ್ಯ ದೈವ ಸಿಂದ್ದಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ



















