ಉತ್ತರ ಕನ್ನಡ/ಮುಂಡಗೋಡ:ದಿನಾಂಕ 10/04/2023 ರಂದು “ತಾಲೂಕ ಆಸ್ಪತ್ರೆಯ ಲಂಚಾವತಾರ”ಕರುನಾಡ ಕಂದ ಜಾಲತಾಣದ ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮುಂಡಗೋಡ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ವಿರುದ್ಧ ಮಂಗಳವಾರ ಇಲಾಖಾ ತನಿಖೆಯನ್ನು ಕೈಗೊಂಡು,ಪ್ರಾಥಮಿಕ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.ಇದೇ ವೇಳೆ ಆಸ್ಪತ್ರೆಗೆ ಬಂದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲೂಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರ ಬಳಿ ಘಟನೆಯ ಕುರಿತು ಮಾಹಿತಿ ಕಲೆಹಾಕಿದರು.
ಮತ್ತೊಂದು ಅಕ್ರಮ/ಅವ್ಯವಸ್ಥೆ ಬಯಲಿಗೆ:ತಾಲೂಕ ಆಸ್ಪತ್ರೆ ಮುಂಡಗೋಡದಲ್ಲಿ ಕಳೆದ 5 ತಿಂಗಳಿನಿಂದ ಬಳಕೆ ಮಾಡಲಾಗದೆ ಇಟ್ಟಿದ್ದ LFA ಮತ್ತು RFA ಪರೀಕ್ಷೆ ನಡೆಸುವ ಆಧುನಿಕ ಪರೀಕ್ಷಕವನ್ನು ಬಳಕೆ ಮಾಡದೇ ರೋಗಿಗಳಿಗೆ ಖಾಸಗಿ ಲ್ಯಾಬ್ ಗಳಲ್ಲಿ ಟೆಸ್ಟ್ ಮಾಡಿಸಿಕೊಂಡು ಬರುವಂತೆ ನೋಡಿಕೊಳ್ಳುತ್ತಿದ್ದ ಬಗ್ಗೆ ವಿವರಣೆ ಪಡೆದ ಅಧಿಕಾರಿಗಳ ತಂಡ ಕೂಡಲೇ ಟೆಸ್ಟಿಂಗ್ ಮೆಷಿನ್ ಗಳನ್ನು ಇನ್ಸ್ಟಾಲ್ ಮಾಡಿ ಬಳಕೆ ಮಾಡುವಂತೆ ನಿರ್ದೇಶನ ನೀಡಿತು ಹಾಗೂ NHM ಇಲಾಖೆಯ ಸಿಬ್ಬಂದಿಯಾಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಬೇಕಾದ ರಕ್ತ ತಪಾಸಣೆಗೆ 1,800 RS ಪಡೆದ ಜಗದೀಶ್ ಕಾನಡೆ ಎಂಬ ಲ್ಯಾಬ್ ಟೆಕ್ನಿಷಿಯನ್ ಗೆ ಅಧಿಕಾರಿಗಳು ಛೀಮಾರಿ ಹಾಕಿ, ಇನ್ನೊಮ್ಮೆ ಈ ರೀತಿಯ ಘಟನೆ ಮರುಕಳಿಸಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಪರಿಶೀಲನೆ ವೇಳೆ ವಾಸ್ತವ ಸ್ಥಿತಿ ಅರಿತ ಅಧಿಕಾರಿಗಳ ತಂಡ ಸೂಕ್ತ ಕ್ರಮಕೈಗೊಳ್ಳುವುದಾಗಿ ಕರುನಾಡ ಕಂದ ಪತ್ರಿಕೆಗೆ ಮಾಹಿತಿ ನೀಡಿದರು.
-ಕರುನಾಡ ಕಂದ
4 Responses
Good
Channahalli thanda harakanahalu post harapanahalli tq vijayanagara dist pin code . 583131
Kariyappakkari @gmail com,,,,, address,,, ಚಿಕ್ಕಬೆನ್ನೂರು ಪೋಸ್ಟ್,,,,,, ಚೀಳಂಗಿ ಗ್ರಾಮ,,, ಗಂಟೆ ಆಂಜನೇಯ ಟೆಂಪಲ್ ಹತ್ತಿರ
Hai