ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ ಚಂದ್ರು ಲಮಾಣಿಯವರು ಇಂದು ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಪರವಾಗಿ ಘೋಷಣೆಗಳನ್ನು ಕೂಗುತ್ತಾ 60000 ಅಂತರದ ಮತಗಳೊಂದಿಗೆ ಗೆಲ್ಲುಸುತ್ತೇವೆಂದು ಅಭಯ ನೀಡಿದರು. ಜೆ ಸಿ ಬಿ ಮೂಲಕ ನಾಯಕರಿಗೆ ಪುಷ್ಪ ಮಳೆಯನ್ನು ಸುರುಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಭಿಮಾನಿಗಳತ್ತ ಕೈ ಬೀಸಿ ನಗೆ ಬೀರಿದರು.
-ಸತೀಶ್ ಗೋಡಿ