ರಾಯಚೂರು/ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸೈಯದ್ ಪೀರ್ ಪಾಷಾ ಖಾಜಿ ರೌಡಕುಂದ ಇವರ ವತಿಯಿಂದ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಹೊಸ ವಸ್ತ್ರಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ಮತ್ತು ಮಹಾಪ್ರಸಾದ ಸೇವೆ ಮಾಡಿಸುವುದರ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸಯ್ಯದ್ ಪೀರ್ ಪಾಷಾ ಖಾಜಿ ಮಾತನಾಡಿ ಅಲ್ಲಾಹನು ನಮಗೆಲ್ಲಾ ಕೊಟ್ಟಿದ್ದಾನೆ ಆದರೆ ಆತನ ಪ್ರೀತಿಗೆ ಪಾತ್ರರಾಗಬೇಕಾದರೆ ಇಂತಹ ನೊಂದು ಬೆಂದ ಜೀವಿಗಳಿಗೆ ನಮ್ಮ ಕೈಯಿಂದಾದಂತಹ ಸಹಾಯ ಮಾಡಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ನಾನು ನನ್ನದು ಎನ್ನುವ ಪ್ರಪಂಚದಲ್ಲಿ ನಾವು ಕೊನೆಗಳಿಗೆಯಲ್ಲಿ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ ಇಂತಹ ಜ್ಞಾನವುಳ್ಳ ಮಾನವ ಜೀವಿಗಳ ಜನ್ಮ ಸಾರ್ಥಕವಾಗಬೇಕಾದರೆ ನಮ್ಮ ಸಿಂಧನೂರಿನ ಕರುಣಾಮಯಿ ಕಾರುಣ್ಯ ಆಶ್ರಮದಂತಹ ಕುಟುಂಬಗಳಿಗೆ ಸಹಾಯ ಮಾಡುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಾಗುತ್ತದೆ. ನಾವುಗಳು ಕೊಟ್ಟು ಹೋಗಬಹುದು ಅಷ್ಟೇ ಆದರೆ ನಿರಂತರ ಸೇವೆ ಮಾಡುವ ಇಲ್ಲಿನ ಸಿಬ್ಬಂದಿಗಳು ದೇವರ ಸಮಾನರಾಗಿದ್ದಾರೆ ಎಂದು ಮಾತನಾಡಿದರು ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ. ಹಿರೇಮಠ ಮಾತನಾಡಿ ನೆರೆಮನೆಯಾತ ಉಪವಾಸವಿದ್ದಾಗ ನೀನು ಊಟ ಮಾಡಿದರೆ ಅಲ್ಲಾಹನ ದೃಷ್ಟಿಯಲ್ಲಿ ನೀನು ಸೈತಾನ ಎಂದು ಪವಿತ್ರ ಗ್ರಂಥ ಕುರಾನ್ ಹೇಳುತ್ತದೆ ಇಂತಹ ಸಂದೇಶವನ್ನು ಪಾಲಿಸುತ್ತಿರುವ ಸಯ್ಯದ್ ಪೀರ್ ಪಾಷಾ ಖಾಜಿ ಇಂತಹ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಪ್ರತಿ ವರ್ಷವೂ ಕೂಡ ವಿಶೇಷ ರೂಪದಲ್ಲಿ ರಂಜಾನ್ ಆಚರಣೆ ಮಾಡುತ್ತಿರುವ ಇವರ ಕುಟುಂಬಕ್ಕೆ ಅಲ್ಲಾಹನ ಕೃಪೆ ಇದೆ ನಮ್ಮ ಕಾರುಣ್ಯ ಕುಟುಂಬಕ್ಕೆ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಾ ಕಾರುಣ್ಯ ಕುಟುಂಬದ ಕರುಣಾಮಯಿಯಾಗಿದ್ದಾರೆ ಎಂದು ಮಾತನಾಡಿದರು ನಂತರ ಸಯ್ಯದ್ ಪೀರ್ ಪಾಷಾ ಖಾಜಿ ರೌಡಕುಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಧ್ಯಕ್ಷರಾದ ವೀರೇಶ ಯಡಿಯೂರು ಮಠ ಆಡಳಿತ ಅಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಸಯ್ಯದ್ ನವೀನ್ ಖಾಜಿ. ಸಯ್ಯದ್ ಫೈಜಾನ್ ಖಾಜಿ. ಕರೀಮ್. ಎಂ. ಖಲೀಲ್. ಖಾಜಾ ಹುಸೇನ್. ಬಂದೇನವಾಜ್ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ. ಇಂದೂಮತಿ. ಮರಿಯಪ್ಪ. ಶರಣು ಸ್ವಾಮಿ. ಬಸವರಾಜ ಸ್ವಾಮಿ ಹಚೋಳ್ಳಿ. ಶರಣಮ್ಮ ಅನೇಕರು ಉಪಸ್ಥಿತರಿದ್ದರು
ವರದಿ// ವೆಂಕಟೇಶ.H. ಬೂತಲದಿನ್ನಿ
ರಾಯಚೂರು// ಎ.21.ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸೈಯದ್ ಪೀರ್ ಪಾಷಾ ಖಾಜಿ ರೌಡಕುಂದ ಇವರ ವತಿಯಿಂದ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಹೊಸ ವಸ್ತ್ರಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ಮತ್ತು ಮಹಾಪ್ರಸಾದ ಸೇವೆ ಮಾಡಿಸುವುದರ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸಯ್ಯದ್ ಪೀರ್ ಪಾಷಾ ಖಾಜಿ ಮಾತನಾಡಿ ಅಲ್ಲಾಹನು ನಮಗೆಲ್ಲಾ ಕೊಟ್ಟಿದ್ದಾನೆ ಆದರೆ ಆತನ ಪ್ರೀತಿಗೆ ಪಾತ್ರರಾಗಬೇಕಾದರೆ ಇಂತಹ ನೊಂದು ಬೆಂದ ಜೀವಿಗಳಿಗೆ ನಮ್ಮ ಕೈಯಿಂದಾದಂತಹ ಸಹಾಯ ಮಾಡಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ನಾನು ನನ್ನದು ಎನ್ನುವ ಪ್ರಪಂಚದಲ್ಲಿ ನಾವು ಕೊನೆಗಳಿಗೆ ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ ಇಂತಹ ಜ್ಞಾನವುಳ್ಳ ಮಾನವ ಜೀವಿಗಳ ಜನ್ಮ ಸಾರ್ಥಕವಾಗಬೇಕಾದರೆ ನಮ್ಮ ಸಿಂಧನೂರಿನ ಕರುಣಾಮಯಿ ಕಾರುಣ್ಯ ಆಶ್ರಮದಂತಹ ಕುಟುಂಬಗಳಿಗೆ ಸಹಾಯ ಮಾಡುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವಾಗುತ್ತದೆ. ನಾವುಗಳು ಕೊಟ್ಟು ಹೋಗಬಹುದು ಅಷ್ಟೇ ಆದರೆ ನಿರಂತರ ಸೇವೆ ಮಾಡುವ ಇಲ್ಲಿನ ಸಿಬ್ಬಂದಿಗಳು ದೇವರ ಸಮಾನರಾಗಿದ್ದಾರೆ ಎಂದು ಮಾತನಾಡಿದರು. ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ. ಹಿರೇಮಠ ಮಾತನಾಡಿ ನೆರೆಮನೆಯಾತ ಉಪವಾಸವಿದ್ದಾಗ ನೀನು ಊಟ ಮಾಡಿದರೆ ಅಲ್ಲಾಹನ ದೃಷ್ಟಿಯಲ್ಲಿ ನೀನು ಸೈತಾನ ಎಂದು ಪವಿತ್ರ ಗ್ರಂಥ ಕುರಾನ್ ಹೇಳುತ್ತದೆ. ಇಂತಹ ಸಂದೇಶವನ್ನು ಪಾಲಿಸುತ್ತಿರುವ ಸಯ್ಯದ್ ಪೀರ್ ಪಾಷಾ ಖಾಜಿ ಇಂತಹ ಪವಿತ್ರ ರಂಜಾನ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ಕೂಡ ವಿಶೇಷ ರೂಪದಲ್ಲಿ ರಂಜಾನ್ ಆಚರಣೆ ಮಾಡುತ್ತಿರುವ ಇವರ ಕುಟುಂಬಕ್ಕೆ ಅಲ್ಲಾಹನ ಕೃಪೆ ಇದೆ ನಮ್ಮ ಕಾರುಣ್ಯ ಕುಟುಂಬಕ್ಕೆ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಾ ಕಾರುಣ್ಯ ಕುಟುಂಬದ ಕರುಣಾಮಯಿ ಯಾಗಿದ್ದಾರೆ ಎಂದು ಮಾತನಾಡಿದರು. ನಂತರ ಸಯ್ಯದ್ ಪೀರ್ ಪಾಷಾ ಖಾಜಿ ರೌಡಕುಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಧ್ಯಕ್ಷರಾದ ವೀರೇಶ ಯಡಿಯೂರು ಮಠ ಆಡಳಿತ ಅಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಸಯ್ಯದ್ ನವೀನ್ ಖಾಜಿ. ಸಯ್ಯದ್ ಫೈಜಾನ್ ಖಾಜಿ. ಕರೀಮ್. ಎಂ. ಖಲೀಲ್. ಖಾಜಾ ಹುಸೇನ್. ಬಂದೇನವಾಜ್ ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ. ಇಂದೂಮತಿ. ಮರಿಯಪ್ಪ. ಶರಣು ಸ್ವಾಮಿ. ಬಸವರಾಜ ಸ್ವಾಮಿ ಹಚೋಳ್ಳಿ. ಶರಣಮ್ಮ ಅನೇಕರು ಉಪಸ್ಥಿತರಿದ್ದರು
ವರದಿ// ವೆಂಕಟೇಶ.H. ಬೂತಲದಿನ್ನಿ