ಬೀದರ್:ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಅಡಿಯಲ್ಲಿ ಗ್ರಾಮೀಣ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಊಟ,ವಸತಿ,ಶಿಕ್ಷಣ ನೀಡುತ್ತಿರುವ ಬೀದರ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜು ಕಮಠಾಣದ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಶೇ.100% ರಷ್ಟು ಫಲಿತಾಂಶ ಬಂದಿರುವುದು ಮಕ್ಕಳ ಸಾಧನೆಗೆ ಹಾಗೂ ಸಿಬ್ಬಂದಿಗಳ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಸತಿ ಕಾಲೇಜಿನ ಪ್ರಾಂಶುಪಾಲರಾದ ರವೀಂದ್ರ ಚಟ್ನಳ್ಳಿ ತಿಳಿಸಿದ್ದಾರೆ.
ಪರೀಕ್ಷೆ ಬರೆದ 64 ಮಕ್ಕಳಲ್ಲಿ 16 ಜನ ಅಗ್ರಶ್ರೇಣಿಯಲ್ಲಿ 45 ಜನ ಪ್ರಥಮ ದರ್ಜೆಯಲ್ಲಿ ಮತ್ತು 03 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100% ರಷ್ಟು ಫಲಿತಾಂಶ ತಂದಿರುತ್ತಾರೆ ಅವರಲ್ಲಿ ಕು.ಸಂಜನಾ ತಂದೆ ಲಕ್ಷಣ ಮತ್ತು ಸ್ನೇಹಾ ತಂದೆ ಸೂರ್ಯಕಾಂತ ಇಬ್ಬರು ಶೇ.91.33 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಧನರಾಜ ತಂದೆ ವಿಠಲ್ ಶೇ. 91.17 ಹಾಗೂ ಸುಹಾಸಿನಿ ತಂದೆ ಇಸ್ಮಾಯಿಲ್ ಶೇ. 90.33 ರಷ್ಟು ಅಂಕ ಪಡೆದು ಕಾಲೇಜಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ ಮಕ್ಕಳ ಸಾಧನೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಕರಾದ ಶ್ರೀ ಗಿರೀಶ್ ರಂಜೋಳ್ಕರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಚಂದ್ರಕಾಂತ ಶಹಬಾದಕರ್, ಜಿಲ್ಲಾ ಸಮನ್ವಯಾಧಿಕಾರಿಗಳಾದ ಶ್ರೀ ಶರಣಪ್ಪ ಬಿರಾದರ,ಪ್ರಾಂಶುಪಾಲರಾದ ಶ್ರೀ ರವೀಂದ್ರ ಎಸ್. ಚಟ್ನಳ್ಳಿ,ವಸತಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ ಮಕ್ಕಳಿಗೆ ಅಭಿನಂದಿಸಿದರು.
-ಸಾಗರ ಪಡಸಾಲೆ