ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ:ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ/ಇಂಡಿ:ಎಂ.ಎಲ್.ಎ,ಎಂ.ಪಿ ಮಹತ್ವದಲ್ಲ ಸಾರ್ವಜನಿಕ ರಂಗದಲ್ಲಿ ನಾವು ಇರುವ ದಿನಗಳಲ್ಲಿ ಸರ್ವರೊಂದಿಗೆ ಪ್ರೀತಿ,ವಿಶ್ವಾಸದೊಂದಿಗೆ ಇಡೀ ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು ಎಂ.ಎಲ್.ಎ, .ಎಂ.ಪಿ ರಾಜಕಾರಣ ಮಹತ್ವದಲ್ಲ ಮನುಷ್ಯತ್ವ ಮುಖ್ಯ ಸಣ್ಣ ವಿಚಾರಗಳಿಂದ ರಾಜಕಾರಣ ಮಾಡಿಲ್ಲ ಮತಕ್ಷೇತ್ರದಲ್ಲಿ ಶಾಂತಿ,ನೆಮ್ಮದಿ ಪ್ರೀತಿಯಿಂದ ಅತ್ಯಂತ ಕಟ್ಟ ಕಡೆಯ ವ್ಯಕ್ತಿ ನೆಮ್ಮದಿಯಿಂದ ಬದುಕಲಿ ಎಂಬ ಉದ್ದೇಶವಿಟ್ಟು ರಾಜಕಾರಣ ಮಾಡಿರುವೆ.

ಮತಕ್ಷೇತ್ರದಲ್ಲಿ ನೆಮ್ಮದಿ ಶಾಂತಿಯಿಂದ ಇರಬೇಕಾದರೆ ಹೆಚ್ಚಿನ ಮತಗಳಆಂತರದಿಂದ ಮಾಡಬೇಕು.

ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದೇನೆ ನನಗೆ ಮತಕೇಳುವ ನೈತಿಕತೆ ಇದೆ 5 ವರ್ಷ ಪರ್ಯಂತರ ದುಡಿದಿರುವ ಕೂಲಿ ಕೂಡಿ ನೀವು ಕೂಲಿ ಕೊಡುವ ನಂಬಿಕೆ ನನಗಿದೆ ಆದರೆ ಅಭೂತ ಪೂರ್ವ ಬೆಂಬಲದಿಂದ ಆಯ್ಕೆ ಮಾಡಿ,

ಇಂಡಿ ತಾಲೂಕು ಎಂದಾಕ್ಷಣ ಕ್ರೀಮಿನಲ್ ಚೆಕ್ ಪೋಸ್ಟ್ ಇದು ಒಂದು ದಂಧೆಯಾಗಿತ್ತು ಇದನ್ನು ಹೋಗಲಾಡಿಸಲು ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹತ್ತಿರವ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಿ ಶೈಕ್ಷಣಿಕ ಕಾಶಿ ಕಂಗೋಳಿಸುವಂತೆ ಮಾಡಿರುವೆ ಇಂಡಿ ಈ ಹಿಂದೆ ಕ್ರೀಮಿನಲ್ ಏರಿಯಾಎನ್ನುವಂತಾಗಿತ್ತು, ಈ ಭಾಗದಲ್ಲಿ ಅನೇಕ ಸಂತ ಮಹಾಂತರು,ಶರಣರು,ಸಾಹಿತ್ಯ ಕ್ಷೇತ್ರ ಗೇಳೆಯರಾದ ಮಧುರಚೆನ್ನರು ಸಿಂಪಿಲಿಂಗಣ್ಣಾಧೂಲಾಸಾಹೇಬ ಈ ಭಾಗವನ್ನು ಪಾವನಗೊಳಿಸಿದ್ದಾರೆ. ಕ್ರಿಮಿನಲ್ ಹೆಸರು ಅಳುಕಿಸಿ ಲಿಂಬೆ ನಾಡು ಹೃದಯವಂತರ ಬೀಡು ಎಂದು ಬಿಂಬಿಸಿದ್ದೇನೆ.

ಮುಂಬರುವ ದಿನಗಳಲ್ಲಿ ನಮ್ಮದೆ ಸರಕಾರ ಅಧಿಕಾರಕ್ಕೆ ಬರುತ್ತದೆ ಇಂಡಿ ಮತಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಮಾಡಿ ರೈತರ ಬದುಕು ಹಸನಾಗಿಸುತ್ತೇನೆ. ಇಂಡಿ ಸರ್ವವಿಧದಲ್ಲಿ ಅಭಿವೃದ್ಧಿಯಾಗಿದೆ ಒಂದು ಜಿಲ್ಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯ ತಂದಿರುವೆ ಮುಂಬರುವ ದಿನಗಳಲ್ಲಿ ಬದ್ಧತೆಯಿಂದ ಜಿಲ್ಲೆ ಮಾಡುತ್ತೇನೆ. ದುಡಿದವರಿಗೆ ಬೆನ್ನು ಥಡಿಸಿ ಆರ್ಶೀವಾದ ಮಾಡಿ ನೀವು ಬೆನ್ನು ಥಪ್ಪಡಿಸುವರಿ ಎಂಬುದು ಸತ್ಯ ಆದರೆ ಅಭೂತ ಪೂರ್ವಮತಗಳ ಅಂತರದಿಂದ ಆರ್ಶೀ ವಾದ ಮಾಡಬೇಕು ಎಂದರು.

ಸೋಮಯ್ಯಾ
ಚಿಕ್ಕಪಟ್ಟ ದಿವ್ಯಸಾನಿಧ್ಯವಹಿಸಿದರು, ಬದ್ರಯ್ಯಾ ಚಿಕ್ಕಪಟ್ಟಿ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ಗುಪ್ಪ ಜೋತಗೊಂಡ, ಎಂ.ಆರ್ ಪಾಟೀಲ, ಮಹಾದೇವ ಗಡ್ಡದ, ಬಾಬುಸಾಹುಕಾರ ಮೇತ್ರಿ, ಅನಂದಗೌಡ, ದೇಸಾಯಿ,ಭೀಮುಸಾಹುಕಾರ ಬಸನಾಳ,ಜಟ್ಟೆಪ್ಪ ರವಳಿ,ಮಂಜುನಾಥ ಕಾಮಗೊಂಡ,ಪ್ರಶಾಂತ ಕಾಳೆ,ಧರ್ಮರಾಜ ವಾಲೀಕಾರ,ಜಾವಿದ ಮೋಮಿನ್,ಶ್ರೀಕಾಂತ ಕೂಡಿಗನೂರ,ಅಪ್ಪಣ್ಣಾ ಕಲ್ಲೂರ,ಸತೀಶ ಕುಂಬಾರ ಹುಚ್ಚಪ್ಪ ತಳವಾರ,ಸಂತೋಷ ಪರರೇನವ‌ ಬಾಬು ಗುಡಮಿ ವೇದಿಕೆಯಲ್ಲಿದ್ದರು.
ಅನೇಕ ಸಾಲೋಟಿಗಿ ಗ್ರಾಮಸ್ಥರು ಕಾಂಗ್ರೆಸ್ ಸೇರ್ಪಡೆದರು,
ಭೀಮರಾಯ ಭೂವಿ,ಶಾಂತಯ್ಯಾ ಹಿರೇಪಟ್ಟ, ಸೋಮು ಚೆನ್ನಗೊಂಡ ಮಲ್ಲು ಚೆನ್ನಗೊಂಡ, ಅಪ್ಪು, ಚಾನಕವಟೆ ಪ್ರಭು ಚಾನಕವಟೆ,ಮಲ್ಲು ಕರಾಳ,ಅಪ್ಪಾ ಪಡಶೆಟ್ಟಿ,ಸಂತೋಷ ಸದಲಾಪೂರ,ಸೋಮನಾಥ ಧನ್ನಿಂಗ ಸೇರಿದಂತೆ ಅನೇಕರು ಕಾಂಗ್ರೆಸ್‌ ಪಕ್ಷ ಸೇರಿದರು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ