ಕಲಬುರ್ಗಿ:ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದ ನಿವಾಸಿ ಸಿದ್ದು ಅಲಿಯಾಸ್ ಶಿವಪ್ರಸಾದ ತಂದೆ ಶಿವುಕುಮಾರ (26) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಪಟ್ಟಣದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಶಿವಪ್ರಸಾದ ನಿನ್ನೆ ರಾತ್ರಿ ವಸತಿ ನಿಲಯದಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿಲ್ಲ.
ಸುದ್ದಿ ತಿಳಿದ ಕೂಡಲೇ ಸಿಪಿಐ ಭೀಮನಗೌಡ, ಪಿಏಸ್ಐ ಶಿವರಾಜ ಪಾಟೀಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಪ್ರಕರಣವು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದು. ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಶಾಸಕ ಅಜೇಯ್ ಸಿಂಗ್ ಭೇಟಿ ನೀಡಿದರು ವಸತಿ ನಿಲಯದಲ್ಲಿ ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದ ಡಾ||ಅಜೇಯ್ ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ,ಗುರು ಸುಬೇದಾರ್,ರವಿ ಕೋಳಕಾರ,ಬಿಜೆಪಿಯ ಮುಖಂಡರಾದ ಮಹೇಶ್ ಪಾಟೀಲ್ ರದ್ದೇವಾಡಗಿ, ಅನೀಲ ದೊಡ್ಡಮನಿ,ಶಿವಲಿಂಗಪ್ಪ ಗೌಡ ಸ್ಥಳಕ್ಕೆ ಭೇಟಿ ನೀಡಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ