ಬೀದರ್:ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 99 ರಷ್ಟು ಫಲಿತಾಂಶ ಗಳಿಸಿ ಗಮನ ಸೆಳೆದಿದೆ.
ಪರೀಕ್ಷೆ ಬರೆದ 85 ವಿದ್ಯಾರ್ಥಿಗಳಲ್ಲಿ 30 ಅಗ್ರಶ್ರೇಣಿ,50 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ರಕ್ಷಿತಾ ಗಣಪತಿ ಶೇ 96,ಸಂಗಮೇಶ ರಾಜಕುಮಾರ ಶೇ 96,ಶಿವಾ ರೆಡ್ಡಿ ಗೋಪಾಲ ರೆಡ್ಡಿ ಶೇ 95,ಭಾಗ್ಯಶ್ರೀ ದಶರಥ ಶೇ 94,ನಿತೀಶಕುಮಾರ ಕಾಶೀನಾಥ ಶೇ 94, ಪಲ್ಲವಿ ವಿಠ್ಠಲ ಶೇ 94,ಮನೀಶ್ ಶೇಷಪ್ಪ ಶೇ 93,ಕೃಷ್ಣ ಅಂಬಾದಾಸ್ ಶೇ 93,ನಾಗೇಶ ಮಲ್ಲಿಕಾರ್ಜುನ ಶೇ 93,ನಿತೀಶ್ ಚಂದ್ರಕಾಂತ ಶೇ 92,ಅಜಯ ರಮೇಶ ಶೇ 92, ಸ್ನೇಹಾ ದೇವೇಂದ್ರಪ್ಪ ಶೇ 92,ರಾಧಿಕಾ ಮಾಣಿಕ ಶೇ 92, ಸಹನಾ ಶಿವರಾಜ ಶೇ 92, ಪಲ್ಲವಿ ಗುರುನಾಥ ಶೇ 92, ಪೂಜಾ ಪ್ರತಾಪಕುಮಾರ ಶೇ 91, ನಾಗೇಶ ರೇವಣಪ್ಪ ಶೇ 90, ಪಲ್ಲವಿ ಜಗನ್ನಾಥ ಶೇ 90, ಸಮೀರ್ ಖಾನ್ ನವಾಜ್ ಖಾನ್ ಶೇ 90, ಓಂಕಾರ ವಿಶ್ವನಾಥ ಶೇ 90 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಗಣಿತ ವಿಷಯದಲ್ಲಿ 18 ವಿದ್ಯಾರ್ಥಿಗಳು ಗರಿಷ್ಠ 100 ಅಂಕ ಪಡೆದಿದ್ದಾರೆ. ಪಿ.ಸಿ.ಬಿಯಲ್ಲಿ ಶೇ 99, ಭಾಷಾ ವಿಷಯದಲ್ಲಿ 99 ಮತ್ತು 98 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಗೋವಿಂದ ಡಿ. ತಾಂದಳೆ, ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ ಹಾಗೂ ಉಪನ್ಯಾಸಕರಾದ ಸಲಾಉದ್ದಿನ, ಬೀರೆಶ ಯಾತನೂರ್,ಅನಿಲ್ ಜಾಧವ್,ಆಸಿಫ್,ಸಾಗರ್ ಪಡಸಾಲೆ,ಚಂದ್ರಕಾಂತ ಝಬಾಡೆ,ಮಾಧವ ತಪಸಲೆ, ಸಂತೋಷ ಗಿರಿ,ಮಹೇಶ ಪಾಂಪಡೆ,ಗಣೇಶ ರೆಡ್ಡಿ, ಏಂಜಲ್ ಅನುಷ,ಪ್ರಾಜಕ್ತಾ,ಅಶ್ವಿನಿ,ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.