ರಾಯಚೂರು//ಏ.24 ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶ್ರೀ ಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ (ರಿ.)ಸಿಂಧನೂರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ (ರಿ.) ಇವರುಗಳ ಸಂಯುಕ್ತಾಶ್ರಯದಲ್ಲಿ “ಬಸವ ಜಯಂತಿ ಹಾಗೂ ಅಕ್ಷಯ ತೃತೀಯ” ಹಬ್ಬಗಳ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಾವ್ ನಾಡಗೌಡ್ರು ಅವರ ಪುತ್ರಿಯಾದ ಅನುಪಮಾ ನಾಡಗೌಡ್ರು ನಮ್ಮ ಸಿಂಧನೂರಿನ ಕಾರುಣ್ಯ ಪರಿವಾರದಲ್ಲಿ ಬಸವ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಬಸವಣ್ಣನವರ ಸಮಾನತೆ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಕಾರುಣ್ಯ ಎನ್ನುವ ಪರಿವಾರದೊಂದಿಗೆ ಮಾಡುತ್ತಿರುವ ಈ ಸೇವೆ ಮಾನವ ಧರ್ಮದ ಹೆಮ್ಮೆಯ ವಿಷಯವಾಗಿದೆ. ಈ ಪರಿವಾರದಲ್ಲಿ ಮಾನವ ಜೀವಿಗಳಿಗೆಲ್ಲದೆ ಆಕಳು ಕರುವಿಗೂ ಸಹ ತೋರಿಸುವ ಪ್ರೀತಿಗೆ ಬಹಳ ಸಂತೋಷವೆನಿಸುತ್ತಿದೆ ನಮ್ಮ ಕುಟುಂಬದಿಂದ ಮುಂದಿನ ದಿನಮಾನಗಳಲ್ಲೂ ಸಹ ಸಹಾಯ ಸಹಕಾರ ದೊರೆಯುತ್ತದೆ ಇಂದು ನಮ್ಮನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ನಾಡಗೌಡ್ರು ಕುಟುಂಬದ ವತಿಯಿಂದ ಅಭಿನಂದನೆಗಳು ಮಾನವೀಯತೆಯ ಮಂದಿರವಾಗಿರುವ ಕಾರುಣ್ಯ ಆಶ್ರಮ ಸಿಂಧನೂರಿನ ಮಮತೆಯ ಮಡಿಲಾಗಿದೆ ಎಂದು ಮಾತನಾಡಿದರು. ನಂತರ ಮಾತನಾಡಿದ ಕಾರುಣ್ಯಾಶ್ರಮದ ಗೌರವಾಧ್ಯಕ್ಷರಾದ ಶರಣು ಪಾ.ಹಿರೇಮಠ ಇಂದು ನಾಡ ಗೌಡ್ರ ಕುಟುಂಬದಲ್ಲಿನ ತಾಯಂದಿರು ಕಾರುಣ್ಯ ಆಶ್ರಮದಲ್ಲಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಸವಣ್ಣನವರ ಮಾರ್ಗದರ್ಶನಗಳನ್ನು ಪಾಲಿಸುವ ರೀತಿಯನ್ನು ತೋರಿಸಿಕೊಟ್ಟಿದೆ ಬಸವಣ್ಣನವರು ಹೇಳಿದ ಹಾಗೆ ಕಾಯಕವೇ ಕೈಲಾಸ ಎನ್ನುವ ಹಾಗೆ ಜಂಗಮರಾಗಿ ನಾವು ನಮ್ಮ ಕಾಯಕ ಮಾಡುವುದರ ಜೊತೆ ದಾನವೇ ಧರ್ಮದ ಮೂಲವಯ್ಯ ಎನ್ನುವ ಅರ್ಥವನ್ನು ಶಿಷ್ಯ ವೃಂದದವರಿಗೆ ಅಭಿಯಾನದ ಮೂಲಕ ತಿಳಿಸಿ ಇದು ಸೇವೆಯಲ್ಲ ಕರ್ತವ್ಯ ಎಂದು ಆಶ್ರಮದ ನಿರ್ವಹಣೆಯನ್ನು ನಿರ್ವಹಿಸುತ್ತಿದ್ದೇವೆ ಈ ಆಶ್ರಮದ ಬಗ್ಗೆ ಶಾಸಕರು ಕಾರುಣ್ಯ ಕುಟುಂಬದ ಸದಸ್ಯರಂತೆ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಸಿಂಧನೂರಿನ ಎಲ್ಲಾ ಹಿರಿಯ ರಾಜಕಾರಣಿಗಳ ಸಹಾಯ ಸಹಕಾರದಿಂದ ಈ ಕಾರುಣ್ಯ ಕುಟುಂಬವನ್ನು ನಡೆಸುತ್ತಿದ್ದೇವೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಅನುಪಮಾ ನಾಡಗೌಡ್ರು ಶ್ವೇತಾ ಅಭಿಷೇಕ್ ನಾಡಗೌಡ್ರು ಇವರುಗಳನ್ನು ಎಲ್ಲಾ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ.ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ. ಸಲಹಾ ಸಮಿತಿಯ ಸದಸ್ಯರಾದ ಬೂದಿಬಸವ ಸ್ವಾಮಿ ಸಿಬ್ಬಂದಿಗಳಾದ ಇಂದುಮತಿ ಮರಿಯಪ್ಪ. ಹಿರೇಮಠ.ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಸಂತೋಷ ಅಂಗಡಿ. ಸದಸ್ಯರಾದ ಮೋಹನ್ ಗೌಡ್ರು. ನಾಡಗೌಡ್ರು ಕುಟುಂಬದ ಸದಸ್ಯರಾದ ಅರ್ಪಿತಾ ನಾಡಗೌಡ್ರು. ರೂಪಾ ನಾಡಗೌಡ್ರು. ಮತ್ತು ಶರಣಮ್ಮ. ವೀರಭದ್ರಗೌಡ ಗಿಣಿವಾರ. ರವಿ ಗಿಣಿವಾರ. ಶೇಖರಯ್ಯ ಸ್ವಾಮಿ. ಚನ್ನಯ್ಯಸ್ವಾಮಿ. ಗಿರಿಜಮ್ಮ ಅನೇಕರು ಪಾಲ್ಗೊಂಡಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.