ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಬಸವ ಜಯಂತಿಯ ಆಚರಣೆ ಮಾಡಲಾಯಿತು ಕಾರ್ಯಕ್ರಮದ ನಿಮಿತ್ಯ ಶರಣರ ಸಂಕಲ್ಪದಂತೆ ದಾಸೋಹ ಸೇವೆ ಏರ್ಪಡಿಸಲಾಗಿತ್ತು ಜೇರಟಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಪ್ರಸಾದ ಸೇವನೆಯ ನಂತರ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಶ್ರೀ ಮ.ನಿ. ಪ್ರ. ಮಾಂತ ಮಹಾ ಸ್ವಾಮಿಗಳು ಕಾಯಕ ಮತ್ತು ದಾಸೋಹಕ್ಕೆ ಗ್ರಾಮ ಪ್ರಸಿದ್ಧವಾಗಿದ್ದು 12 ಶತಮಾನದ ಶರಣರು ಕಲ್ಯಾಣ ಕ್ರಾಂತಿಯ ನಂತರ ಉಳವಿಗೆ ತೆರಳುವ ಮಾರ್ಗ ಮಧ್ಯ ನಮ್ಮ ಜೇರಟಗಿ ಗ್ರಾಮದಲ್ಲಿ ಶರಣರ ದಂಡು ಸಾಕಷ್ಟುದಿನ ತಂಗಿದ್ದರು. ಅದು ಇತಿಹಾಸ ಪುಟಗಳಲ್ಲಿ ಕೂಡ ದಾಖಲಾಗಿದೆ ಎಂದು ತಿಳಿಸಿದರು ಅದರಂತೆ ಗ್ರಾಮದ ಪ್ರತಿಯೊಬ್ಬರು ಯುವಕರು ಕೂಡ ಶರಣ ಪರಂಪರೆಯನ್ನು ಪಾಲಿಸಿಕೊಂಡು ಬರಬೇಕು ಹಸಿದು ಬಂದವರಿಗೆ ದಾಸೋಹ ಸೇವೆ ನಿತ್ಯ ನಿರಂತರ ಗ್ರಾಮದಲ್ಲಿ ನಡೆಯಬೇಕು ಮರಿ ಕಲ್ಯಾಣ ಎಂದು ನಾಮಾಂಕಿತವಾಗಿರುವ ನಮ್ಮ ಊರ ಪರಂಪರೆ ಎಲ್ಲರಿಗೂ ಮಾದರಿಯಾಗಬೇಕೆಂದು ಎಂದು ನುಡಿದರು ಗ್ರಾಮದ ಪ್ರಮುಖರೊಂದಿಗೆ ಗ್ರಾಮದ ಎಲ್ಲಾ ಯುವಕರು ಮತ್ತು ಗೆಳೆಯರ ಸಹಕಾರದೊಂದಿಗೆ ಮೆರವಣಿಗೆ ಅತಿ ವಿಜ್ರಂಬಣೆಯಿಂದ ಜರುಗಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.