ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಪ್ಪ ಎಸ್ ಕೆ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಗ್ರಾಮ ಅಭಿವೃದ್ಧಿ ಟ್ರಸ್ಟ್ ಕಮಿಟಿ ಉದ್ಘಾಟನಾ ಸಮಾರಂಭ ಜರುಗಿತು ಈ ಸಂದರ್ಭದಲ್ಲಿ ಶ್ರೀಯುತ ಬಿ ಯು ಬೈರಕದಾರ್ ರಾಜ್ಯಾಧ್ಯಕ್ಷರು ನ್ಯಾಷನಲ್ ಹ್ಯೂಮನ್ ರೈಟ್ಸ್ ಟ್ರಸ್ಟ್ ವೀರೇಶ್ ಬಳಗೇರ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಜನಸಾಮಾನ್ಯರ ಹಿತ ರಕ್ಷಣಾ ಸಮಿತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ನಾಗಪ್ಪ ಪಕೀರಪ್ಪ ಆಡಗಲ್ ಇವರು ಅಧ್ಯಕ್ಷತೆ ವಹಿಸಿದ್ದರು ಭೂದಾನಿಗಳಾದ ಶ್ರೀಯುತ ಶಿವಲಿಂಗಪ್ಪ ನಿ ಚವಣ್ಣವರ್ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು ಟ್ರಸ್ಟ್ ಕಮಿಟಿ ಉದ್ಘಾಟನೆ ಮಾಡಿ ಶ್ರೀ ಬಿ ಯು ಬೈರಕದಾರ ಮಾತನಾಡಿ ಟ್ರಸ್ಟ್ ಕಮಿಟಿಯಿಂದ ಸರ್ಕಾರದ ಎಲ್ಲ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು ಜ್ಯೋತಿ ಬೆಳಗಿಸಿ ಮಾತನಾಡಿದ ಶ್ರೀ ವೀರೇಶ್ ಬಳಗೇರ್ ಅವರು ಒಂದು ಸಮಿತಿಯಲ್ಲಿ ಯುವಕರು ಹೇಗಿರಬೇಕು ಯುವಕರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗ ಗ್ರಾಮ ಅಭಿವೃದ್ಧಿ ಟ್ರಸ್ಟ್ ಕಮಿಟಿಯ ಸರ್ವ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ಹಾಜರಿದ್ದರು ಶಶಿಕುಮಾರ್ ಮರಿಯಣ್ಣವರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಶ್ರೀಕಾಂತ್ ಕುರಿ ವಂದಿಸಿದರು.
