ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಿಂದ ವೆಂಕಟೇಶ್ವರ ಕ್ಯಾಂಪ್ ರಸ್ತೆಬದಿಯಲ್ಲಿ ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳು ಹುಲ್ಲಿನ ಗಾಡಿಗೆ ತಗುಲಿ ಸಸಿಗಳಿಗೆ ಕಟ್ಟಿದ ಕಟ್ಟಿಗೆಗಳು ಮುರಿದು ಬಿದ್ದು ಸುಮಾರು 20ಕ್ಕೂ ಹೆಚ್ಚು ಸಸಿಗಳು ನೆಲಕ್ಕುರುಳಿವೆ. ಇದನ್ನು ಕಂಡ ಇದೇ ರಸ್ತೆಯಲ್ಲಿ ದಿನ ಬೆಳಗ್ಗೆ ವಾಯುವಿಹಾರಕ್ಕೆ ಹೋಗುವ ಶಾಲೆಯ ಹಳೆಯ ವಿದ್ಯಾರ್ಥಿಗಳು ಇವುಗಳನ್ನು ನೋಡಿ ಸಸಿಗಳಿಗೆ ಕಲ್ಲು,ಕಟ್ಟಿಗೆಗಳನ್ನು ಕಟ್ಟಿ ನೆಟ್ಟಗೆ ನಿಲ್ಲಿಸಿ ಹಗ್ಗ ಕಟ್ಟಿ ಗಿಡಮರಗಳ ಮೇಲೆ ಮಾನವೀಯತೆ ತೋರಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಬೆಳವ ಸಿರಿ ಮೊಳಕೆಯಲಿ ಎಂಬಂತೆ ಶಾಲೆಗೆ ಹೋಗುವ ಮಕ್ಕಳು ಇಂದು ಪರಿಸರ ಸಂರಕ್ಷಣೆಯಲ್ಲಿ ತೊಡಗಿ,ರಸ್ತೆಬದಿಯ ಸಸಿಗಳನ್ನು ಕಾಪಾಡುತ್ತಿರುವ ಇಂತಹ ವಿದ್ಯಾರ್ಥಿಗಳಿಗೆ ಗ್ರಾಮದ ಸಾರ್ವಜನಿಕರು,ಪರಿಸರ ಪ್ರೇಮಿಗಳು ಪ್ರಶಂಶೆ ವ್ಯಕ್ತಪಡಿಸಿದರು.ಈ ಒಂದು ಕಾರ್ಯಕ್ಕೆ ವನಸಿರಿ ತಂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಜಯ ಅಕ್ಷಯ ರಾಕೇಶ್ ರಂಜಿತಾ ಇದ್ದರು.