ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ಸಾಹಿತಿಗಳಾದ ಶಂಕರ ದೇವರು ಹಿರೇಮಠ ಅವರ ಹೆಸರು ಕರ್ನಾಟಕ ಬುಕ್ ಆಫ್ ಅಚಿವರ್ಸ್ ರೆಕಾರ್ಡ್ ನಲ್ಲಿ ರಾಷ್ಟ್ರೀಯ ದಾಖಲೆಯಲ್ಲಿ ಹೆಸರು ಸೇರ್ಪಡೆಯಾಗಿದೆ ದಿ 23.2.2018 ರಿಂದ 19.6.2023 ರಲ್ಲಿ ನಾಲ್ಕು ವರ್ಷ 4 ತಿಂಗಳ ಕಡಿಮೆ ಅವಧಿಯಲ್ಲಿ ರಾಜ್ಯ,ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಗಳ ಮೂಲಕ ಮಕ್ಕಳಿಗಾಗಿ ಕನ್ನಡ ಭಾಷೆಯಲ್ಲಿ 50 ಮಕ್ಕಳ ಕವಿಗೋಷ್ಠಿ ಗಳನ್ನು ಆಯೋಜನೆ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇದು ಮೊದಲು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಬೆಳಸುವಲ್ಲಿ ಐವತ್ತು ಕವಿಗೋಷ್ಠಿಗಳು ಸಹಾಯಕವಾಗಿವೆ ಕಡಿಮೆ ಅವಧಿಯಲ್ಲಿ ಮಕ್ಕಳಿಗಾಗಿ 50 ಕವಿ ಗೋಷ್ಠಿಗಳನ್ನು ಏರ್ಪಡಿಸಿದ್ದು ವಿಶೇಷ ಸಾಧನೆಯಾಗಿದೆ ಸರ್ಕಾರದ ಹಾಗೂ ಯಾವುದೇ ಸಂಸ್ಥೆ ಯ ಅನುದಾನ ಪಡೆಯದೇ 50 ಮಕ್ಕಳ ಕವಿಗೋಷ್ಠಿಗಳನ್ನು ಆಯೋಜನೆ ಮಾಡಿದ ರಾಯಚೂರ ಜಿಲ್ಲೆಯ ಮಕ್ಕಳ ಸಾಹಿತ್ಯ ಪರಿಷತ್ತು ಮೊದಲ ಸಂಸ್ಥೆಯಾಗಿದೆ ಶಂಕರ ದೇವರು ಹಿರೇಮಠ ಅವರು ಈ ಕಾರ್ಯಕ್ಕಾಗಿ ಕರ್ನಾಟಕ ಬುಕ್ ಆಫ್ ಆಚಿವರ್ಸ್ ನಲ್ಲಿ ರಾಷ್ಟ್ರೀಯ ದಾಖಲೆಯಾಗಿದೆ ಎಂದು ಕರ್ನಾಟಕ ಬುಕ್ ಆಫ್ ರೆಕಾರ್ಡ್ ನ ಹೈದ್ರಾಬಾದಿನ ಸಂಯೋಜಕರಾದ ಮುಕೇಶ್ ಕುಮಾರ ಸೋಲಂಕಿ ಅವರು ತಿಳಿಸಿದ್ದಾರೆ.
ಶಂಕರ ದೇವರು ಹಿರೇಮಠ ಅವರ ಹೆಸರು ಕರ್ನಾಟಕ ಬುಕ್ ಆಫ್ ರೆಕಾರ್ಡ್ ರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿರುವುದು ಸಂತೋಷವಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಸಿ.ಎನ್ ಅಶೋಕ್,ಕಸಾಪ ದ ತಾಲೂಕು ಅಧ್ಯಕ್ಷರಾದ ಪಂಪಯ್ಯ ಸ್ವಾಮಿ ಸಾಲಿಮಠ,ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಭೀರಪ್ಪ ಶಂಬೋಜಿ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೌಲಪ್ಪ ಮಾಡಶಿರವಾರ,ಸಾಹಿತಿಗಳಾದ ಶ್ರೀಶೈಲ ಅಂಭಿಗೇರ್,ವಿರೂಪಾಕ್ಷಪ್ಪ ಫಕೀರಪೂರ,ದುರುಗಪ್ಪ ಗೂಡದೂರ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸರಕಾರಿ ನೌಕರರು, ಗೆಳೆಯರ ಬಳಗ ಅಭಿನಂದಿಸಿದ್ದಾರೆ.