ರಾಯಚೂರು:ವನಸಿರಿ ಫೌಂಡೇಶನ್ ತಾಲೂಕ ಘಟಕ ಲಿಂಗಸೂಗೂರು ಹಾಗೂ ಸ್ಥಳಿಯ ಪರಿಸರ ಪ್ರೇಮಿಗಳ ವತಿಯಿಂದ ಇಂದು ಲಿಂಗಸೂಗೂರು ನಗರದ SLV ಹಿಂದುಗಡೆ 7ನೇ ವಾರ್ಡನ ಉದ್ಯಾನವನದಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ಹಾಕುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ರಾಜಶೇಖರ ಪಾಟೀಲ ಮಾತನಾಡಿ ಪ್ರಪಂಚದಲ್ಲಿ ಈ ಪರಿಸರದೊಳಗಡೆ ಮನುಷ್ಯರೂ ಜೀವಿಸುವುದರ ಜೊತೆಗೆ ನಮ್ಮ ಜೊತೆಗಿರುವ ಪ್ರತಿಯೊಂದು ಜೀವಿಯು ಬದುಕಬೇಕು,ಪ್ರಾಣಿ ಪಕ್ಷಿಗಳು ಜೀವಿಸಬೇಕು,ಅವುಗಳನ್ನು ಬದುಕಿಸುವಲ್ಲಿ ಸಾಮಾಜಿಕ ಕಳಕಳಿ ಕೂಡ ಮನುಷ್ಯನ ಕರ್ತವ್ಯವಾಗಿರುತ್ತದೆ ಆದ್ದರಿಂದ ಮನುಷ್ಯರಾದ ನಾವುಗಳು ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡಬೇಕೆಂದು ಕರೆ ನೀಡಿದರು.
ನಂತರ ಶರಣಪ್ಪ ಅಂಗಡಿ ಪರಿಸರ ಪ್ರೇಮಿ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮತ್ತು ರಾಜಶೇಖರ ಪಾಟೀಲ ಅವರು ಎಪ್ರಿಲ್ ಕೂಲ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ ಅವರ ಈ ಪಕ್ಷಿಗಳ ಸಂಕುಲದ ಮೇಲಿನ ಕಾಳಜಿಗೆ ನಮ್ಮ ಗೆಳೆಯರ ಬಳಗದ ವತಿಯಿಂದ ಅಭಿನಂದನೆಗಳು ನಾವು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.
ನಂತರ ನಾಗರಾಜ ಮಾಂಡ್ರೆ ಪರಿಸರ ಪ್ರೇಮಿಗಳು ಮಾತನಾಡಿ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸುವುದು ಮನುಕುಲದ ಒಂದು ಅತ್ಯುನ್ನತವಾದ ಕಾರ್ಯ ಇದನ್ನು ವನಸಿರಿ ಫೌಂಡೇಶನ್ ತಂಡ ಸುಮಾರು 6 ವರ್ಷಗಳಿಂದ ಬೇಸಿಗೆಕಾಲದಲ್ಲಿ ಪಕ್ಷಿಗಳಿಗೆ ನೀರುಣಿಸುತ್ತಾ ಬಂದಿದೆ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ರಾಜಶೇಖರ ಪಾಟೀಲ,ಪರಿಸರ ಪ್ರೇಮಿಗಳಾದ ನಾಗರಾಜ ಮಾಂಡ್ರೆ,ಶರಣಪ್ಪ ಅಂಗಡಿ,ವೆಂಕೋಬ ಬುದ್ದಿನ್ನಿ, ಲಿಂಗರಾಜ ತಗ್ಗಿನಮನಿ ವಿಶ್ವೇಶ್ವರಯ್ಯ ಕಾಲೇಜು ಸಮೂಹ ಸಂಸ್ಥೆ, ಸೂಗೂರೇಶ್ವರ ಸಾಲಮನಿ ವಕೀಲರು,ಶರಣಬಸವ ದೇವದುರ್ಗ,ಜಗದೇಶ ವಾಲಿ ಕುಂಬಾರಪೇಟೆ,ಮಲ್ಲಿಕಾರ್ಜುನ ಅಂಗಡಿ,ವನಸಿರಿ ಫೌಂಡೇಶನ್ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ,ಪುಟಾಣಿಗಳಾದ ಅನನ್ಯ ಪಾಟೀಲ,ಶ್ರೇಯ ಸಾಲಮನಿ,ಅಮೃತ ವಾಲಿ,ಸಿಂಚನ,ಮುತ್ತು ಸಾಲುಮನಿ ಹಾಗೂ ಇನ್ನೂ ಹಲವಾರು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.