ಬೀದರ್:
ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ. ಕಲಾ , ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸುವರ್ತಾ ರಾಜಕುಮಾರ ಶೇ. 91.16%, ಸ್ನೇಹಲತಾ ರುದ್ರೇಶ ಶೇ87.66%, ನಿಕೀತಾ ಗಣಪತಿ ಶೇ.85.66, ಅಂಕಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪಲ್ಲವಿ ಅಂಬದಾಸ ಶೇ. 89.66, ಭಾಗ್ಯಶ್ರೀ ದಯಾನಂದ ಶೇ 89.16 ಅಂಕಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ನಾಗೇಶ್ವರಿ ಅಂಬದಾಸ ಶೇ 88.33%, ಪ್ರಿಯಾಂಕ ಬಸವರಾಜ ಶೇ 85.66%, ಸುನೀಲ ವೈಜಿನಾಥ ಶೇ 85.5 ಅಂಕಗಳೀಸಿ ಸಾಧನೆ ಗೈದಿದ್ದಾರೆ. ಒಟ್ಟು 8 ಅಗ್ರ ಶ್ರೇಣಿಯಲ್ಲಿ , ಪಾಸಾದರೆ, 67 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ , 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಆಡಳಿತ ಮಂಡಳೀಯ ಮಾರ್ಗದರ್ಶನ ಗುಣಮಟ್ಟದ ಶಿಕ್ಷಣ ಉಪನ್ಯಾಸಕರ ಬೊಧನೆ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ್ ರವರು, ಕಾರ್ಯದರ್ಶಿಗಳಾದ ಅಭಿಷೇಕ ಪಾಟೀಲ್ ರವರು,ಆಡಳಿತಾಧಿಕಾರಿಯಾದ ಶ್ರೀಮತಿ ಕಲ್ಪನಾ ಮಠಮತಿಯವರು ಮತ್ತು ಪ್ರಾಚಾರ್ಯರಾದ ಮಂಗಲಾ ಎನ್.ಎಮ್.ರವರು ಹರ್ಷ ವ್ಯಕ್ತ ಪಡಿಸುವದರೊಂದಿಗೆ ವಿದ್ಯಾರ್ಥಿಗಳನ್ನು ಗೌರವ ಸನ್ಮಾನ ಮಾಡಲಾಯಿತು ಜೊತೆಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸುಭಾಷ್ ಮಾಹಾಗಾಂವಕರ್, ಹೇಮಲತಾ ಕಂದಗೂಳೆ, ಅನಿಲ್ ಮಚಕುರೆ, ಸಾಗರ್ ಪಡಸಾಲೆ,ಪರಶುರಾಮ ಶಿಂಧೆ , ಶಿವಕುಮಾರ ಭಾವಿಕಟ್ಟಿ, ವಿರಶೆಟ್ಟಿ ಕಾಂಬಳೆ, ಪೂಜಾ ಅಮ್ದಲಪಡೆ , ಮಂಗಲಾ ಸೊಲಪೂರೆ, ಶಶಿಕಾಂತ ಹುಮನಾಬಾದೆ,ವಿರುಪಾಕ್ಷಿ ನಾಡಗೌಡ ಉಪಸ್ಥಿತರಿದ್ದರು.
ವರದಿ: ಸಾಗರ್ ಪಡಸಲೆ