ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೆತ್ತವರಿಗಾಗಿ ಬದುಕಿ ಮತ್ತಾರಿಗಲ್ಲ

ಪ್ರತಿಯೊಬ್ಬರ ಜೀವನ ಒಂದಲ್ಲ ಎರಡಲ್ಲ ಹಲವಾರು ವಿಭಿನ್ನ ರೀತಿಯಲ್ಲಿ ಸಾಗುತ್ತದೆ ಹಾಗೇ ಕೆಲವೊಬ್ಬರದು ಶ್ರೀಮಂತಿಕೆಯಿಂದ ಕೂಡಿದ್ದರೆ ಇನ್ನೂ ಕೆಲವೊಬ್ಬರದು ಮಾತ್ರ ಮಧ್ಯ ವರ್ಗದ ಬಡತನ ಹಾಗೂ ಮತ್ತೊಬ್ಬರದು ಅತೀ ಕೀಳು ಬಡತನ ಹೀಗೆ ವಿವಿಧ ರೀತಿಯಲ್ಲಿ ಸಾಗಿರುತ್ತದೆ ಆದರೇ ಇಂತಹ ವಿಭಿನ್ನ ಮಾರ್ಗದ ಜೀವನ ಶೈಲಿಯಲ್ಲಿ ಬಹು ಮುಖ್ಯವಾಗಿ ಅನಿವಾರ್ಯ ಮತ್ತು ಪ್ರತಿಯೊಬ್ಬರ ಜೀವನಕ್ಕೆ ಬೇಕಾದ ಅತ್ಯಾವಶ್ಯಕವಾದ ಒಂದು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ವಿಶೇಷ ಮಾರ್ಗ ಸುಳಿಯುತ್ತದೆ ಅದೇ ಶಿಕ್ಷಣ. ಅಂಬೇಗಾಲಿನಿಂದ ನಡೆದು,ಗೋಡೆ ಹಿಡಿದು ನಿಂತು, ಮೆಲ್ಲಗೆ ಯಾರ ಆಸರೆಯಿಲ್ಲದೇ ಒಂದೊಂದು ಹೆಜ್ಜೆ ಇಟ್ಟು ತೊದಲು ನುಡಿಯುವ ಹೊತ್ತಿಗೆ ಅಂಗನವಾಡಿ ಅಥವಾ ಬಾಲವಾಡಿ ಶಿಕ್ಷಣಕ್ಕೆ ಕಾಲಿಟ್ಟು ಮುಂದೆ ತಂದೆ ತಾಯಿ ಅಣ್ಣಾ ತಮ್ಮ,ಅಕ್ಕ ತಂಗಿಯರ ಹಾಗೂ ಹುಟ್ಟಿದ ಊರು ಹೇಳುವಂತಹ ಬುದ್ಧಿ ಮಟ್ಟಕ್ಕೆ ಹಾಗೂ ಬಲಗೈಯನ್ನು ತಲೆ ಮೇಲಿಂದ ಎಡಕಿವಿ ಹಿಡಿಯುವಂತಹ ಸಾಮರ್ಥ್ಯ ಬಂದಾಗ ಪ್ರಾಥಮಿಕ ಶಾಲೆಗೆ ದಾಖಲು ಮಾಡಿದಾಗಲೇ ನೋಡಿ ನಿಜವಾದ ಶಿಕ್ಷಣ ಶುರುವಾಗೋದು ಹೀಗೆ ಶುರುವಾದ ಶಿಕ್ಷಣ ಪ್ರಾಥಮಿಕ ಮಟ್ಟದಲ್ಲಿ ತಂದೆ ತಾಯಿ ಬಂಧು ಬಳಗದೊಂದಿಗೆ ಬೆರೆತು ಮುಂದೆ ಪ್ರೌಢ ಶಿಕ್ಷಣ ಊರ ಹೊರಗೆ ಅಂದರೇ ಊರಿಂದ ಸುಮಾರು ಕಿಲೋಮೀಟರ್ ಗಳಷ್ಟು ಆಚೆಗೆ ಹೋಗಿ ಎಲ್ಲೋ ಹಾಸ್ಟೆಲ್ಲೋ ಅಥವಾ ಬಸ್ಸಿನಲ್ಲಿ ಫ್ರೀ ಪಾಸ್ ನೊಂದಿಗೆ ಹಾಗೂ ಸೈಕಲ್ ತುಳಿದು ಹೊಸ ಹೊಸ ವಿಭಿನ್ನ ಊರಿಂದ ಬರುವ ಸ್ನೇಹಿತರ ಪರಿಚಯವಾಗಿ ಗಟ್ಟಿಯಾದ ಸ್ನೇಹ ಬಳಗದ ಸಂಭಂದ ಶುರುವಾಗುತ್ತದೆ. ಹೀಗೆ ಮೊದಲು ಮನೆಯಲ್ಲಿ ತಂದೆ ತಾಯಿಯಿಂದ ಶುರುವಾದ ಶಿಕ್ಷಣ ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮತ್ತಷ್ಟು ನೂರಾರು ಕಿಲೋಮೀಟರ್, ಮೈಲಿಗಳಷ್ಟು ದೂರ ಹೋಗಿ ತಂದೆ ತಾಯಿ ಬಂಧು ಬಳಗ ಸ್ನೇಹಿತರನ್ನು ಬಿಟ್ಟು ಕೊನೆಗೆ ಊರನ್ನೂ ಬಿಟ್ಟು ಎಲ್ಲೋ ಒಂದು ಕಡೆ ಬಹುದೊಡ್ಡ ಬದುಕಿನ ಕನಸನ್ನು ಹೊತ್ತು ಕಷ್ಟನೋ ಸುಖನೋ ಯಾವುದನ್ನೂ ಯಾರೊಂದಿಗೂ ಹೇಳಿಕೊಳ್ಳದೇ ಶಿಕ್ಷಣ ಪಡೆಯೋದೊಂದೇ ನಮ್ಮ ಮೂಲ ಉದ್ದೇಶ ಅಂತ ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡದೇ ಬಹು ಕಠಿಣ ಪರಿಸ್ಥಿತಿಯ ಜೀವನವನ್ನು ನಡೆಸುತ್ತಾ ಹಾಸ್ಟೆಲ್ ನಲ್ಲಿ ವಾಸವಾಗಿರುವಾಗ ಮತ್ತೊಮ್ಮೆ ಹೊಸ ಹೊಸ ಸ್ನೇಹಿತರ ಗೆಳೆತನ ಮತ್ತಷ್ಟು ಗಟ್ಟಿಗೊಳ್ಳುತ್ತದೆ.
ಹೀಗೆ ಸಾಗಿದ ಬದುಕು ಪಿಯುಸಿ ಮುಗಿತ್ತದೆ ಕೆಲವರು ಬೇರೆ ಬೇರೆ ವಿಜ್ಞಾನ ತಂತ್ರಜ್ಞಾನ ಕಲಾ ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್ ಕೋರ್ಸ್ ಗಳಿಗೆ ಪ್ರವೇಶ ಪಡೆದು ಮತ್ತೆಲ್ಲೋ ದೂರದಲ್ಲಿ ಶಿಕ್ಷಣ ಪಡೆಯಲು ಹೋಗಿ ಸೇರಿಕೊಳ್ಳುತ್ತಾರೆ. ನಂತರ ಪದವಿ, ಸ್ನಾತಕೋತ್ತರ ಪದವಿ,ಪಿ.ಎಚ್.ಡಿ,ತತ್ವಶಾಸ್ತ್ರ ಹೀಗೆ ಅನೇಕ ಉನ್ನತ ಶಿಕ್ಷಣ ಪಡೆಯುತ್ತಿದ್ದಂತೆ ಮತ್ತಷ್ಟು ಜವಾಬ್ದಾರಿ ಹೊತ್ತು ಬದುಕಬೇಕಾಗುತ್ತದೆ.

ಇಷ್ಟೊಂದು ಶಿಕ್ಷಣದ ಹಾದಿಯಲ್ಲಿ ಯಶಸ್ಸು ಪಡೆದವರು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಒಂದೆಡೆ ಬದುಕನ್ನು ಕಟ್ಟಿಕೊಂಡರೆ ಮತ್ತೊಬ್ಬರು ರಾಜಕೀಯ,ಸಾಮಾಜಿಕ ಹಾಗೂ ಸ್ವಂತ ಕೆಲಸದಲ್ಲಿ ತೊಡಗಿ ಬೇರೊಬ್ಬರ ಬದುಕಿಗೆ ಮಾಲೀಕರಾಗಿರುತ್ತಾರೆ ಕೊನೆಗೆ ಏನೂ ಸಾಧಿಸಲಾಗದೆ ಪಡೆದ ಶಿಕ್ಷಣ ಯಾವತ್ತೂ ಕೆಡುಕಾಗುವುದಿಲ್ಲ ಅಂತ ತಿಳಿದು ಊರಿಗೆ ವಾಪಸ್ಸಾಗಿ ವಯಸ್ಸಾದ ತಂದೆ ತಾಯಿಗೆ ಆಸರೆಯಾಗಲು ವಿಚಾರ ಮಾಡಿ ತಮ್ಮ ಶಿಕ್ಷಣವನ್ನು ಅಲ್ಲಿಗೆ ನಿಲ್ಲಿಸಿ ಕೃಷಿಯಲ್ಲಿ ತೊಡಗಿ ಒಡೆಯನಾದರೆ ಇನ್ನೊರ್ವರು ಏನೋ ಸಾಧಿಸಬೇಕು ಸಾಧಿಸಿಯೇ ತಿರುತ್ತೇನೆ ಎನ್ನೋ ನಂಬಿಕೆಯ ಮೇಲೆ ಎಲ್ಲೋ ಬಾಡಿಗೆ ರೂಮ್ ಮಾಡಿಕೊಂಡು, ಹಾಸ್ಟೆಲ್ ಮಾಡಿಕೊಂಡು ಹಾಗೂ ಆತ್ಮೀಯ ಗೆಳೆಯರೊಂದಿಗೆ ಹಾಸ್ಟೆಲ್ ನಲ್ಲಿ ನೋವು ನಲಿವು,ಕಷ್ಟ ಕಾರ್ಪಣ್ಯಗಳನ್ನು ಸವಿದು ವಾಸ ಮಾಡುವಂತಹ ಆ ಘಳಿಗೆ ನೆನೆದರೆ ಮನಸ್ಸಿಗೆ ಒಂದೊಂದು ತರ ಬೇಜಾರಾದರೂ ಒಂತರ ಏನೋ ಮರೆಯಲಾಗದ ಸ್ನೇಹ ಸಂಬಂಧದ ಸಹಜ ಕ್ಷಣ ಅಂತಾನೂ ಹೇಳಬಹುದು ಹೀಗೆ ಸಾಗಿದ ಬದುಕು ಅಷ್ಟೋತ್ತಿಗಾಗಲೇ ಆ ಮನುಷ್ಯ ಸರ್ಕಾರಿ, ಖಾಸಗಿ ಅಥವಾ ಸ್ವಂತ ದುಡಿಮೆ ಮತ್ತು ಹಣಗಳಿಕೆ ಇಲ್ಲದೇ ಹೋದರೂ ಕೂಡ ಅವನು ಅಷ್ಟೆಲ್ಲಾ ಪಟ್ಟ ಕಷ್ಟಗಳಿಂದ ಬದುಕಿನ ಮರ್ಮವನ್ನೇ ತಿಳಿದಿರುತ್ತಾರೆ ಮತ್ತು ಅದು ಅವರು ಸೇರಿದ ಬಳಗದ ಮೇಲೆ ಅವಲಂಬಿತವಾಗಿರುತ್ತದೆ. ಆದರೇ ಎಲ್ಲೋ ಬಾಡಿಗೆ ಮನೆ ಮಾಡಿ,ಏಕಾಂಗಿಯಾಗಿ ಯಾರ ನಂಟು ಇಲ್ಲದೇ ಬದುಕಿ ಸಾಧನೆಗೈದ ವ್ಯಕ್ತಿಗಿಂತ ಹಾಸ್ಟೆಲ್ ಒಳಗೆ ಸಾವಿರಾರು ವಿದ್ಯಾರ್ಥಿಗಳ ವಿವಿಧ ಮನಸ್ಥಿತಿ ಮತ್ತು ವಿಭಿನ್ನ ಪರಿಸ್ಥಿತಿಯ ಸಂಗಮದಲ್ಲಿ ಬದುಕಿ ಬಾಳಿದ ವ್ಯಕ್ತಿಯ ವ್ಯಕ್ತಿತ್ವ ಬಹುಮುಖ್ಯವಾಗಿರುತ್ತದೆ. ಯಾಕಂದರೆ ಸಾಮಾಜಿಕವಾಗಿ ಬೆರೆತ ಮನುಷ್ಯ ಸಮಾಜದಲ್ಲಿನ್ನ ಹಲವಾರು ಸಂಗತಿಗಳನ್ನು ಅರಿತು, ಸರಿ ತಪ್ಪುಗಳಿಗೆ ಧ್ವನಿ ಎತ್ತುವಂತಹ ಹಾಗೂ ಸಾಮಾಜಿಕ ಕಳಕಳಿ ಹಾಗೂ ಅವರಿವರೆನ್ನದೇ ಎಲ್ಲರ ಮೇಲು ಕರುಣೆ ಮನೋಭಾವವನ್ನು ಹೊಂದಲು ಸಾಧ್ಯವಾಗಿರುತ್ತದೆ ಮತ್ತು ಅಂತಹ ಮೌಲ್ಯಗಳನ್ನು ಹಾಸ್ಟೆಲ್ ಜೀವನ ಕಲಿಸಿಕೊಡುತ್ತದೆ ಅಷ್ಟೇ ಅಲ್ಲದೇ ಆ ಮೌಲ್ಯಗಳನ್ನು ಕಲಿಯೋದು ಅನಿವಾರ್ಯವೂ ಕೂಡ ಆಗಿರುತ್ತದೆ.

ಪ್ರತೀ ತಂದೆ ತಾಯಿ ಸಂಬಂಧಿಕರ ಆಸೆ ಮಾತ್ರ ಶಿಕ್ಷಣ ಪಡೆದ ಮಗ ಅಥವಾ ಮಗಳು ನೌಕರಿ ಹಿಡಿಯಲೇಬೇಕು ಅನ್ನೋದು ಆದ್ರೇ ಆ ಮಕ್ಕಳು ಏನೇ ಆಗಲಿ ಒಳ್ಳೆಯ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡು ಸಮಾಜಮುಖಿಯಾಗಿ ಬದುಕನ್ನು ಸಾಗಿಸಲಿ ಅಂತಹ ವಿಶೇಷ ಸಾಧನೆಗೆ ಶಿಕ್ಷಣವೊಂದೇ ಮೂಲಮಂತ್ರವಾಗಲಿ ಎಂದು ಹೇಳುವಂತಹ ಮನಸ್ಥಿತಿ ಬದಲಾಗಬೇಕಿದೆ ಏಕೆಂದರೆ ಶಿಕ್ಷಣ ಅನ್ನೋದು ಜೀವನದಲ್ಲಿ ಬರುವ ಒಂದು ಭಾಗವಷ್ಟೇ ಅದನ್ನು ಪಡೆದವರು ಯಾವುದೋ ಒಂದು ಕ್ಷೇತ್ರದಲ್ಲಿ ಸಾಧಿಸಿ ತಂದೆ ತಾಯಿ ಬಂಧು ಬಳಗ ಹಾಗೂ ನೆರೆಹೊರೆಯವರ ಮತ್ತು ಊರಿನ ಹೆಸರು ಘನತೆ ಗೌರವವನ್ನು ತಂದು ತನ್ನ ಬದುಕಿಗೆ ಆಸರೆಯಾಗುವ ಯಾವುದೋ ಒಂದು ದಾರಿಯಲ್ಲಿ ಸಾಗಿ ಬದುಕನ್ನು ಕಟ್ಟಿಕೊಳ್ಳುವಂತಹ ಮಹತ್ತರವಾದ ಘಟ್ಟ ತಲುಪಿದರೆ ಸಾಕು ಅವನ ಬದುಕು ಸಾರ್ಥಕವಾಗುತ್ತದೆ ಮತ್ತು ಬದುಕಲು ಅಷ್ಟೇ ಮೂಲಮಂತ್ರವಾದರೆ ಸಾಕು. ಆದ್ರೇ ಹಲವಾರು ತಂದೆ ತಾಯಿ ಹಾಗೂ ಅದೇ ವ್ಯಕ್ತಿಯ ಆಸೆ ಮಾತ್ರ ನಾನು ಏನೋ ಒಂದು ವಿಶೇಷವಾದ ನೌಕರಿ ಪಡೆಯಬೇಕು ಎಲ್ಲರಿಗಿಂತ ಮೇಲೇತ್ತರದಲ್ಲಿ ಬದುಕಬೇಕು ಅನ್ನುವಂತಹ ಬಹುದೊಡ್ಡ ನಿರ್ಧಾರಗಳನ್ನು ಹೊತ್ತು ಸಾಗುತ್ತಾರೆ ಅಂತಹ ಕನಸುಗಳನ್ನು ಕಾಣುವುದು ಮತ್ತು ಅದಕ್ಕೆ ತಕ್ಕ ಹಾಗೇ ಶ್ರಮಪಡುವುದು ಒಳ್ಳೆಯದೇ ಆದರೇ ಅಂತಹ ಕನಸುಗಳು ನನಸಾಗುವುದು ಮಾತ್ರ ಕೆಲವೇ ಕೆಲವು ಜನಗಳಿಗೆ ಮಾತ್ರ ಅಂತಹ ಕನಸುಗಳ ಹಿಂದೆ ಬಿದ್ದು ಸಾಗಬೇಕಾದರೆ ಅದಕ್ಕೆ ತಕ್ಕಂತೆ ನಾವು ಶ್ರಮವಹಿಸಬೇಕು, ಬದುಕಲು ಯಾವುದನ್ನೂ ಲೆಕ್ಕಿಸದೇ ಓದು ಒಂದೇ ಎನ್ನುವುದಾದರೆ ಅದಕ್ಕೆ ಹಣವೂಬೇಕು ಹಾಗೆಯೇ ಮುಖ್ಯವಾಗಿ ಬೇರೆ ಯಾವುದೇ ಕೌಟುಂಬಿಕ ಒತ್ತಡವಿರದೆ ಬೇರೆಲ್ಲೂ ಗಮನಹರಿಸದೆ ಅಭ್ಯಾಸ ಮಾಡಬೇಕು ಹಾಗಿದ್ದಾಗ ಮಾತ್ರ ಕಂಡ ಕನಸನ್ನು ನನಸು ಮಾಡಲು ಸಾಧ್ಯವಾಗುತ್ತದೆ ಇಲ್ಲದೇ ಹೋದರೆ ಸಿಕ್ಕ ಅವಕಾಶವನ್ನು ಪಡೆದು ಬದುಕು ಕಟ್ಟಿಕೊಳ್ಳುವುದು ಉತ್ತಮವಾಗುತ್ತದೆ ಶ್ರಮ ಪಟ್ಟು ಹಿಡಿದ ಛಲವನ್ನು ಬಿಡದೇ ಸಾಧಿಸಿ ಧನ್ಯರಾದವರೂ ಇದ್ದಾರೆ, ಮೇಲೆ ಹೇಳಿದಂತಹ ಒತ್ತಡಗಳು ಇದ್ದೂ ಹಣವಿಲ್ಲದೇ, ಯಾರ ಸಂಪರ್ಕ ಸಹಾಯವಿಲ್ಲದೆ ಮನೆಯಲ್ಲಿ ಬಹಳ ಕೆಟ್ಟ ಬಡತನದ ಪರಿಸ್ಥಿತಿಯಲ್ಲಿ ಬೆಂದು ಕೊನೆಗೆ ಬದುಕು ಕಟ್ಟಿಕೊಂಡವರೂ ಇದ್ದಾರೆ ಆದರೇ ಇಂದಿನ ಕಾಲಘಟ್ಟಕೆ ಹೋಲಿಕೆ ಮಾಡಿದರೆ ಹೊತ್ತ ಕನಸಿನ ನಡು ನಡುವೆ ಸುಳಿಯುವ ಹಾಗೂ ಒಲಿದು ಬರುವ ಅವಕಾಶಗಳನ್ನು ಹಿಡಿದು ಅದರೊಂದಿಗೆ ತಕ್ಕ ಮಟ್ಟಿಗೆ ನಮ್ಮ ಬದುಕನ್ನು ಗಟ್ಟಿಮಾಡಿಕೊಳ್ಳುವುದು ಬಹು ಉತ್ತಮವಾಗಿದೆ ಏಕೆಂದರೆ ಕುಟುಂಬದ ಪರಿಸ್ಥಿತಿಯು ಬಹಳ ಕಠಿಣತೆಯಿಂದ ಸಾಗುತ್ತಿದ್ದಾಗ ಮಾತ್ರ ಈ ದಾರಿಯನ್ನು ಹಿಡಿಯುವುದು ಸರಿಯೆನಿಸುತ್ತದೆ.

“ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ” ಎಂಬ ಗಾದೆ ಮಾತಿನಂತೆ ಜೀವನ ಅಂದಮೇಲೆ ಒಂದಲ್ಲ ಇನ್ನೊಂದು ಅವಕಾಶ ಇದ್ದೇ ಇರುತ್ತೆ ಆದ್ರೇ ಇರೋದ್ರಲ್ಲೇ ಸುಖಪಟ್ಟು ಸ್ವೀಕರಿಸಿ ಸಾಗಬೇಕು ಸಿಕ್ಕಿದ್ದೆಲ್ಲಾ ಅಮೃತವೋ ವಿಷನೋ ಅನ್ನೋದು ಅವರವರ ಭಾವಕ್ಕೆ ಸೀಮಿತವಾಗಿರುತ್ತೆ ಹಾಗೆಯೇ ಬದುಕಲು ನೂರಾರು ದಾರಿ ಇರುವಾಗ ಒಂದೇ ದಾರಿಯಲ್ಲಿ ಸಾಗಿ ಕೊನೆಗೆ ಸರಿಯಾದ ಸ್ಥಳಕ್ಕೆ ತಲುಪದೇ ಇದ್ದಾಗ ಬೇರೊಂದು ದಾರಿ ಹಿಡಿದು ನಮ್ಮ ಸ್ಥಳಕ್ಕೆ ತಲುಪುವುದು ಅನಿವಾರ್ಯವಾಗಿರುತ್ತೆ ಅದು ಬಿಟ್ಟು ನನ್ನ ಸ್ಥಳ ನನಗೆ ಸಿಗಲಿಲ್ಲ ನನ್ನ ದಾರಿ ನನಗೆ ಮುಳ್ಳಾಯಿತು ಅಂತ ಏನೇನೋ ಕೆಟ್ಟ ವಿಚಾರಗಳೊಂದಿಗೆ ನಮ್ಮ ಬದುಕನ್ನೇ ಬಲಿಕೊಟ್ಟು ಹೆತ್ತವರನ್ನು ನಂಬಿದವರನ್ನು ನಡುದಾರಿಯಲ್ಲಿ ಕೈಬಿಟ್ಟು ಹೋಗುವಂತಹ ವಿಚಾರಗಳಿಗೆ ಯಾವತ್ತೂ ತಲೆಗೊಡಬೇಡಿ ಯಾಕಂದ್ರೆ ಜೀವನ ಅಂದುಕೊಂಡಷ್ಟು ಹಾಗೂ ಸಾಧಿಸಿದಷ್ಟು ಸರಳವಲ್ಲ ಮತ್ತು ಶಿಕ್ಷಣ ಪಡೆದು ನೌಕರಿ ಗಿಟ್ಟಿಸಿಕೊಳ್ಳುವುದೊಂದೇ ಜೀವನವಲ್ಲ ಅದು ಜೀವನದ ಯಾವುದೇ ಕರಾರೂ ಅಲ್ಲ ಹಾಗಿದ್ದಮೇಲೆ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಬಹಳಷ್ಟು ದಾರಿಗಳಿವೆ ಬಹಳಷ್ಟು ಅವಕಾಶಗಳಿವೆ ಏಕೆಂದರೆ ಏನೂ ಅರಿಯದ ಏನೂ ಶಿಕ್ಷಣ ಪಡೆಯದ ನಮ್ಮೆಲ್ಲರ ತಂದೆ ತಾಯಿಗಳು ಇಲ್ಲವೇ ಅವರು ತಮ್ಮ ಬದುಕನ್ನು ಶಿಕ್ಷಣದಿಂದ ಕಟ್ಟಿಕೊಂಡವರೇ? ನೌಕರಿಯಿಂದ ಕಟ್ಟಿಕೊಂಡವರೇ? ಅವರ ಬದುಕನ್ನು ತಮ್ಮ ತಮ್ಮ ಕಾಯಕದ ಮೇಲೆ ಹೇಗೋ ಬದುಕುತ್ತೇವೆ ಎಂಬುದರ ನಂಬಿಕೆಯ ಮೇಲೆ ಬದುಕು ಕಟ್ಟಿಕೊಂಡು ನಮ್ಮ ನಿಮ್ಮೆಲ್ಲರಿಗೂ ಜೀವನ ಕೊಟ್ಟು ಅವರಂತೆ ಕಷ್ಟ ಪಟ್ಟು ಬದುಕುವ ಬದಲು ನೆರಳಲ್ಲಿ ಬದುಕಲಿ ಅನ್ನೋ ಒಂದೇ ಒಂದು ಉದ್ದೇಶಕ್ಕೆ ಶಿಕ್ಷಣಕ್ಕೆ ಕೊಡಿಸುತ್ತಾರೆ ಅದು ಬಿಟ್ರೆ ಬೇರಾವ ಕರಾರು ನಮ್ಮೆಲ್ಲರ ಮೇಲೆ ಹಾಕದೇ ಕೊನೆಗೂ ತಮ್ಮಂತಯೇ ಜೀವಿಸಿ ನಡೆದರೇ ಸಾಕು ಎಂಬಂತಹ ಸಲಹೆ ಸಹಕಾರ ಕೊಟ್ಟು ಸಾಕುತ್ತಿಲ್ಲವೇ? ಹಾಗಿದ್ದಮೇಲೆ ಯಾವುದೇ ಕನಸು ನನಸಾಗಿಲ್ಲ, ಅಂದುಕೊಂಡಿದ್ದು ನನಗೆ ಸಾಧಿಸಲಾಗಿಲ್ಲ, ಮರ್ಯಾದೆ ಪ್ರಶ್ನೆ, ಘನತೆ ಗೌರವದ ಪ್ರಶ್ನೆ, ತಂದೆ ತಾಯಿ ಸಹೋದರ ಸಹೋದರಿ, ಸ್ನೇಹಿತರಿಗೆ ಸಂಬಂಧಿಕರಿಗೆ ಏನು ಹೇಳೋದು ಹೇಗೆ ಮುಖ ತೋರಿಸುವುದು ಅಂತ ಏನೇನೋ ಹುಚ್ಚರಂತೆ ವಿಚಾರ ಮಾಡಬೇಡಿ ನಿಮ್ಮ ಹೆತ್ತವರಿಗೆ ನೀವು ಸಾಧಿಸುವುದಷ್ಟೇ ಮುಖ್ಯವಲ್ಲ ಸಾಧಿಸದಿದ್ದರೂ ಪರವಾಗಿಲ್ಲ ಕೊನೆಗೆ ತಮ್ಮ ಮಕ್ಕಳು ತಮ್ಮ ಕಣ್ಣುಮುಂದೆ ಕಾಣಬೇಕು ಎನ್ನುವಂತಹ ಮಹತ್ತರವಾದ ಕನಸನ್ನು ಕಟ್ಟಿಕೊಂಡು ದಿನವಿಡೀ ಹಗಲು ರಾತ್ರಿ ಚಿಂತಿಸುತ್ತಾರೆ. ರಾಷ್ಟ್ರಕವಿ ಕುವೆಂಪು ಹೇಳಿದಹಾಗೆ ” ಏನಾದರೂ ಆಗು ಮೊದಲು ಮಾನವನಾಗು ” ಎನ್ನುವಂತೆ ಏನೂ ಆಗಿಲ್ಲವೆಂದರೂ ಪರವಾಗಿಲ್ಲ ಮಾನವನಾಗು ಮಾನವನ ಮೌಲ್ಯಗಳನ್ನು ಅಳವಡಿಸಿಕೊಳ್ಳು, ಮಾನವನ ಭಾವನೆ ಕರುಣೆ ಸಹನೆ ಸಂಪ್ರೀತಿಯನ್ನು ಹೊಂದು ಅದನ್ನು ಎಲ್ಲರಲ್ಲಿಯೂ ಕಾಣು ಎಂಬಂತೆ ಅವರು ಯಾವತ್ತೋ ಹೇಳಿದ್ದಾರೆ ಅಂತಹ ಮಾತು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ಎಲ್ಲರ ಬದುಕು ಸಾರ್ಥಕವಾಗುತ್ತದೆ. ಮುಖ್ಯವಾಗಿ ಹೇಳೋದಾದರೆ ಯಾವುದೋ ಪರೀಕ್ಷೆಯ ಫಲಿತಾಂಶ ಕಡಿಮೆ ಆಗಿ ಯಾವುದೋ ಕೆಲಸವನ್ನೋ ಅಥವಾ ಪ್ರವೇಶವನ್ನೋ ಪಡೆಯಲು ಆಗಿಲ್ಲ ಅಥವಾ ಅಕ್ಕಪಕ್ಕದವರಿಗಿಂತ ಕಡಿಮೆ ಆಗಿದ್ದಾಗ ಅಥವಾ ಅನುತ್ತಿರ್ಣ ಆದಾಗ ಯಾವುದೇ ಅನಾಹುತಕ್ಕೆ ಕೈ ಹಾಕದೆ ಯಾವುದೇ ಕೆಟ್ಟ ವಿಚಾರಕ್ಕೆ ಹೋಗದೆ ಮಾನ ಮರ್ಯಾದೆ ಘನತೆ ಗೌರವ ನಾಚಿಕೆ ಇಂತಹ ಅಂಶಗಳನ್ನು ಆದಿನ ಯಾವತ್ತೂ ತಲೆಗೆ ಹಚ್ಚಿಕೊಂಡು ಮೂರ್ಖತನಕ್ಕೆ ಕೈ ಹಾಕಬೇಡಿ ಏಕೆಂದರೆ ಅವು ಆ ಕ್ಷಣದಲ್ಲಿ ಯಾವತ್ತೂ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವುದಿಲ್ಲ ಹೊರತು ಬದುಕನ್ನು ಸರ್ವನಾಶಪಡಿಸುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಬೇಕು. ಜೀವನದಲ್ಲಿ ಬದುಕುವುದು ಮುಖ್ಯ ಅದು ಹೇಗೆ ಬದುಕುತ್ತಿಯೋ ಹೇಗೆ ಬದುಕು ಸಾಗಿಸುತ್ತಿಯೋ ನಿನ್ನ ಮೇಲೆ ಬಿಟ್ಟ ವಿಚಾರ ಕಳೆದು ಹೋದ ಬದುಕನ್ನು ಯಾರೂ ಮರಳಿ ಕಟ್ಟಿಕೊಡುವುದಿಲ್ಲ ಯಾರೇ ಎಷ್ಟೇ ತೇಗಳಿದರೂ ಕಿವಿಗೊಡದೆ ಮುನ್ನೆಡೆಯಬೇಕು ಸಾಗೋ ದಾರಿಯಲ್ಲಿ ಕಲ್ಲು ಮುಳ್ಳು ಬರೋದು ಸಹಜ ಅವುಗಳನ್ನು ಪಕ್ಕಕ್ಕೆ ಅಥವಾ ದಾಟಿ ಸಾಗೋದು ಒಳಿತು ಇಂದಿಲ್ಲ ನಾಳೆ ಹೂವಿನ ಹಾಸಿಗೆ ಸಿಕ್ಕೇ ಸಿಗುತ್ತೆ ತಾಳ್ಮೆ ಸಹನೆ ಪ್ರೀತಿ ಮತ್ತು ನಂಬಿಕೆಯೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಏನೆಲ್ಲಾ ಪಡೆಯಬಹುದು ಹಾಗಾಗಿ ಬದುಕಿಗೆ ಶಿಕ್ಷಣಬೇಕು ಆದರೇ ಆ ಶಿಕ್ಷಣವೇ ಬದುಕಲ್ಲ ಎನ್ನುವುದನ್ನ ಅರಿತು ಹೆತ್ತವರ ಕನಸಿನೊಂದಿಗೆ ನಿಮ್ಮ ಕನಸಿನ ದಾರಿಯನ್ನು ತುಳಿದು ಸಾಗಿ ಸಿಗದಿದ್ದರೆ ಮರಳಿ ನಂಬಿ ಕುಳಿತ ಹೆತ್ತವರಿಗೆ ಪುನಃ ಮಕ್ಕಳಾಗಿ ಬನ್ನಿ ಬೇರೇನೂ ಬೇಡ.

ಹೆತ್ತವರಿಗಾಗಿ ಬದುಕಿ ಮತ್ತಾರಿಗಲ್ಲ, “ಮೂರು ಬಿಟ್ಟವರು ಊರಿಗೆ ದೊಡ್ಡವರು” ಎಂಬ ಗಾದೆ ಮಾತನ್ನು ಗಾಢವಾಗಿ ಅಧ್ಯಯನ ಮಾಡಿದಾಗ ಮಾತ್ರ ಬದುಕಲು ಸಾಧ್ಯ ನಾಚಿಕೆ ಊರಿಂದಾಚೆಗೆ ಎನ್ನುವಂತೆ ಬದುಕಬೇಕು ಅಷ್ಟಕ್ಕೂ ಸಾಧಿಸಲು ಆಗಿಲ್ಲ ಅನ್ನೋದು ಬಿಟ್ರೆ ಸಾಮಾಜಕ್ಕಂತು ಯಾವುದೇ ಕಳಂಕವಾಗಲಿ, ಸಮಾಜಘಾತುಕವಾಗಲಿ ಆಗಿರುವುದಿಲ್ಲ ಅಲ್ಲವೇ ಹಾಗಿದ್ದಾಗ ನಾವೇ ನಮ್ಮ ಬದುಕನ್ನು ಕಳೆದುಕೊಳ್ಳುವುದೇ ಸಮಾಜಕ್ಕೆ ಕಳಂಕ ಮತ್ತು ಸಮಾಜಘಾತುಕವಾಗುತ್ತದೆ ಎಂಬುದನ್ನು ನಾವು ಅರಿಯಬೇಕಿದೆ. ಪ್ರತಿಯೊಬ್ಬರಿಗೂ ಬದುಕಲು ಅವಕಾಶವಿದೆ ಮತ್ತು ಹಕ್ಕೂ ಇದೆ ಆದರೇ ಆ ಬದುಕನ್ನು ಕಳೆದುಕೊಳ್ಳಲು ಯಾವುದೇ ಹಕ್ಕೂ ಇಲ್ಲ ಅದು ಸಮಂಜಸವೂ ಅಲ್ಲ ಅದು ಅಪರಾಧವೇ ಸರಿ. ಹಾಗಾಗಿ ಯಾರ ಬದುಕನ್ನು ಯಾರಿಗಾಗಿಯೂ ಯಾವುದಕ್ಕಾಗಿಯೂ ಕಳೆದುಕೊಳ್ಳಬೇಡಿ ಜೀವನ
ಸಿಕ್ಕಿರೋದು ಒಂದೇ ಸಲ ಇದು ಮರಳಿ ಬಾರದ ಅಮೂಲ್ಯವಾದ ಕ್ಷಣ ಮರಳುವುದನ್ನು ಕಳೆದುಕೊಳ್ಳಿ ಮರಳದೇ ಇರುವುದನ್ನಲ್ಲ. ರೆಕ್ಕೆಯಿಂದ ಹಾರಿದ ಹಕ್ಕಿ ಮತ್ತೇ ಮರಳಿ ಕೆಳಗೆ ಇಳಿಯಬಹುದು ಆದರೇ ಜೀವ ಅನ್ನೋದು ರೆಕ್ಕೆ ಇರದ ಹಕ್ಕಿ ಹಾರಿದ ಮೇಲೆ ಯಾವತ್ತೂ ಮರಳಿ ಕೆಳಗೆ ಇಳಿಯದು ಎಂಬುದನ್ನು ಮನದಟ್ಟುಮಾಡಿಕೊಳ್ಳಿ. ಹಾಗಾಗಿ ಹಾಯಾಗಿರಿ ನಗುನಗುತ್ತಾ ಇರಿ, ಸಿಕ್ಕಿದ್ದನ್ನು ಸರಳವಾಗಿ ಸಾರಾಗವಾಗಿ ಸ್ವೀಕರಿಸಿ ಅನುಭವಿಸಿ ಸಾಧಿಸಿದವರಿಗೋ ಸಾಧಿಸದೇ ಇರುವ ನಿಸಾಧಕರಿಗೋ ಬದುಕಲು ಪ್ರೋತ್ಸಾಹಿಸಿ, ಅವರಿಷ್ಟದಂತೆ ಬದುಕಲು ಸಹಕರಿಸಿ ಬದುಕಲು ಇರುವ ಹಲವಾರು ದಾರಿಗಳ ಬಗ್ಗೆ ತಿಳಿಸಿ ಇಲ್ಲಿ ಕೊನೆಯವರೆಗೂ ಪ್ರೀತಿ ಸಹಬಾಳ್ವೆಯಿಂದ ಜೀವಿಸುವುದೇ ಬಹು ದೊಡ್ಡ ಸಾಧನೆ ಎನ್ನುವುದನ್ನು ಅರಿತು ಮತ್ತೊಬ್ಬರಿಗೆ ಅರಿವು ಮೂಡಿಸುವ ಮೂಲಕ ಪ್ರತಿಯೊಬ್ಬರೂ ಒಮ್ಮತದಿಂದ ಬದುಕಿ ಬದುಕಿನ ದಡ ಸೇರಬೇಕಿದೆ ಮತ್ತೊಬ್ಬರನ್ನೂ ಸೇರಿಸುವ ಮಾನವೀಯ ಕೆಲಸವಾಗಬೇಕಿದೆ.

  • ಹನುಮಂತ ದಾಸರ ಹೊಗರನಾಳ
    ಯುವ ಬರಹಗಾರರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ