ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸೂರ್ಯಕಾಂತ ನಾಗಮಾರಪಳ್ಳಿ ರವರಿಗೆ ಲಿಂಗಾಯತ ಸಮಾಜದ ಬೆಂಬಲ

ಬೀದರ ಎ-೨೮ ಬೀದರ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಸ್ಪರ್ಧಿಸಿರುವ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರಿಗೆ ಲಿಂಗಾಯತ ಸಮಾಜ ಸಂಪೂರ್ಣವಾಗಿ ಬೆಂಬಲಿಸಲು ತೀರ್ಮಾನಿಸಲಾಯಿತು.

ಈ ಕುರಿತು ನಿನ್ನೆ ನಗರದಲ್ಲಿ ನಡೆದ ಸಮಾಜದ ಮುಖಂಡರುಗಳ ಬೃಹತ ಸಭೆಯಲ್ಲಿ ಈ ಮೇಲಿನ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಮುಖಂಡರುಗಳು ಮಾತನಾಡಿ ದಿವಂಗತ ಗುರುಪಾದಪ್ಪಾ ನಾಗಮಾರಪಳ್ಳಿ ರವರು ಸಮಾಜದ ಹಿರಿಯ ಮುಖಂಡರಾಗಿದ್ದು, ಸಮಾಜದ ಎಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಸ್ಥಾಪಿಸಿರುವ ಡಿ.ಸಿ.ಸಿ. ಬ್ಯಾಂಕ, ಸಹಕಾರ ಸಕ್ಕರೆ ಕಾರ್ಖಾನೆ, ಸಹಕಾರ ಆಸ್ಪತ್ರೆಯಿಂದ ಜಿಲ್ಲೆಯ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅವರ ಸರಳ ಹೃದಯದ ಸಾಮಾಜಿಕ ಸೇವೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ವ್ಯಾಪಾರ ವಹಿವಾಟು ಬೆಳೆದಿದೆ. ಸಾಕಷ್ಟು ಜನ ವೈಯಕ್ತಿಕವಾಗಿಯು ಮೇಲೆ ಬಂದಿದ್ದಾರೆ.

ಶ್ರೀ ಗುರುಪಾದಪ್ಪ ನಾಗಮಾರಪಳ್ಳಿರವರ ಅಕಾಲಿಕ ನಿಧನದಿಂದ ಅವರ ಸುಪುತ್ರ ಶ್ರೀ ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿರವರುಗಳು ತಂದೆಯ ಜವಾಬ್ದಾರಿಗಳನ್ನು ಹೊತ್ತು ಉತ್ತಮವಾಗಿ ಸಮಾಜದೊಂದಿಗೆ ಸಂಬಂಧ ಇಟ್ಟುಕೊಂಡು ಸೇವೆಯನ್ನು ಮಾಡುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಶ್ರೀ ಸೂರ್ಯಕಾಂಗ ನಾರಮಾರಪಳ್ಳಿ ರವರು ಇದೀಗ ಬೀದರ ಉತ್ತರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಜನತಾ ದಳ (ಎಸ್) ದಿಂದ ಸ್ಪರ್ಧಿಸಿದ್ದು,ಕಳೆದ ಕೆಲ ವರ್ಷಗಳಿಂದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ವರರು ಕ್ಷೇತ್ರದಲ್ಲಿ ನಡೆಸಿರುವ ಹೋರಾಟ,ಸಾಮಾಜಿಕ ಸೇವೆ, ಜನರ ಬಗ್ಗೆ ಅವರಿಗಿರುವ ಕಳಕಳಿಯನ್ನು ಗಮನಿಸಿ ಮತ್ತು ಈಗ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರೇ ಗೆಲ್ಲುವ ಅಭ್ಯರ್ಥಿ ಎಂದು ಪರಿಗಣಿಸಿ ಲಿಂಗಾಯತ ಸಮಾಜದ ಸಂಪೂರ್ಣ ಬೆಂಬಲ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರಿಗೆ ನೀಡಲು ಸಭೆ ಒಕ್ಕೂರಲಿನಿಂದ ತೀರ್ಮಾನಿಸಿರುತ್ತದೆ ಲಿಂಗಾಯತ ಸಮಾಜದ ಬಾಂಧವರು ಒಗ್ಗಟ್ಟಾಗಿ, ಒಂದಾಗಿ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿರವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿರುತ್ತದೆ.

ಇಂದಿನ ಲಿಂಗಾಯತ ಸಮಾಜದ ಮಹತ್ವದ ಸಭೆಯಲ್ಲಿ ಖ್ಯಾತ ಉದ್ಯಮಿ ಶ್ರೀ ಬಸವರಾಜ ಧನ್ನೂರ, ಶ್ರೀ ಕುಶಾಲರಾವ ಪಾಟೀಲ ಖಾಜಾಪೂರ, ಡಾ|| ಚಂದ್ರಕಾಂತ ಗುದಗೆ, ಶ್ರೀ ವೈಜಿನಾಥ ಕಮಠಾಣೆ, ಶ್ರೀ ಶಾಮರಾವ ಭೀಮರಾವ, ಶ್ರೀ ರಮೇಶ ಪಾಟೀಲ ಸೋಲಪೂರ, ಶ್ರೀ ಚಂದ್ರಶೇಖರ ಪಾಟೀಲ ಸಪ್ನಾ, ಶ್ರೀ ಸಂತೋಷ ತಾಳಂಪಳ್ಳಿ, ಶ್ರೀ ಸುರೇಶ ಚೆನ್ನಶೆಟ್ಟಿ, ಶ್ರೀ ಕರ್ನಲ್ ಶರಣಪ್ಪಾ, ಶ್ರೀ ಪ್ರಭುರಾವ ವಸ್ಮತೆ, ಶ್ರೀ ಜೈರಾಜ ಖಂಡ್ರೆ, ವೀರಶೆಟ್ಟಿ ಮಣಗೆ, ಶ್ರೀ ಮಾಣಿಕಪ್ಪಾ ಗೋರನಾಳೆ, ಶ್ರೀ ಬಸವರಾಜ ಪಾಟೀಲ ಹಾರೂರಗೇರಿ, ಶ್ರೀ ವಿಜಯಕುಮಾರ ಆನಂದೆ, ಶ್ರೀ ಮಲ್ಲಿಕಾರ್ಜುನ ಹತ್ತಿ, ಶ್ರೀ ರಾಜೇಂದ್ರ ಜೊನ್ನಿಕೇರಿ, ಶ್ರೀ ವಿಶ್ವನಾಥ ಕಾಜಿ, ಶ್ರೀ ಸುರೇಶ ಸ್ವಾಮಿ, ಶ್ರೀ ರಾಜಶೇಖರ ಜವಳಿ, ಶ್ರೀ ವೀರಭದ್ರಪ್ಪಾ ಭುಯ್ಯಾ, ಡಾ|| ಸಿ. ಆನಂದರಾವ, ಶ್ರೀ ಸಿ.ಎಸ್. ಪಾಟೀಲ, ಡಾ|| ಸುಧಾಕರ ಭಶೆಟ್ಟಿ, ಶ್ರೀ ಬಂಡೆಪ್ಪಾ ಕೋಟೆ, ಶ್ರೀ ಶರಣಪ್ಪಾ ಮಿಠಾರೆ, ಶಾಂತಕುಮಾರ ಮುಧಾಳೆ, ಶ್ರೀ ರಾಚಪ್ಪಾ ಪೋಲಕಪಳ್ಳಿ, ಶ್ರೀ ರಾಚಪ್ಪಾ ಪಾಟೀಲ, ಶ್ರೀ ಶಾಂತಕುಮಾರ ಹಳ್ಳದಕೇರಿ, ಶ್ರೀ ಬಾಬುರಾವ ಪಸರ್ಗೆ ಸೇರಿದಂತೆ ೨೦೦ ಕ್ಕೂ ಹೆಚ್ಚು ಮುಖಂಡರುಗಳು ಪಾಲ್ಗೊಂಡಿದ್ದರು.

ಸಭೆಗೆ ಶ್ರೀ ಉಮಾಕಾಂತ ನಾಗಮಾರಪಳ್ಳಿ ಹಾಗೂ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರುಗಳಿಗೆ ಆಹ್ವಾನಿಸಿ ಲಿಂಗಾಯತ ಸಮಾಜದ ಬೆಂಬಲ ತಮ್ಮ ಜೊತೆ ಇದೆ ಎಂದು ತಿಳಿಸಲಾಯಿತು.

ಸಮಾಜ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞರಾಗಿರುವುದಾಗಿ ಶ್ರೀ ಉಮಾಕಾಂತ ನಾಗಮಾರಪಳ್ಳಿ ಹಾಗೂ ಶ್ರೀ ಸೂರ್ಯಕಾಂಗ ನಾಗಮಾರಪಳ್ಳಿರವರು ಸಭೆಗೆ ತಿಳಿಸಿದರು.

ಸಭೆಗೆ ಸರ್ವರಿಗೂ ಶ್ರೀ ಬಸವರಾಜ ಧನ್ನೂರ ಸ್ವಾಗತಿಸಿದರು. ಶ್ರೀ ಸುರೇಶ ಚೆನ್ನಶೆಟ್ಟಿ ನಿರೂಪಿಸಿದರು. ಶ್ರೀ ಬಾಬುರಾವ ದಾನಿ ವಂದಿಸಿದರು ಎಂದು ಶ್ರೀ ವೀರಶೆಟ್ಟೆ ಪಟ್ನೆ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವರದಿ – ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ