ಗದಗ ಜಿಲ್ಲೆ ಲಕ್ಷ್ಮೇಶ್ವರ ನಗರಕ್ಕೆ ಪ್ರಪ್ರಥಮವಾಗಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಿನ್ನೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಲಕ್ಷ್ಮೇಶ್ವರ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯಾದ ಚಂದ್ರು ಲಮಾಣಿ ಯವರ ಪರವಾಗಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಜೈಕಾರ ಹಾಕಿದರು ಮಾಜಿ ಸಚಿವರಾದ ಸಿ ಸಿ ಪಾಟೀಲ್ , ಜಿಲ್ಲಾ ಅಧ್ಯಕ್ಷರಾದ ಮುತ್ತಣ್ಣ ಲಿಂಗನಗೌಡರು , ಮಾಜಿ ಶಾಸಕರಾದ ಜಿ. ಎಂ ಮಹಾಂತಶಟ್ಟರ್ , ಶಾಶಕರಾದ ರಾಮಣ್ಣ ಲಮಾಣಿ , ಎಸ್ ವಿ ಸಂಕನೂರ , ಸಿ ಸಿ ಪಾಟೀಲ್ , ರಮೇಶ ದನದಮನಿ , ಇನ್ನು ಅನೇಕ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ಸತೀಶ ಗೋಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.