ಬೀದರ್:ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಬೀದರನ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ (ಬಿ.ಇಡಿ ) ಪ್ರಸಕ್ತ ಸಾಲಿನ ತ್ರೃತಿಯ ಸೆಮಿಸ್ಟರ್ ಪರಿಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಗಳಿಸಿ ಗಮನ ಸೆಳೆದಿದೆ.
ಗುರುದೇವಿ ಕಾಶಿನಾಥ ಶೇ 89.3, ಭುವನೇಶ್ವರಿ ಮಲ್ಲಿಕಾರ್ಜುನ ಶೇ 87.5 , ಖಾನಪಟೇಲ್ ಹೆರುರ ಶೇ 87.3 , ಆಕಾಶ ಬಿರಾದರ್ ಶೇ 87.00, ರೇಣುಕಾ ಜಮಾದಾರ ಶೇ 86.3 , ಅಂಬಿಕಾ ಶಿವರಾಜ ಶೇ 85.5 , ಶರಣಮ್ಮ ಶೇ 85.3 , ಆರತಿ ಜಿ ಶೇ 85.3 , ಕೀರ್ತಿ ಸಂಗಪ್ಪ ಶೇ 85.00 , ವಿನಯ ಆರ್ ಶೇ 85.00 , ದೀಪಿಕಾ ಎಸ್ ಶೇ 85.00 , ಭುವನೇಶ್ವರಿಬಾಯಿ 85.00 ಅಗ್ರ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕಷನ್ ನಲ್ಲಿ ಉತ್ತಿರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಮಾರ್ಗದರ್ಶನ ಗುಣಮಟ್ಟದ ಶಿಕ್ಷಣ ಉಪನ್ಯಾಸಕರ ಬೋಧನೆ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಹೆಚ್. ಕೆ. ಇ. ಸಂಸ್ಥೆಯ ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದೆ ರವರು ಬೀದರ್ ಸಂಚಾಲಿತ ಸದಸ್ಯರಾದ ಡಾ.ರಜಿನಿಶ ವಾಲಿ ರವರು, ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕನಕಟ್ಟೆ ರವರು, ಮತ್ತು ಪ್ರಾಧ್ಯಪಕರಾದ ಸಂತೋಷಕುಮಾರ ಸಜ್ಜನ , ರಾಜಕುಮಾರ ಶಿಂಧೆ , ಶಿಲ್ಪಾ ಹಿಪ್ಪರಗಿ , ವೀಣಾ ಜಲಾದೆ , ಪಾಂಡುರಂಗ, ಅಶೋಕ ಹಾಗೂ ಎಲ್ಲಾ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದರು.
ವರದಿ – ಸಾಗರ್ ಪಡಸಲೆ