ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳೇ ಇಲ್ಲಿ ರಾಜಕೀಯ ನಡೆಯುತ್ತಿರುವುದು ಮತಕ್ಕಾಗಿ,ಅಧಿಕಾರಕ್ಕಾಗಿ,ಹಣಕ್ಕಾಗಿ ಹಾಗೂ ತಮ್ಮ ತಮ್ಮ ಸ್ವಾರ್ಥಕ್ಕಾಗಿ. ಹಾಗಾಗಿ ಯೋಗ್ಯರು ರಾಜಕೀಯಕ್ಕೆ ಬರಬೇಕು ಜನಕ್ಕಾಗಿ ದೇಶಕ್ಕಾಗಿ ದುಡಿಯಬೇಕು ಪ್ರಬುದ್ಧ ಭಾರತವನ್ನು ಕಟ್ಟಬೇಕು ಎಂಬ ದೃಷ್ಟಿಕೋನದಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕೂ ಮಿಂಚಿನ ಸಂಚಾರ ಮಾಡುತ್ತಾ ಕ್ಷೇತ್ರದ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾ ಪ್ರತಿಯೊಂದು ಕುಟುಂಬದ ಮನೆಮಗಳಂತೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟ್ ನಿರೀಕ್ಷೆ ಎಲ್ಲಿದ್ದ ಲತಾ ಮಲ್ಲಿಕಾರ್ಜುನ್ ಅವರಿಗೆ ಪಕ್ಷ ಅನ್ಯಾಯ ಮಾಡಿದ್ದರಿಂದ ಲತಾ ಮಲ್ಲಿಕಾರ್ಜುನ್ ಅವರು ಹೆಣ್ಣು ಅಬಲೆಯಲ್ಲ ಎಂದು ತಿಳಿದ ಅಪಾರ ಅಭಿಮಾನಿಗಳ ಕಾರ್ಯಕರ್ತರ ಒತ್ತಾಯದ ಮೇರೆಗೆ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.
ತಂದೆ ಎಂ.ಪಿ.ಪ್ರಕಾಶ್ ಹಾಗೂ ಸಹೋದರ ಎಂ.ಪಿ. ರವೀಂದ್ರ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಕ್ಷೇತ್ರಕ್ಕಾಗಿ ನಿರಂತರವಾಗಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜನನಾಯಕಿ ಲತಕ್ಕ ಅವರು ಪ್ರಚಾರಕ್ಕೆ ತೆರಳಿದ ಸಮಯದಲ್ಲಿ ಹಾಗೂ ನಾಮಿನೇಷನ್ ಸಲ್ಲಿಸುವಾಗ ಇದ್ದಂಥ ಜನ ಸಾಗರ ಹಾಗೂ ಅಭಿಮಾನಿಗಳ ಅಪಾರ ಪ್ರೀತಿ ಕಾಳಜಿಯನ್ನು ನೋಡಿದರೆ ಲತಾ ಮಲ್ಲಿಕಾರ್ಜುನ್ ಅವರು 2023 ಮೇ 13 ರಂದು ಬರುವ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಲತಕ್ಕ ಅವರೇ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಲಿದ್ದಾರೆ ಎಂದು ಕ್ಷೇತ್ರದ ಅಪಾರ ಅಭಿಮಾನಿಗಳು, ಕೂಲಿ ಕಾರ್ಮಿಕರು,ರೈತರು,ಸಾವಿರಾರು ಕಾರ್ಯಕರ್ತರು ಮೇ 13 ರ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.
ಒಂದುಕಡೆ ಹೇಳ್ತಾರೆ “ಹಣವೇ ಸರ್ವಸ್ವಂ ಮತವೇ ವ್ಯಾಪಾರಂ ಪ್ರಜಾಪ್ರಭುತ್ವದೊಳ್ ಕಾಂಚನಂ ಕಾರ್ಯಸಿದ್ದಿ ಸಾಧನಂ ಪ್ರಜಾ ಹಿತ ವಾಕ್ಯಮ್ “ಎಂಬಂತೆ ಹಣವೇ ಎಲ್ಲ, ಮತ ಎಂಬುದು ವ್ಯಾಪಾರ ವಿದ್ದಂತೆ ಪ್ರಜಾಪ್ರಭುತ್ವದಲ್ಲಿ ಹಣವೊಂದಿದ್ದರೆ ಎಲ್ಲ ಕೆಲಸ ಕಾರ್ಯಗಳು ಆಗುತ್ತವೆ.ಇದೆ ನಮ್ಮ ಪ್ರಜೆಗಳ ದುರಂತ ಎಂದು ರಾಜಕಾರಣ ಮಾಡುತ್ತಿರುವ ಜನಗಳ ಮದ್ಯೆ ‘ಎಂ.ಪಿ.ಲತಾ ಮಲ್ಲಿಕಾರ್ಜುನ್ ‘ಅವರು ಯಾವುದೇ ಅಧಿಕಾರ ಇಲ್ಲದೇನೆ ಸದಾ ಜನಗಳ ಮದ್ಯೆ ಬೆರೆತು ಕಲೆ,ಸಾಹಿತ್ಯ,ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಾ ರಾಜಕೀಯ ಎಂಬುದು ವೃತ್ತಿಯಲ್ಲ ಅದೊಂದು ಸಾಮಾಜಿಕ ಸೇವೆಯ ಜವಾಬ್ದಾರಿ ಅಂತಹ ಸೇವೆಯನ್ನು ಮಾಡುವಾಗ ಪ್ರತಿಫಲದ ಅಪೇಕ್ಷೆ ಇರುವುದಿಲ್ಲ ಇರಬಾರದು ಕೂಡ ಎಂದು ತೋರಿಸಿಕೊಟ್ಟ ಏಕೈಕ ನಾಯಕಿ ನಮ್ಮ ಎಂ.ಪಿ.ಲತಕ್ಕ ಅವರು.
ಇಂತಹ ಜನನಾಯಕಿ ಭವಿಷ್ಯದಲ್ಲಿ ಶಾಸಕಿ ಯಾಗಬೇಕು ಎಂಬುದು ಕ್ಷೇತ್ರದ ಅಪಾರ ಅಭಿಮಾನಿಗಳ ಆಶಯವಾಗಿದೆ.ಹಾಗೆಯೇ ಯುವ ನಾಯಕರಾದ ಗಂಗಜ್ಜಿ ನಾಗರಾಜ್ ಅವರು ಕೂಡಾ ಲತಾ ಅಕ್ಕಾ ಶಾಸಕಿಯಾಗಲೆಂದು ಅವರ ಪರವಾಗಿ ಪ್ರಚಾರ ಮಾಡಲು ನಾನು ಸಿದ್ದ ಹಾಗೂ ಎಂ.ಪಿ.ಪಿ. ಕುಟುಂಬಕ್ಕೆ ನಾನು ಸದಾ ಚಿರಋಣಿ ಎಂದು ತಿಳಿಸಿದರು.
-ಕರುನಾಡ ಕಂದ