ಒಂದೇ ತಾಯಿಯ ಗರ್ಭಗುಡಿಯಲ್ಲಿ ಜನ್ಮ ತಾಳಲಿಲ್ಲ ಒಂದೇ ತಟ್ಟೆಯಲ್ಲಿ ಉಂಡು ಬಾಲ್ಯವ ಕಳೆಯಲಿಲ್ಲ
ಒಂದೇ ಶಾಲೆಯ ಕಡೆಗೆ ಕೈ ಕೈ ಹಿಡಿದು ನಡೆಯಲಿಲ್ಲ ನಾವು ಒಡಹುಟ್ಟಿಗರಲ್ಲ ಆದರೆ ಒಡ ಹುಟ್ಟದಿದ್ದರೂ ಒಡ ಹುಟ್ಟಿದವರಂತೆ ಒಡಲಾಳದ ಮಾತುಗಳಿಗೆಲ್ಲ ಸ್ಪಂದಿಸಿ ಪ್ರೀತಿ ತೋರುವುದರಲ್ಲಿ ಎರೆಡು ಮಾತಿಲ್ಲ…
ಬಲು ಪ್ರೀತಿಯ ಅಕ್ಕಾ ನೀನು ನನಗೆ ಸದಾ ಹಸನ್ಮುಖಿ ಅಕ್ಕಾ ಎಂಬ ಅಕ್ಷರದಲ್ಲಿದೆ ಆಗಸದಂತಹ ಪ್ರೀತಿ ನಿನ್ನ ಮಾತುಗಳೇ ನನಗೆ ಸಕ್ಕರೆಯಂತಹ ರೀತಿ ಪದೇ ಪದೇ ರೇಗಿಸುವೆ ನೀನೊಂದು ದೊಡ್ಡ ಕೋತಿ ಆದರೂ ಕಲಿಸುವೇ ಬಾಳಲ್ಲಿ ಒಳ್ಳೆಯ ನೀತಿ ನನ್ನ ಪ್ರೀತಿ…
ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಡಲು ಮುನಿಸಿಕೊಳ್ಳಲು ಜೊತೆಯಾಗಿ ಓಡಾಡಲು ಕೀಟಲೆ ಮಾಡಿ ನಗಲು, ಏನೇ ನೋವಾದರೂ ತಬ್ಬಿ ಅಳಲು, ಸ್ನೇಹಿತೆಯಂತೆ ಮನದ ಮಾತುಗಳನೆಲ್ಲಾ ಆಡಿ ಬಿಡಲು ನನ್ನ ಒಡಹುಟ್ಟಿದ ಪ್ರಾಣ ಸಹೋದರಿಯೇ ಸರಿಸಾಟಿ..
ಈ ಅಕ್ಕಾ ತಮ್ಮ ಎಂಬ ಸಂಬಂಧ ಸೃಷ್ಟಿಯಾಗಬೇಕೆಂದರೆ ಒಂದೇ ತಾಯಿ ಗರ್ಭದಲ್ಲಿ ಹುಟ್ಟಿ ಬರಬೇಕೆಂದೇನಿಲ್ಲ ಆ ಸಂಬಂಧದ ಬಾಂಧವ್ಯ ಬೆಳೆದ್ರೆ ಸಾಕು,ಸುಂದರ ಭಾವ ಬರಹಗಳಿಂದ ಸೆಳೆದು ಮನಸಾರೆ ಮಮತೆಯನ್ನು ತೋರುತ್ತಾ ನನ್ಮನದಲ್ಲಿ ಮನೆಮಾಡಿರುವ ಅಮ್ಮನಂತೆ ಪ್ರೀತಿ ತೋರುವ ನನ್ನ ಮುದ್ದು ಮನದ ನಿಸ್ಕಲ್ಮಷ ಮನಸ್ಸಿನ ಅಕ್ಕಾ ನೀನು.
-ಗಂಗಜ್ಜಿ ನಾಗರಾಜ್
ಹವ್ಯಾಸಿ ಬರಹಗಾರರು,ಸಾಸ್ವಿಹಳ್ಳಿ
ಹರಪನಹಳ್ಳಿ.