ನಗಿಸೋಣ ನಮ್ಮ ಸನಿಹವಿದ್ದವರನ್ನು,
ನಗಿಸೋಣ ನಮ್ಮ ನಂಬಿದವರನ್ನು.
ನಗುನಗುತಲೇ ಸಾಗಿಸೋಣ
ಈ ಬದುಕಿನ ಯಾತ್ರೆಯನ್ನು,
ಈ ಜನುಮದ ಜಾತ್ರೆಯನ್ನು.!!
ಇದ್ದವರ ಜೊತೆಯಲಿ ಬೆರೆಯುತ
ಇಲ್ಲದವರ ಮನದಲಿ ನೆನಯುತ
ಕಾಡೋ ನೋವುಗಳನ್ನು ಮರೆಯುತ
ಸಾಗಿಸೋಣ ಬದುಕಿನ ಬಂಡಿಯನ್ನು,
ಹಂಚೋಣ ಸಕಲರಿಗೂ ಸಂತಸಗಳನ್ನು.!!
ನಕ್ಕರೆ ಸ್ವರ್ಗವಂತೆ
ಸದಾ ನಲಿಯುತಿರುವ ನಿಸರ್ಗದಂತೆ,
ನೆಮ್ಮದಿಯ ನಾಳೆಗಳಿಗೆ ನಗುವೊಂದೇ ದಿವ್ಯೌಷಧಿಯಂತೆ,
ಬಿಟ್ಟು ಮುಂದೆ ಸಾಗಬೇಕು ಮನದೊಳಗಿನ ಚಿಂತೆ,.!!
-ಸುನಿಲ್ ಲೇಖಕ್ ಎನ್
ಬೆಂಗಳೂರು