ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹಸನಾಗಲಿ ದುಡಿಯುವ ಕೈ,ದಕ್ಕಲಿ ಶ್ರಮಕ್ಕೆ ತಕ್ಕ ಬೆಲೆ…

ಕೆಲಸ ಮಾಡುವುದು ಕೇವಲ ಹಣ ಸಂಪಾದನೆಗಲ್ಲ ಬದಲಾಗಿ ನಿಮ್ಮ ಜೀವನಕ್ಕೊಂದು ಅರ್ಥ ನೀಡಲು.” – ಮಾರ್ಕ್ ಚಾಗಲ್

ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ವರ್ಗಗಳಲ್ಲಿ ಕಾರ್ಮಿಕ ಅಥವಾ ಶ್ರಮಿಕವರ್ಗವು ಕೂಡ ಒಂದು.ತಮ್ಮ ಸ್ವಂತ ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಂಸ್ಥೆಯ(ದೇಶದ ) ಏಳಿಗೆಗಾಗಿ ಹಗಲಿರುಳು ಶ್ರಮಿಸುವ ‘ ದುಡಿಮೆಯೇ ದೇವರು ‘ ಎಂದು ತಿಳಿದುಕೊಂಡು ಬೆವರು ಹರಿಸುವ ವರ್ಗಕ್ಕೆ ಗೌರವ ಸಲ್ಲಿಸುವ ದಿನವೇ ‘ವಿಶ್ವ ಕಾರ್ಮಿಕ ದಿನಾಚರಣೆ’

ಪ್ರತಿಯೊಂದು ರಾಷ್ಟ್ರದ ಆರ್ಥಿಕ ಪ್ರಗತಿ ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಶ್ರಮಿಕ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿ ಸಾಧಿಸುತ್ತಿರುತ್ತದೆ. ದೈಹಿಕ ಇಲ್ಲವೆ ಬೌದ್ಧಿಕ ಶ್ರಮವನ್ನು ಮಾರಾಟ ಮಾಡಿ ಹಣ ಗಳಿಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಪ್ರತಿಯೊಂದು ದೇಶದಲ್ಲಿ ದೈಹಿಕ ಇಲ್ಲವೆ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಿ, ಆದಾಯ ಗಳಿಸಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿರುತ್ತಾರೆ. ಈ ರೀತಿ ಆದಾಯ ಗಳಿಸುವ ವರ್ಗಕ್ಕೆ ಕಾರ್ಮಿಕ ವರ್ಗವೆಂದು ಕರೆಯುತ್ತಿದ್ದು, ಪ್ರತಿಯೊಂದು ದೇಶದಲ್ಲಿ ಶೇ.60 ರಿಂದ ಶೇ.65ರಷ್ಟು ಜನರು ಕಾರ್ಮಿಕ ವರ್ಗದವರು.

“ಕಾರ್ಮಿಕ ಶ್ರಮದ ಅಂತ್ಯದ ಎಂದರೆ ವಿರಾಮವನ್ನು ಪಡೆಯುವದು ” ಅರಿಸ್ಟಾಟಲ್

ಕೈಗಾರಿಕಾ ಕ್ರಾಂತಿಯ ನಂತರದ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು. ಒಂದು ಬಂಡವಾಳ ಶಾಹಿ (ಶ್ರೀಮಂತ ವರ್ಗ ) ಹಾಗೂ ಇನ್ನೊಂದು ಕಾರ್ಮಿಕ (ದುಡಿಯುವ ವರ್ಗ.

 ಮಾಲೀಕನು ಕಾರ್ಮಿಕರಿಗೆ ಸಮಯವಿಲ್ಲದೇ ದುಡಿಸಿಕೊಂಡು.ದುಡಿಮೆಗೆ ತಕ್ಕ ಹಾಗೆ ಬೆಲೆಯನ್ನು ಕಟ್ಟುತ್ತಿರಲಿಲ್ಲ ಇದನ್ನ ವಿರೋಧಿಸಿ. 24 ಗಂಟೆಯ ದುಡಿಮೆಯ ಬದಲಾಗಿ,8 ಗಂಟೆ ದುಡಿವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ 1886 ಮೇ 1ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕುವುದಕ್ಕಾಗಿ ಮೇ 4ರಂದು ಪೊಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು. ಇದನ್ನು ಲೆಕ್ಕಿಸದೆ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ನೆನಪಿಗೆ ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತ ಬರಲಾಗುತ್ತಿದೆ.

ಭಾರತದಲ್ಲಿ ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದಾರೆ. ದೇಶದಲ್ಲಿ ಕೇವಲ ಶೇ.20ರ ವರೆಗೆ ಮಾತ್ರ ಕಂಡು ಬಂದಿದ್ದು, ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಶೇ.85ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೊಟೇಲ್‍ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ, ಕಟ್ಟಡ ಕೆಲಸಕ್ಕೆ ದುಡಿಯುವವರು ಈ ಮುಂತಾದ ಕ್ಷೇತ್ರಗಳಲ್ಲಿ ಕೆಲಸಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಎಂಬುದೇ ಗಗನ ಕುಸುಮವಾಗಿದ್ದು, ತೀವ್ರತರ ಶೋಷಣೆಗೆ ಒಳಪಟ್ಟಿದ್ದಾರೆ.

ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು “ಶ್ರಮಯೇ ವಿಜಯತೆ ಎಂಬುದನ್ನು ಸತ್ಯಮೇವ ಜಯತೆಯ” ಸಮಾನಾಂತರವಾಗಿ ಬಾವಿಸಿ ಸ್ವಾತಂತ್ರ್ಯಾ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಹಲ್ಲಿಲ್ಲದ ಕಾಯ್ದೆಯಾಗಿದ್ದು, ಪರಿಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ.

ನಾಲ್ಕು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡುವ ಪ್ರಯತ್ನವಾಗಿ, ಅವರನ್ನು ಅಧಿಕೃತ ವಲಯದ ಉದ್ಯೋಗಿಗಳಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

 ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಸಮಾಜ ಕಲ್ಯಾಣ ಕಾನೂನುಗಳ ಪರಿಧಿಯೊಳಗೆ ತರಬೇಕು ಹಾಗೂ ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಅಧಿಕೃತ ವಲಯದ ನೌಕರರನ್ನಾಗಿ ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಇಂಥ ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಇತರ ಫಲಾನುಭವಿಗಳನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಗಳ ಸ್ಥಿತಿ ಸುಧಾರಣೆ) ಕಾಯ್ದೆ, 1996 ಅಧಿನಿಯಮವನ್ನು ಸಂಸತ್ತು ರೂಪಿಸಿದೆ.

ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು, ಶ್ರೀಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಶೋಷಣೆಯ ವಿರುದ್ಧ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಸದಾಕಾಲ ಶ್ರಮಿಸುತ್ತಿರಬೇಕು. ಆಗ ಶೋಷಣೆ ನಿಲ್ಲುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯತೆಯಿಂದ ಮಾತ್ರ ಸಾಧ್ಯ. ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಲಿ ಎಂಬುದೇ ನಾಗರಿಕ ಸಮಾಜದ ಬಯಕೆ-ಹಾರೈಕೆಯಾಗಿದೆ.

ಈ ದಿನವನ್ನು ಕಾರ್ಮಿಕ ಸಮುದಾಯಗಳ ಕೊಡುಗೆಗೆ ಸ್ಪಂದಿಸುವ ಜೊತೆಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿಸಲು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು, ಸಾಮಾಜಿಕ ರಕ್ಷಣೆಯನ್ನು ನೀಡಲು ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಹಾಯ ಮಾಡುವ ಉದ್ದೇಶದಿಂದಲೂ ಆಚರಣೆಯನ್ನು ಮಾಡಲಾಗುತ್ತದೆ.

“ಸಣ್ಣ ಕೆಲಸವನ್ನು ಗೌರವಿಸಿ ಮತ್ತು ವೈಭವೀಕರಿಸಿ. ಯಾಕೆಂದರೆ ನಮ್ಮ ಜೀವನದ ಕೆಳಗಿನಿಂದ ಪ್ರಾರಂಭವಾಗುತ್ತದೆಯೇ ಹೊರತು ಮೇಲಿನಿಂದಲ್ಲ.” – ಬುಕರ್ ವಿ ವಾಷಿಂಗ್ಟನ್

 ಇತ್ತೀಚಿನ ದಿನಮಾನಗಳಲ್ಲಿ ಕಾರ್ಮಿಕರ ಸಂಕಷ್ಟಗಳನ್ನು ಅರಿತು ಸರ್ಕಾರಗಳು ಸರ್ಕಾರಗಳು ಹಲವಾರು ಬದಲಾವಣೆಯ ಮೂಲಕವಾಗಿ ಕಾರ್ಮಿಕರಿಗೆ ಭದ್ರತೆ, ವೇತನದಲ್ಲಿ ಬದಲಾವಣೆ , ಆಹಾರ ಭದ್ರತೆ, ಸುರಕ್ಷತಾ ಕ್ರಮಗಳು, ಆರೋಗ್ಯ ಸೌಲಭ್ಯಗಳು, ದುಡಿಯುವ ಸ್ಥಳದಲ್ಲಿ ಸಿಗುವ ಮೂಲಭೂತ ಸೌಕರ್ಯಗಳು, ವೇತನ ಜೊತೆಗೆ ಪಿಂಚಣಿ, ಮುಂತಾದವುಗಳನ್ನು ಕೈಗೊಂಡಿವೆ. ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರು ಅದು ವಿಶೇಷವಾಗಿ ಅಸಂಘಟಿತ ಕಾರ್ಮಿಕರು ಕರೋನವೈರಸ್ ನ ಕಾರಣದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದರು, ಅಂತ ಕಾರ್ಮಿಕರಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಎಷ್ಟು ಸೌಲಭ್ಯಗಳ ಒದಗಿಸಿದವು, ಉದ್ಯೋಗವಿಲ್ಲದ ವೇತನ, ವಲಸೆಯ ಸಮಸ್ಯೆ, ಆಹಾರ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆ, ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಸಮಸ್ಯೆ, ಎಲ್ಲಾ ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಒಳಗಾಗಿದ್ದರು ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಮಾಡುವುದರ ಮೂಲಕವಾಗಿ ಕಾರ್ಮಿಕರಿಗೆ ಸ್ವಲ್ಪ ನೆಮ್ಮದಿ ನೀಡುವ ಕೆಲಸವನ್ನು ಮಾಡಿದೆ.

ಸಕಾರಾತ್ಮಕ ಸುರಕ್ಷತೆ ಮತ್ತು ಆರೋಗ್ಯ ಸಂಸ್ಕೃತಿಯನ್ನು ನಿರ್ಮಿಸಲು ಒಟ್ಟಾಗಿ ಕಾರ್ಯನಿರ್ವಹಿಸಿ’.

– ಶಿವನಗೌಡ ಪೊಲೀಸ್ ಪಾಟೀಲ ನವಲಹಳ್ಳಿ 

 ಲೇಖಕರು ಉಪನ್ಯಾಸಕರು ಕೊಪ್ಪಳ

9845646370

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ