ವಿಜಯಪುರ ಇಂಡಿ ಮತಕ್ಷೇತ್ರಕ್ಕೆ ೨೦೧೩ ರಿಂದ ೨೦೨೩ ರ ವರೆಗೆ ೩,೫೦೦ ರೂ ಅನುದಾನ ತಂದು ಇಂಡಿ ಮತಕ್ಷೇತ್ರವನ್ನು ಎಲ್ಲ ವಿಧದಲ್ಲೂ ಅಭಿವೃದ್ಧಿ ಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲರು ಎಂದು ಮಾಜಿ ಸಚಿವ ಜಮೀರ ಅಹಮ್ಮದ ಹೇಳಿದರು.
ಪಟ್ಟಣದ ಅಮರ ಇಂಟರ್ ನ್ಯಾಶನಲ್ ಹೋಟೆಲ್‌ನ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಾರ್ಥ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ರಾಜ್ಯ ಸರಕಾರ ಅಲ್ಪ ಸಂಖ್ಯಾತರಿಗೆ ಸಿಗುವ ೪% ಮಿಸಲಾತಿ ಕಸಿದುಕೊಂಡಿದೆ.ಹೀಗಾಗಿ ಅಲ್ಪ ಸಂಖ್ಯಾತ ಮಕ್ಕಳ ವಿದ್ಯಾಬ್ಯಾಸ,ನೌಕರಿಯಿಂದ ವಂಚಿತರಾಗ ಬೇಕಾಗುತ್ತದೆ.ಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಲಿದ್ದು ಮತ್ತೆ ಮೀಸಲಾತಿ ನೀಡಲಾಗುವುದೆಂದರು.ಅಲ್ಪ ಸಂಖ್ಯಾತರು ಜೆ ಡಿ ಎಸ್ ಗೆ ಮತನೀಡಿದರೆ ಅದು ಬಿಜೆಪಿಗೆ ನೀಡಿದಂತಾಗುತ್ತದೆ. ಡಾ|| ಬಾಬಾಸಾಹೇಬ ಅಂಬೇಡ್ಕರರು ನೀಡಿದ ಮೀಸಲಾತಿ ಅನ್ವಯ ನಾವು ಇಂದು ವೇದಿಕೆ ಮೇಲಿದ್ದೇವೆ ಕಾಂಗ್ರೆಸ್ ಪಕ್ಷ ಇರುವವರೆಗೂ ಯಾವ ಅಲ್ಪ ಸಂಖ್ಯಾತರು ತಲೆ ತಗ್ಗಿಸಬೇಕಾಗಿಲ್ಲ ನಾವು ಅಲ್ಪ ಸಂಖ್ಯಾತರು ಆದರೆ ಹಿಂದುಸ್ತಾನದ ಪ್ರಜೆಗಳು, ನಮ್ಮಲ್ಲಿ ಹರಿಯುವ ರಕ್ತ ಭಾರತೀಯರದು, ಭಾರತೀಯ ನಾವೇಲ್ಲರೂ ಸಹೋದರರಂತೆ ಬಾಳ ಬೇಕಾಗಿದೆ ರಾಜಕೀಯಕ್ಕಾಗಿ ಧರ್ಮ ಬೆರೆಸುವದು ಬೇಡ ಎಂದರು.
೨೦೧೩ ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಅಲ್ಪ ಸಂಖ್ಯಾತರಿಗೆ ಇದ್ದ ೪೦೦ ಕೋಟಿ ಅನುದಾನವನ್ನು ೩೧೫೦ ಕೋಟಿ ರೂ ಮಾಡಿದ್ದಾರೆ. ಮತ್ತೆ ಬಿಜೆಪಿ ಸರಕಾರ ೧೩೫೦ ಕೋಟಿ ರೂ ಕಡಿಮೆ ಮಾಡಿ ೧೮೦೦ ಕೋಟಿ ರೂ ಮಾತ್ರ ನೀಡಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದಲ್ಲಿ ಕೋಮು ಸಾಮರಸ ಹದೆಗೆಡಿಸುತ್ತಿದ್ದು ಅವರಿಂದ ದೂರ ಇರುವ ಅವಶ್ಯಕತೆ ಇದೆ.ರಾಜಕೀಯ ಅಭಿವೃದ್ಧಿ ಮತ್ತು ಶಾಂತಿಗಾಗಿ ಮಾಡಬೇಕಾಗಿದೆ ದ್ವೇಷದ ರಾಜಕೀಯ ಸಲ್ಲ ಎಂದರು.
ಕಾಂಗ್ರೆಸ್ ಸರಕಾರದಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರಶೀಫ್ ನೀಡುತ್ತಿದ್ದು ವಿದ್ಯಾರ್ಥಿಗಳು ವೈದ್ಯರು,ಇಂಜಿನಿಯರ ಆಗುವಂತೆ ಮಾಡಿದ್ದಾರೆ.ಒಬ್ಬ ಚಾಲಕನಿಗೆ ೮ ಲಕ್ಷ ರೂ ಸಾಲ ನೀಡಿ ಮಾಲಿಕನನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದರು.
ಅಲ್ಪ ಸಂಖ್ಯಾತರು ಹಳ್ಳಿ ಹಳ್ಳಿಗೆ ಹೋಗಿ,ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರಿಗೆ ಮಾಡಿದ ಸವಲತ್ತು ತಿಳಿಸಿಕೊಡಬೇಕಾಗಿದೆ ಎಂದರು.
ಟಿಪ್ಪು ಜಯಂತಿ ಪ್ರಾರಂಭಿಸಿದ್ದು ಕಾಂಗ್ರೆಸ್ ಸರಕಾರ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಈ ಒಬ್ಬ ಅಲ್ಪ ಸಂಖ್ಯಾತ ಜಮೀರ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಕರ್ನಾಟಕದಲ್ಲಿ ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯದವರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಗೆಲ್ಲಿಸುವ ಮೂಲಕ ದೇಶದಲ್ಲಿ ರಾಜಕೀಯ ಬದಲಾವಣೆ ತರಬೇಕಾಗಿದೆ.ಕರ್ನಾಟಕದ ಏಳು ಕೋಟಿ ಜನರಿಗೆ ಒಳ್ಳೆಯ ಸರಕಾರ ಶಾಂತಿ ಮತ್ತು ಅಭಿವೃದ್ಧಿಯ ಸರಕಾರ ಬೇಕಾಗಿದೆ ರಾಜ್ಯ ಬಿಜೆಪಿ ಸರಕಾರ ಬ್ರಷ್ಟಾಚಾರದಲ್ಲಿ ತೊಡಗಿದ್ದು,ಜನರ ಭಾವನೆಗಳನ್ನು ಕೆರಳಿಸುವದು,ಜಾತಿ ಜಾತಿ ಮಧ್ಯೆ ಸಂಘರ್ಷ,ಕೋಮುವಾದ ಸೃಷ್ಟಿಸಿ ಅದಿಕಾರಕ್ಕೆ ಬರುವ ಹುನ್ನಾರ ನಡೆದಿದೆ ಎಂದರು.
ಇದೇ ವೇಳೆ ಜನಾರ್ಧನ ರೆಡ್ಡಿ ಪಕ್ಷದ ಅಭ್ಯರ್ಥಿ ಮಹಿಬೂಬ ಅರಬ ಮತ್ತು,ಅಂಜುಮನ್ ಸಮಿತಿಯ ಮಾಜಿದ ಸೌದಾಗರ ಸೇರಿದಂತೆ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಇಲಿಯಾಸ ಬೋರಾಮಣ
,ಭೀಮನಗೌಡ ಪಾಟೀಲ,ಜಾವೇದ ಮೋಮಿನ ಮಾತನಾಡಿದರು.
ವೇದಿಕೆಯ ಮೇಲೆ ಪೂಜ್ಯ ಮೌಲಾನಾ, ವಿಪ ಸದಸ್ಯ ಪ್ರಕಾಶ ರಾಠೋಡ,ವಿಜಯಪುರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜು ಅಲಗೂರ,ಬಾಬು ಸಾಹುಕಾರ ಮೇತ್ರಿ,ಎಸ್.ಎಂ.ಪಾಟೀಲ ಗಣ ಯಾರ,ಸತ್ತಾರ ಬಾಗವಾನ, ಜಟ್ಟೆಪ್ಪ ರವಳಿ,ರಶೀದ ಅರಬ,ಶ್ರೀಕಾಂತ ಕೂಡಿಗನೂರ ಮತ್ತಿತರಿದ್ದರು.
ವರದಿ-ಅರವಿಂದ್ ಕಾಂಬಳೆ ಇಂಡಿ