ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ 800 ಕ್ಕೂ ಹೆಚ್ಚು ಜನ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ದೊಡ್ಡಪ್ಪಗೌಡ ಅವರಿಗೆ ಬೆಂಬಲ ಘೋಷಿಸಿದರು.ಊರಿನ ಪ್ರಮುಖ ಬೀದಿಗಳಲ್ಲಿ ಬಾಜಿ ಭಜಂತ್ರಿ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೆಡಿಎಸ್ ಪಕ್ಷಕ್ಕೆ ಊರಿನ ಗ್ರಾಮಸ್ಥರು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು ಹಾಗೂ ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ನಾವು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುತ್ತಾ ಬಂದಿದ್ದೇವೆ ಇದುವರೆಗೆ ಬರದ ಶಾಸಕರು ಜನರ ಸ್ಪಂದನೆಗೆ ಸ್ಪಂದಿಸದ ಶಾಸಕರು ದುರ್ವರ್ತನೆ ತೋರುವ ಅವರ ಪಕ್ಷದ ಕಾರ್ಯಕರ್ತರ ಮಾತಿಗೆ ಬೇಜಾರಾಗಿ ನಾವು ಜೆಡಿಎಸ್ ಪಕ್ಷಕ್ಕೆ ಸೇರುತ್ತಾ ಇದ್ದೇವೆ ಯಾಕೆಂದರೆ ಇದುವರೆಗೂ ನಮ್ಮನ್ನು ಒಂದಿಷ್ಟು ಪುಡಿಗಾಸು,ಕುಡಿಯಲು ಒಂದಿಷ್ಟು ಕೊಟ್ಟು ನಮ್ಮನ್ನು ಯಾಮಾರಿಸಿದ್ದಾರೆ ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಊರಿನ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಕರುನಾಡ ಕಂದ