ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಹಾಪುರ ಬಿಜೆಪಿ ಅಭ್ಯರ್ಥಿ 420 (ಕಳ್ಳ): ಎಚ್.ಡಿ. ಕುಮಾರಸ್ವಾಮಿ

ಯಾದಗಿರಿ: ಕಳೆದ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ. ಈಗ 2023 ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವ್ಯಕ್ತಿಗೆ 420 (ಕಳ್ಳ) ಅಂತ ಕಲಿಯಬೇಕು.
ನಾನು ಮುಖ್ಯಮಂತ್ರಿ ಇದ್ದ ವೇಳೆ ನನ್ನ ಬಳಿಗೆ ಬಂದು ನನ್ನಿಂದ ಕೆಲಸ ಮಾಡಿಕೊಂಡು ನಮಗೆ ಮತ್ತು ನಮ್ಮ ಪಕ್ಷಕ್ಕೆ ಟೋಪಿ ಹಾಕಿದ್ದಾರೆ ಮಾಜಿ ಶಾಸಕ ಗುರು ಪಾಟೀಲರಿಗೂ ಟೋಪಿ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯ ವಾಡಿದರು. ಸೋಮವಾರ ನಡೆದ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಪರ ಮತಯಾಚನೆ ಮಾಡಿದರು.
ನಮ್ಮ ಜೆಡಿಎಸ್ ಪಕ್ಷ ಬಡವರಿಗಾಗಿ ರೈತರಿಗಾಗಿ ಇರುವ ಪಕ್ಷ ಎಂದು ಹೇಳಿದರು ಪಂಚರತ್ನ ಯಾತ್ರೆ ಮೂಲಕ ಬಡವರ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.2006 ರಲ್ಲಿ ನಾನು ಮುಖ್ಯಮಂತ್ರಿಯಿದ್ದಾಗ ಈಗಿನ ಕಾಂಗ್ರೆಸ್ ಅಭ್ಯರ್ಥಿಗೆ ಮಂತ್ರಿ ಸ್ಥಾನ ಕೊಟ್ಟು ಗೌರವಯುತವಾಗಿ ನಡೆಸಿಕೊಂಡಿದ್ದೆ. ಪಂಚರತ್ನ ಯೋಜನೆ ಕಾರ್ಯಕ್ರಮ ಜಾರಿಗೆ ತರುವುದಕ್ಕೆ ಜನತಾ ದಳ ಐದು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಈ ಭಾಗದ ಬಡತನವನ್ನು ಕಣ್ಣಾರೆ ಕಂಡಿದ್ದೇನೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆಂಭಾವಿಯನ್ನು ತಾಲೂಕ ಕೇಂದ್ರವನ್ನಾಗಿ ಮಾಡಿ ಮೂಲಭೂತ ಸೌಕರ್ಯ ಒದಗಿಸುತ್ತೇನೆ. ಶಿಕ್ಷಣ ಆರೋಗ್ಯ ಮನೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಮಾಡಿ ಕೊಡುತ್ತೇನೆ ಎಂದು ಹೇಳಿದರು.
ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಗುರು ಪಾಟೀಲ್ ಶಿರವಾಳ, ಎ.ಬಿ.ಮಾಲಕರಡ್ಡಿ ಇಬ್ಬರು ಅತ್ಯಂತ ಸರಳ ಜೀವಿಗಳು.ಯಾದಗಿರಿ ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಗುರು ಪಾಟೀಲ್ ಶಿರವಾಳ ಇವರು ಕಪಟ ನಾಟಕ ವಿಲ್ಲದ ಪ್ರಾಮಾಣಿಕ ವ್ಯಕ್ತಿ ಈಗ ಜನತಾ ದಳದಿಂದ ಅಭ್ಯರ್ಥಿಯನ್ನಾಗಿ ಮಾಡಿದ್ದೀರಿ ಆದ್ದರಿಂದ ನಿಮ್ಮ ಜನಸೇವಕನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ಇದೇ ಸಂದರ್ಭದಲ್ಲಿ ಹಿರಿಯರಾದ ಮಲ್ಲಣ್ಣ ಮಡ್ಡಿ, ಅಮಾತಪ್ಪ ಕಂದಕೂರ, ಎಂ.ಬಿ. ಮಾಲಕರಡ್ಡಿ, ರಾಮಚಂದ್ರಪ್ಪ ಕಾಶಿರಾಜ , ಅಶೋಕ್ ನಗರಸಭೆ ಸದಸ್ಯರು,ರಾಮಣ್ಣ ಗೌಡ ನ್ಯಾಯವಾದಿಗಳು ವಾಸುದೇವ ಕಟ್ಟಿಮನಿ, ಶ್ರೀಕಾಂತ್ ಸುಬೇದಾರ್, ಸಂತೋಷ, ಕಾಂತು ಪಾಟೀಲ್, ಮಹೇಶ್ ಸುಬೇದಾರ್, ಸೂಗೂ ಗುಳಿಗಿ, ಸೇರಿದಂತೆ ಆನೇಕ ಜೆಡಿಎಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ