ಹೌದು ರಾಜಕೀಯ ಎಂಬುದು ಒಂದು ದೊಡ್ಡ ಹುಚ್ಚರ ಸಂತೆಯಂತಾಗಿ ಹೋಗಿದೆ.ಅಲ್ಲಿ ಕೊಡುವ ಭರವಸೆ ಬರೀ ಸುಳ್ಳಿನ ಕಂತೆ ಎಂತಲೂ ಹೇಳಬಹುದು. ಜನಗಳಿಗೋಸ್ಕರ ರಾಜಕೀಯ ಮಾಡುವ ಬದಲು ಅಲ್ಲಿ ವ್ಯವಹಾರ ಮಾಡುತ್ತಿರುವವರೇ ಹೆಚ್ಚು ತಮ್ಮ ಗೆಲುವಿಗಾಗಿ ಪ್ರತಿಯೊಬ್ಬ ರಾಜಕಾರಣಿಯೂ ಸಿನಿಮಾ ನಟರ ಮೊರೆ ಹೋಗುತ್ತಿರುವುದು ಜನರನ್ನು ಮೂರ್ಖರೆಂಬಂತೆ ಬಿಂಬಿಸುತ್ತಿದೆ.
ಸಿನಿಮಾ ನಟರು ಮತ್ತು ಬೇರೆ ರಾಜ್ಯದ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಕರೆಸಿ ಇಲ್ಲಿನ ಭಾಷೆ ಜನಗಳ ಸಮಸ್ಯೆ ಗೊತ್ತಿಲ್ಲದೆ ಇರುವ ವ್ಯಕ್ತಿಗಳನ್ನು ಕರೆಸಿ ಪ್ರಚಾರವನ್ನು ಮಾಡಿಸಿ ಗೆದ್ದು ದುಡ್ಡು ಮಾಡುವುದು ಈಗಿನ ರಾಜಕಾರಣಿಗಳ ಸ್ಥಿತಿ.ಜನರು ತಮ್ಮ ನೆಚ್ಚಿನ ನಟರು ಪ್ರಚಾರ ಮಾಡುತ್ತಿರುವುದಕ್ಕೆ ಮರುಳಾಗದೆ ರಾಜ್ಯದ ಹಾಗೂ ಕ್ಷೇತ್ರದ ಉದ್ಧಾರಕ್ಕೆ ಶ್ರಮಿಸುವಂತಹ ಅಭ್ಯರ್ತಿಯನ್ನು ಆಯ್ಕೆ ಮಾಡಬೇಕಿದೆ.ಅದಕ್ಕೆ ಜನಸಾಮಾನ್ಯರು ಯೋಚನೆ ಮಾಡಿ ಮತ ಚಲಾಯಿಸಬೇಕು ಎಂದಿನಂತೆ ಕೆಲವರು ಹೇಳುವ ಹಾಗೆ ರಾಜಕೀಯವು ಮುಳ್ಳಿನ ಬೇಲಿಯಂತೆ, ಅದನ್ನರಿಯದೆ ಅಲ್ಲಿ ನುಗ್ಗಿದರೆ ಚುಚ್ಚುವುದು ಖಚಿತ. ಅರಿತವರು ರಾಜಕೀಯವನ್ನು ನಂಬಿಕೊಂಡು ಊಸರವಳ್ಳಿಯಂತೆ ಜೀವನ ಮಾಡುತ್ತಾರೆ ಜನರಿಗೆ ಕೊಡುವ ಸುಳ್ಳು ಭರವಸೆಗಳ ಮೂಲಕ ಜನರ ಒಳಿತನ್ನು ಕಾಣದ ಇವರು ಕುರ್ಚಿಗಾಗಿ ಕಿತ್ತಾಡುತ್ತಿರುವರು.ಜನಪ್ರತಿನಿಧಿಗಳನ್ನು ಖರೀದಿ ಮಾಡುವವರು ಮತದಾನದ ಸಮಯಕ್ಕೆ ಕೈ ಮುಗಿಯುವವರು,ಹೆಂಡ ಸಾರಾಯಿ ಹೊಳೆ ಹರಿಸುವವರು ಭರವಸೆಗಳ ಚಂದಿರ ತೋರುವವರನ್ನು ನಿಯಂತ್ರಿಸಿ ಪ್ರಸ್ತುತ ರಾಜಕೀಯ ಸ್ಥಿತಿಯನ್ನು ಬದಲಾಯಿಸಬೇಕಾಗಿದೆ.
-ಮನೋಜ್ ಕಬ್ಬಹಳ್ಳಿ,ಮೈಸೂರು.ವಿ.ವಿ, ಪತ್ರಿಕೋದ್ಯಮ ವಿಭಾಗ,ಮೈಸೂರು