ಕಲಬುರ್ಗಿ: ಮಂಗಳವಾರದಂದು ತೊಗರಿ ನಾಡು ಕಲಬುರ್ಗಿಯಲ್ಲಿ ವಿಶ್ವದ ಬಲಿಷ್ಠ ನಾಯಕ ಭಾರತದ ಶ್ರೇಷ್ಠ ಅಪ್ರತಿಮ ನಾಯಕ ಎಂದೇ ಹೆಸರಾದ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಭಾರಿ ರಣತಂತ್ರ ರೂಪಿಸಿದ್ದಾರೆ.
ಕಲಬುರ್ಗಿ ಪಟ್ಟಣದ ಹೃದಯ ಭಾಗ ಕೆ.ಎಂ.ಎಪ್.ಸಿ ಹಾಲಿನ ಡೈರಿಯಿಂದ ಸಂಜೆ 6 ಗಂಟೆಗೆ ಪ್ರಾರಂಭವಾದ ರೋಡ್ ಶೋ ನಗರೇಶ್ವರ ಶಾಲೆ ಗಂಜ್ ಪ್ರದೇಶ, ಹುಮನಾಬಾದ್ ಬೇಸ್, ಕಿರಾಣಾ ಬರಾಜ, ಬಾಂಡೆ ಬಜಾರ, ಸೂಪರ್ ಮಾರ್ಕೆಟ್, ಜಗತ್ ವೃತ್ತ , ಸ್ಟೇಷನ್ ರಸ್ತೆ ಮಾರ್ಗವಾಗಿ ಕೋಟ್ಯಂತರ ಬಿಜೆಪಿ ಅಭಿಮಾನಿಗಳ ನಡುವೆ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಎಲ್ಲರ ಕಡೆ ಕೈ ಬೀಸುತ್ತಾ ಮುಗುಳನಗೆ ತೋರುತ್ತಾ ಸಾಗಿದರು.
ಶರಣಬಸವೇಶ್ವರ ಜಾತ್ರೆಗೆ ಎಷ್ಟು ಜನ ಸೇರುತ್ತಿದ್ದರೋ ಹಾಗೇ ಮೋದಿ ಮೋಡಿಗೆ ಮರುಳಾಗಿ ರೋಡ್ ಶೋ ನೋಡಲೆಂದೇ ಜನಸಾಗರವೇ ಹರಿದು ಬಂದಿತ್ತು. ಮಹಿಳೆಯರು , ಮಕ್ಕಳು ಅಲ್ಲದೆ ಹಿರಿಯ ನಾಗರಿಕರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಮೋದಿಜಿಯವರನ್ನು ನೋಡಲು ರಸ್ತೆಯ ಅಕ್ಕ ಪಕ್ಕದ ನಿಂತು ಜೈ ಮೋದಿಜಿ ಎಂದು ಕೂಗುತ್ತಿದ್ದರು.
ಇಡಿ ಸುಮಾರು 5 ಕಿ ಮೀ ರಸ್ತೆಯ ಉದ್ದಕ್ಕೂ ಹೂವಿನ ಹಾಸಿಗೆಯೇ ಹಾಸಿದಂತೆ ಅಭಿಮಾನಿಗಳು ಸಂತೋಷದಿಂದ ಮೋದಿಜಿಯವರಿಗೆ ಹೂಗಳು ಸ್ವಾಗತ ಕೋರುತ್ತಿದ್ದ ದೃಶ್ಯ ಎಲ್ಲೆಡೆ ಕಾಣಿಸುತ್ತಿತ್ತು.
ಮಲ್ಲಿಕಾರ್ಜುನ ಖರ್ಗೆಯವರ ತವರು ಜಿಲ್ಲೆಯಲ್ಲಿ ಮೋದಿಜಿಯವರ ಈ ರೋಡ್ ಶೋದಿಂದ ಬಿಜೆಪಿ ಅಭ್ಯರ್ಥಿಗಳಲ್ಲಿ ಆತ್ಮಸ್ಥೈರ್ಯವಷ್ಠೆ ಅಲ್ಲ ಕಾಂಗ್ರೆಸ್ ಪಕ್ಷ ಭದ್ರಕೋಟೆ ಭೇದಿಸಲು ಮೋದಿಜಿಯವರ ತಂತ್ರ ಹೆಣೆದಿದ್ದಾರೆ. ರೋಡ್ ಶೋ ದಿಂದ ಪ್ರಧಾನಿಗಳೊಂದಿಗೆ ಅದ್ದೂರಿ ರೋಡ್ ಶೋದಲ್ಲಿ ಕಲಬುರ್ಗಿ ಜಿಲ್ಲೆಯ ಸಂಸದ ಡಾ|| ಉಮೇಶ ಜಾಧವ್, ಬೀದರ್ ಸಂಸದ ಭಗವಂತ ಖೂಬಾ, ಪ್ರಧಾನಿ ಜೊತೆಗಿದ್ದರು.
ರೋಡ್ ಶೋ ಸಮಯದಲ್ಲಿ ಬಂಜಾರ ಸಮುದಾಯದ ಹೆಣ್ಣು ಮಕ್ಕಳು ತಲೆಯ ಮೇಲೆ ಕಳಸಗಳನಿಟ್ಟು ನಮ್ಮ ಹೆಮ್ಮೆಯ ಪ್ರಧಾನಿಗಳಿಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತ ಕೋರುತ್ತಾ ನೃತ್ಯ ಪ್ರದರ್ಶಿಸಿದರು. ಜೈನ ಸಮುದಾಯದ ಹೆಣ್ಣು ಮಕ್ಕಳು ಡೊಳ್ಳು ಬಾರಿಸುತ್ತಾ ಮೋದಿ ಮೋದಿ ಎಂದು ಜೈ ಮೋದಿ ಹರ ಘರ ಮೋದಿ ಎಂಬ ಘೋಷಣೆಗಳೊಂದಿಗೆ ಕುಣಿಯುತ್ತಾ ತಮ್ಮ ಸಂತಸ ವ್ಯಕ್ತಪಡಿಸುವ ಮೂಲಕ ಪ್ರಧಾನಿ ಮೋದಿಜಿಯವರಿಗೆ ಭವ್ಯ ಸ್ವಾಗತ ಕೋರಿದರು.
ಇಡೀ ರಾಜ್ಯದಲ್ಲಿಯೇ ಮಂಗಳವಾರ ನಡೆದ ಕಲಬುರ್ಗಿಯಲ್ಲಿನ ರೋಡ್ ಶೋ ದಾಖಲೆಯ ರೋಡ್ ಶೋ ಆಗಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ರೋಡ್ ಶೋದಲ್ಲಿ ಸಾಕ್ಷಿಯಾದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಕಲಬುರ್ಗಿ