ಬೀದರ:ಔರಾದ ಬುಧವಾರ ಚುನಾವಣೆ ಪ್ರಚಾರಕ್ಕಾಗಿ ಔರಾದಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ತಾಲೂಕಿನ ಮಾಜಿ ಶಾಸಕ ಗುಂಡಪ್ಪಾ ವಕೀಲ ಇಂದು ಪತ್ರಿಕಾಗೋಷ್ಠಿ ನಡೆಸಿದರು.
ಕಳೆದ ಚುನಾವಣೆಯಿಂದ ನಾನು ಔರಾದ ವಿಧಾನಸಭೆಯ ಚುನಾವಣೆಗೆ ಲೋಕಲ್ ಅಭ್ಯರ್ಥಿಯನ್ನು ಹಾಕಿ ಅಂತ ಸಂಘರ್ಷ ಮಾಡಿದ್ದೇನೆ. ಆದರೆ ಹೋದ ಸಲ ಕಲಬುರ್ಗಿ ಜಿಲ್ಲೆಯ ಅಭ್ಯರ್ಥಿ ವಿಜಯಕುಮಾರ ಕೌಡಾಳೆ ಅವರಿಗೆ ನಿಲ್ಲಿಸಿದ್ದರು, ಅವರು ಸೋತ ನಂತರ, ತಾಲ್ಲೂಕಿನ ಕಡೆಗೆ ಮುಖ ಮಾಡಿ ಸಹ ನೋಡಲಿಲ್ಲ ಈ ಸಲ ಕೂಡಾ ಲೋಕಲ್ ಅಭ್ಯರ್ಥಿಯನ್ನು ಕೊಡಿ ಅಂತ ನಾನು ಸಂಘರ್ಷ ಮಾಡಿದ್ದೆ,ನಮ್ಮ ಔರಾದದಿಂದ 16 ಲೋಕಲ್ ಅಭ್ಯರ್ಥಿಗಳು ಅರ್ಜಿ ಹಾಕಿದರು ಕೂಡಾ ಇವರಲ್ಲಿ ಯಾರಿಗು ಟಿಕೆಟ ಕೊಡಲಿಲ್ಲ ಬದಲಾಗಿ ಸರಕಾರಿ ನೌಕರಿಯಿಂದ ನಿವೃತ್ತಿ ಹೊಂದಿ 68-70 ವರ್ಷ ವಯಸ್ಸಿನ, ಬೆಂಗಳೂರಿನ ನಿವಾಸಿಯಾದ ಶ್ರೀ ಭೀಮಸೇನರಾವ ಸಿಂಧೆಗೆ ಟಿಕೇಟ್ ಕೊಟ್ಟು ಕಳಿಸಿದ್ದಾರೆ.
ಇದು ಲೋಕಲ್ ಜನರ ಮೇಲೆ ಕಾಂಗ್ರೆಸ್ ಪಕ್ಷ ಅನ್ಯಾಯ ಮತ್ತು ಅವಮಾನ ಮಾಡಿದ್ದೆ ಭೀಮಸೇನ ಸಿಂಧೆ ಅವರು ಗೆದ್ದರು ಅಥವಾ ಸೋತರು ಬೆಂಗಳೂರ್ ಬಿಟ್ಟುಬಂದು ಔರಾದ ಜನರ ಮುಖ ನೋಡುವುದಿಲ್ಲ ಎಂದು ತಿಳಿಸಿದರು.
ಶ್ರೀಮಾನ ಭೀಮಸೇನರಾವ್ ಸಿಂಧೆಯವರು ನನಗೆ ಹಾಗೂ ಪಕ್ಷದ ಮುಖ್ಯ ಕಾರ್ಯಕರ್ತರಿಗೆ
ಬೆಲೆ ಕೊಟ್ಟು ಕರೆದು ನಾಮಪತ್ರ ಸಲ್ಲಿಸಬೇಕಾಗಿತ್ತು. ಒಂದು ಫೋನ ಸಹ ಮಾಡಿಲ್ಲ ಆದಾದ ನಂತರ ಕೂಡಾ ಇಲ್ಲಿಯವರೆಗೆ ನಮಗ್ಯಾರಿಗೂ ಪ್ರಚಾರಕ್ಕೆ ಕರೆಯದೇ ಅವಮಾನ ಮಾಡಿದಾರೆ ಇದು ನನ್ನ ಅವಮಾನ ಮಾತ್ರವಲ್ಲಾ ನನ್ನ ಜೊತೆಗಿರುವ ತಾಲೂಕಿನ ಜನರಿಗೂ ಅವಮಾನ ಮಾಡಿದ್ದರೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಂಧೆಯವರಿಗೆ ತಳಮಟ್ಟದ ಕಾರ್ಯಕರ್ತರ ಹಾಗೂ ಜನರ ಪರಿಚಯವಿಲ್ಲ, ಊರಿನ ಪ್ರತಿಷ್ಠಿತ ಜನರ ಬಗ್ಗೆ ಮಾಹಿತಿ
ಇಲ್ಲ, ಕೇಲವು ತಲೆ ಬುಡ ಇಲ್ಲದ ಜನ ಅವರನ್ನು ಸುತ್ತುವರೆದು ಹೋದ ಚುನಾವಣೆಯಲ್ಲಿ
ಯಾವ ರೀತಿ ವಿಜಯಕುಮಾರ ಕೌಡ್ಯಾಳಯವರನ್ನ ದುಡ್ಡು ತಿಂದು ಅವರನ್ನು ಸೋಲಿಸಿ ಕಳಿಸಿದಾರೆ. ಆದೇ ರೀತಿ ಕೆಲವು ಸಮಾಜ
ಘಾತಕ ಶಕ್ತಿಗಳು ಸಿಂಧೆ ಅವರ ಹಣ ಲೂಟಿ ಮಾಡಿ, ಸೋಲಿಸಿ ಕಳೆಸುವುದು ನಿಶ್ಚಿತ ಎಂದು ತಿಳಿಸಿದರು.
ಕಾಂಗ್ರೆಸನಲ್ಲಿ ಇಂತಹ ಅನೇಕ ಮುಜಗರದ ಸನ್ನಿವೇಶ ನಡೆಯುತ್ತವೆ ಹೀಗಾಗಿ ಈ ಎಲ್ಲಾ ಕಾರಣಗಳಿಂದ ನಾನು ಮನನೊಂದು ಪಕ್ಷ ಬಿಟ್ಟು ನನ್ನ ಮೊದಲ ಮಾತೃಪಕ್ಷಕ್ಕೆ ಸೇರುತ್ತಿದ್ದೇನೆ ಹೀಗಾಗಿ ನನ್ನ ಹಿಂಬಾಲಕರು ಹಾಗೂ ಕಾರ್ಯಕರ್ತರು
ನನ್ನ ಜೋತೆಗೆ ಇರಬೇಕು ಇದು ನನ್ನ ಅವಮಾನ ಅಲ್ಲ, ನಿಮ್ಮ ಅವಮಾನ ಹೊರಗಿನ ಮನುಷ್ಯ ಬಂದು ತಾಲೂಕಿನವರನ್ನು
ಬಿಟ್ಟು ಚುನಾವಣೆ ಮಾಡುತ್ತಾನೆಂದರೆ, ಇದು ಇಡಿ ತಾಲೂಕಿನ ಅವಮಾನ ಅಂತ ನಾನು ಭಾವಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ್ದೇನೆ
ತಾಲೂಕಿನಲ್ಲಿ ಬಿಜೆಪಿ ಪಕ್ಷ ನಾನು ಕಟ್ಟಿ ಬೆಳೆಸಿದ ಪಕ್ಷ ಆ ಪಕ್ಷದೊಂದಿಗೆ ಹೋಗಲು ನನಗೆ ಖುಷಿ ಆಗಿದೆ
ತಾವೆಲ್ಲ ನನ್ನ ಜೊತೆ ಬನ್ನಿ, ನಿಮ್ಮ ಹಿತಾಶಕ್ತಿ ನಾನು ಪ್ರಾಮಾಣಿಕವಾಗಿ ಕಾಪಾಡುತ್ತವೆ.
ಎಲ್ಲರು ಕೂಡಿ ಬಿಜೆಪಿ ಅಭ್ಯರ್ಥಿ ಪ್ರಭುಚೌಹಣರವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸೋಣ ಎಂದು ಪತ್ರಿಕಾ ಮದ್ಯದ ಮುಖಾಂತರ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವರದಿ:ಅಮರ ಮುಕ್ತೆದಾರ