ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಬೇಡ್ಕರ್ ಭವನದ ಕ್ರೀಡಾಂಗಣದಲ್ಲಿ ಆಯೋಜಿಸಿದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲೂಕಿನಲ್ಲಿ ಶಾಸಕರನ್ನಾಗಿ ದೊಡ್ಡಪ್ಪಗೌಡ ಅವರನ್ನು ತಾಲೂಕಿನ ಜನತೆ ಆಶೀರ್ವಾದ ಮಾಡಬೇಕು ಎಂದು ತಾಲೂಕಿನ ಜನರಲ್ಲಿ ಮನವಿ ಮಾಡಿದರು ಹಾಗೂ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಹಿಂದುಳಿದ ಸಮುದಾಯದವರನ್ನು ಅಲ್ಪಸಂಖ್ಯಾತ ಸಮುದಾಯದವರನ್ನು ಹಾಗೂ ಪ್ರತಿಯೊಬ್ಬ ಸ್ವಾಭಿಮಾನಿಗಳ ಪರವಾಗಿ ಜನಸಾಮಾನ್ಯರ ಪರವಾಗಿ ನಮ್ಮ ಪಕ್ಷ ಅವರ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಇದುವರೆಗೂ ಕಾಂಗ್ರೆಸ್ ಪಕ್ಷ ಜೇವರ್ಗಿ ತಾಲೂಕಿನಲ್ಲಿ ಅಲ್ಪಸಂಖ್ಯಾತರನ್ನು ಹಿಂದುಳಿದ ಸಮುದಾಯದ ವ್ಯಕ್ತಿಗಳನ್ನು ಬೆಳೆಸಿದ ಉದಾಹರಣೆ ಕೊಡಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಪಂಚಾಯತಿ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಅದೇ ರೀತಿಯಾಗಿ ವೃದ್ಧಾಪ್ಯ ವೇತನ 5000 ಕೊಡಲಾಗುವುದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ ಕೆ ಜಿ ಇಂದ ಪಿಯುಸಿವರೆಗೆ ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗುವುದು ಪ್ರತಿ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 5 ಸಿಲೆಂಡರ್ ಗ್ಯಾಸ್ ಉಚಿತವಾಗಿ ವಿತರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ವಿಧಾನಸಭಾ ಚುನಾವಣೆ ಅಭ್ಯರ್ಥಿ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಅವರು ಬೃಹತ್ ಜನ ಸಮಾವೇಶವನ್ನು ಕುರಿತು ಮಾತನಾಡಿದರು ನಾನು ಯಾವತ್ತೂ ಅಧಿಕಾರ ಇದ್ದರೂ ಅಧಿಕಾರ ಇರದ್ದರೂ ನನ್ನ ಕೈಲಾದ ಮಟ್ಟಿಗೆ ನಿಮ್ಮ ಸೇವೆ ಮಾಡುತ್ತಾ ಬಂದಿದ್ದೇನೆ ಮುಂದೆಯೂ ಮಾಡುತ್ತೇನೆ ಪ್ರತಿಯೊಬ್ಬ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಿ ಪರಿಹಾರ ಕೂಡಾ ನೀಡಿದ್ದೇನೆ ನಿಮ್ಮ ಸ್ವಾಭಿಮಾನಕ್ಕೆ ನಾನು ಯಾವತ್ತೂ ಚಿರಋಣಿ ನಮ್ಮ ಕುಟುಂಬ ಯಾವತ್ತು ಜೇವರ್ಗಿ ತಾಲೂಕಿನ ಯಡ್ರಾಮಿ ತಾಲೂಕಿನ ಜನರ ಸಮಸ್ಯೆಗಳಿಗಾಗಿ ಸದಾ ಸೇವೆ ಮಾಡಲು ಯಾವಾಗಲೂ ಸಿದ್ಧರಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮದಲ್ಲಿ ಶ್ರೀಮಂತಪ್ಪ ಪಡಿಶೆಟ್ಟಿ ಬಿಳವಾರ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಸಗಿರ್ ಪಟೇಲ್ ಸೈದಾಪುರ ಗ್ರಾಮೀಣ ಹೋರಾಟಗಾರ ಪರಶುರಾಮ್ ದಂಡಗುಲ್ಕರ. ಹನುಮಂತ್ ಬಿ ಮಲ್ಲಣ್ಣ ಸಾಹುಕಾರ ಕೊಂಡ ಬಿಳವಾರ ಪ್ರಕಾಶ್ ಅಕ್ಕಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗೇರಿ. ಜೆಡಿಎಸ್ ಮುಖಂಡರು ನಾಗಣ್ಣ ಪಡಿಶೆಟ್ಟಿ ಪ್ರಕಾಶ್ ಕೊಂಡ ಅಯ್ಯಣ್ಣ ಸ್ವಾಮಿ ಹಿರೇಮಠ ಹೊನ್ನಪ್ಪ ಸಾಹು ಕೊಡಮನಹಳ್ಳಿ ಅಯ್ಯನಗೌಡ ಪೊಲೀಸ್ ಪಾಟೀಲ್ ಜಮಖಂಡಿ
ಅಯ್ಯನಗೌಡ ಪೆಟ್ರೋಲ್ ಬಂಕ್ ಕೊಡಮನಹಳ್ಳಿ ಶಾಂತಣ್ಣ ಮಾಸ್ಟರ್ ಅಜೀಜ್ ಪಟೇಲ್ ಸಾಹೇಬ ಪಟೇಲ್ ಪೊಲೀಸ್ ಪಾಟೀಲ್ ಬಾಬಾ ಪಟೇಲ್ ಮಾಲಿ ಪಾಟೀಲ್
ದಾವಲ್ ಸಾಬ್ ಹೋಟೆಲ್ ರಾಮರೆಡ್ಡಿ ಕೊಡಮನಹಳ್ಳಿ ಮೌನೇಶ್ ತಳಗೇರಿ ಶರಣಪ್ಪ ಬಿ ಕೊಂಡ ಸಾಬ್ರಾಜ್ ಪಟೇಲ್ ದೇಸಾಯಿ ಅಶ್ಪಾಕ್ ಪಟೇಲ್ ಮಾಲಿ ಪಾಟೀಲ್ ಮೈದಾನ ಪಟೇಲ್ ಅಂಕಲಗಿ ಅರುಣ ರೆಡ್ಡಿ ಶಿವಪುರ ಇನ್ನು ಮುಂತಾದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
