ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ “ನಾವು ಮತ್ತ ಬರ್ತೀವೀ,ಐತಿ ಒಬ್ಬಬ್ಬರದು ಮುಂದ ” ಎನ್ನುತ್ತಾ ಈ ಭಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ಸಿನ ” ಕೈ ” ಗುರುತಿಗೆ ಮತ ನೀಡಿ ಕಾಂಗ್ರೆಸ್ ಪಕ್ಷದ ಪರ ನಿಲ್ಲಬೇಕು ಎಂಬ ವಿಜಯಾನಂದ್ ಕಾಶಪ್ಪನವರ ಮನವಿಗೆ ಸ್ಪಂದಿಸಿದ ಕ್ಷೇತ್ರದ ಜನ ಕಾಂಗ್ರೆಸ್” ಕೈ” ಹಿಡಿದಿದ್ದಾರೆ ಮತ ಎಣಿಕೆ ಕಾರ್ಯ ಶುರುವಾಗಿ ಮುಗಿಯುವವರೆಗೂ ಮುನ್ನಡೆ ಕಾಯ್ದುಕೊಂಡು ಬಂದು ದಾಖಲೆಯ 29700 ಮತಗಳ ಭಾರೀ ಅಂತರದಿಂದ ಅಭೂತ ಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಾನಂದ.ಎಸ್. ಕಾಶಪ್ಪನವರ ಗೆಲುವನ್ನು ತಮ್ಮ ಗೆಲುವೆಂದು ಪಕ್ಷದ ಕಾರ್ಯಕರ್ತರು, ಮುಖಂಡರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಅತ್ಯಂತ ಸಂಭ್ರಮದಿಂದ ಗ್ರಾಮದ ಬೀದಿ ಬೀದಿಗಳಲ್ಲೂ ಜಯ ಘೋಷಗಳನ್ನು ಕೂಗುತ್ತ ಪಕ್ಷದ ದ್ವಜಗಳನ್ನು ಹಾರಿಸಿ ಬೈಕ್ ರ್‍ಯಾಲಿ ನಡೆಸಿ ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿಗಳನ್ನು ಸಿಡಿಸಿ ಡಿ.ಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಒಟ್ಟಾರೆಯಾಗಿ ವಿಜಯಾನಂದ ಕಾಶಪ್ಪನವರ ಗೆಲುವು ಗ್ರಾಮಸ್ಥರಲ್ಲಿ, ಯುವಕರಲ್ಲಿ, ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಖುಷಿ ತಂದಿದೆ.ಈ ಸಂದರ್ಭದಲ್ಲಿ ಗ್ರಾಮದ ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡ್ರು, ಮಾಜಿ ತಾ. ಪಂ ಅಧ್ಯಕ್ಷ ಮಹಾಂತೇಶ್ ಕಡಿವಾಲ್, ಮಾಜಿ ಗ್ರಾ. ಪಂ ಅಧ್ಯಕ್ಷ ಮಹಮ್ಮದ್ ಸಾಬ್ ಭಾವಿಕಟ್ಟಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಮಲ್ಲಪ್ಪ ಪೋತನಾಳ, ಚನ್ನಪ್ಪ ಜಾಲಿಹಾಳ, ಚನ್ನಪ್ಪ ಜಾಲಿಹಾಳ್, ಅಮರೇಶ್ ಕೊಡಕೇರಿ, ಶರಣಪ್ಪ ಬಳಿಗಾರ, ಪ್ರಶಾಂತ ಬನ್ನಿಗೋಳ್, ಮಹಾಂತೇಶ್ ಗೋಧಿ, ಅಮಾತೆಪ್ಪ ಯರದಾಳ್, ಅಮರಪ್ಪ ಹಡಪದ, ಮಲ್ಲಯ್ಯ ಮಠ, ಬಂದೇನವಾಜ್ ಭಾಗವಾನ್, ನಜೀರ ಮುಲ್ಲಾ, ದಸ್ತಗೀರಸಾಬ್ ಶಿಂಗನಗುತ್ತಿ, ಮರಟಗೇರಿ ಗ್ರಾಮದ ಲಿಂಗರಾಜ್ ಶಿರಗುಂಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.