ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸೋಲಿಲ್ಲದ ಸರದಾರ ಯಶವಂತರಾಯಗೌಡ ಪಾಟೀಲ

ಇಂಡಿ : ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡಿದ್ದಾರೆ.
ಅವರು ೨೦೧೩,೨೦೧೮ ಮತ್ತು ಈಗ ೨೦೨೩ ರಲ್ಲಿ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಯಶವಂತರಾಯಗೌಡ ಪಾಟೀಲ ೨೦೧೩ ರಿಂದ ೨೦೨೩ ರ ವರೆಗೆ ೩೨೦೦ ಕೋಟಿ ರೂ ಅನುದಾನ ತಂದು ಅಭಿವೃದ್ದಿ ಮಾಡಿದ್ದರು. ಅದಲ್ಲದೆ ಇಂಡಿಗೆ ೨೪*೭ ಕುಡಿಯುವ ನೀರು,ಭೀಮಾಶಂಕರ ಸಕ್ಕರೆ ಕಾರ್ಖಾನೆ, ಇಂಡಿಯಲ್ಲಿ ನಿಂಬೆ ಅಭಿವೃದ್ದಿ ಮಂಡಳಿ ಸೇರಿದಂತೆ ಹತ್ತು ಹಲವಾರು ಕೆಲಸಗಳು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಯಶವಂತರಾಯಗೌಡ ಪಾಟಿಲರು ಮೊದಲ ಸುತ್ತಿನಿಂದಲೂ ಕೊನೆಯ ಸುತ್ತಿನ ವರೆಗೂ ಮುನ್ನಡೆ ಕಾಯ್ದು ಕೊಂಡು ಬಂದಿದ್ದಾರೆ.
ಯಶವಂತರಾಯಗೌಡ ಪಾಟೀಲರಿಗೆ ೭೧೭೮೫ ಮತಗಳು,ಜೆಡಿ ಎಸ್ ನ ಬಿ.ಡಿ.ಪಾಟೀಲರಿಗೆ ೬೧೪೫೬ ಮತಗಳು ಪಡೆದಿದ್ದಾರೆ.ಯಶವಂತರಾಯಗೌಡ ಪಾಟೀಲರು ೯೬೯೦ ಮತಗಳಿಂದ ಗೆದ್ದಿದ್ದಾರೆ.
ಕಳೆದ ಬಾರಿ ಯಶವಂತರಾಯಗೌಡ ಪಾಟೀಲರಿಗೆ ೫೦೪೦೧ ಮತಗಳು, ಜೆಡಿ ಎಸ್ ನ ಬಿ.ಡಿ.ಪಾಟೀಲರಿಗೆ ೪೦೪೬೩ ಮತಗಳು ಬಂದಿವೆ.
ಇಂಡಿ ಮತಕ್ಷೇತ್ರದಲ್ಲಿ ಮತಗಳು ಪಡೆದ ವಿವರ
ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ೭೧೭೮೫, ಬಿ.ಡಿ.ಪಾಟೀಲ ಹಂಜಗಿ ಜೆಡಿ ಎಸ್ ೬೧೪೫೬, ಕಾಸುಗೌಡ ಬಿರಾದಾರ ಬಿಜೆಪಿ ೩೯೮೬೨ , ಗೋಪಾಲ ಪಾಟೀಲ ಎಎಪಿ ೩೩೫೩,ನಾಗೇಶ ಶಿವಶರಣ ಬಿಎಸ್‌ಪಿ ೭೩೮,ಅಶೋಕ ಜಾಧವ ಕೆಆರ್‌ಎಸ್೯೧೫, ಕವಿತಾ ಕಟಕದೊಂಡ ಪಕ್ಷೇತರ ೫೭೨, ಎಂ.ಎ. ಬಾಗವಾನ ಪಕ್ಷೇತರ ೯೨೨,ಗೊಲ್ಲಾಳಪ್ಪಗೌಡ ಜ್ಯೋತಿಗೊಂಡ ಪಕ್ಷೇತರ ೩೭೦, ನೋಟಾ ೮೮೬ ಮತಗಳನ್ನು ಪಡೆದಿದ್ದಾರೆ

ವರದಿ. ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ