ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಪ್ಪ ಅಮ್ಮ ಇಲ್ಲದ ಯನಗುಂದಾದ ಪ್ರತಿಭಾವಂತ ಬಾಲೆಗೆ ಬೇಕಿದೆ ಪ್ರಜ್ಞಾವಂತರ ಆಶ್ರಯ

ಬೀದರ್/ಔರಾದ:ತಾಲೂಕಿನ ಯನಗುಂದಾ ಸರಕಾರಿ ಪ್ರೌಢ ಶಾಲೆಯ ಅಪ್ಪ ಅಮ್ಮ ಇಲ್ಲದ ವಿದ್ಯಾರ್ಥಿ ಬಸವಜ್ಯೋತಿ ಬಾಬುಗೊಂಡ ಹತ್ತನೇ ತರಗತಿಯಲ್ಲಿ ಪ್ರತಿಶತ 92.48%ರಷ್ಟು ಫಲಿತಾಂಶದ ಮೂಲಕ ಅಗ್ರಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ,ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದರೂ ಕೌಟುಂಬಿಕ ಸಮಸ್ಯೆ ಹಾಗೂ ಬಡತನದ ಕಾರಣ ಮುಂದಿನ ವ್ಯಾಸಂಗದ ದಿಕ್ಕು ತೋಚದಂತಾಗಿದೆ.

ಬಸವಜ್ಯೋತಿಗೆ ತಾನು ಚೆನ್ನಾಗಿ ಓದಬೇಕು,ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎನ್ನುವ ಕನಸಿದೆ ಆದರೂ ಸಧ್ಯ ಆಕೆಗೆ ತನ್ನ ಮುಂದಿನ ವಿದ್ಯಾಭ್ಯಾಸದ ಹೇಗೆ ಎನ್ನುವುದೇ ದೊಡ್ಡ ಚಿಂತೆಯಾಗಿ ಕಾಡುತ್ತಿದೆ.

ಆಕೆಯ ಮನೆಯ ಪರಿಸ್ಥಿತಿ ಸರಿಯಿಲ್ಲ,ಕಾಲೇಜ ಫೀ ಕಟ್ಟಲಾಗದ ಸ್ಥಿತಿ ಆಕೆಗೆ ದಿನನಿತ್ಯದ ಬದುಕು ನಡೆದರೆ ಸಾಕು ಎನ್ನುವ ದಯನೀಯ ಸ್ಥಿತಿ ಈಕೆಗೆ ಇದೆ. ಬಸವಜ್ಯೋತಿ ಗರ್ಭದಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡಳು,ತಾಯಿ ಮಗಳನ್ನು ಅಜ್ಜಿ ಜ್ಞಾನಬಾಯಿ ಅಜ್ಜ ಜ್ಞಾನಗೊಂಡ ಅವರಲ್ಲಿ ಬಿಟ್ಟು ಹೋಗಿದ್ದಾಳೆ,ಸಧ್ಯ ಬಸವಜ್ಯೋತಿಯ ಪಾಲಿಗೆ ಅಜ್ಜ,ಅಜ್ಜಿಯೇ ತಂದೆ ತಾಯಿ,ವಯಸ್ಸಾದ ಜೀವಕ್ಕೆ ಮೊಮ್ಮಗಳು ಪ್ರತಿಭಾವಂತೆ ಆಗಿದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ.

ಬಸವಜ್ಯೋತಿಯ ಅಜ್ಜ ಜ್ಞಾನಗೊಂಡ ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿಯಿಲ್ಲ ಹೊಟ್ಟೆ ತುಂಬಿದರೆ ಸಾಕು ಎನ್ನುವ ಬಡತನ ಯಾವುದೇ ಆಸ್ತಿ ಇಲ್ಲ, ವಯಸ್ಸಿನ ಕಾರಣ ದುಡಿಯಲು ಶಕ್ತಿ ಇಲ್ಲದ ಸ್ಥಿತಿ, ಗ್ರಾಮದ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ, ಅಜ್ಜನಿಗೆ ಮೊಮ್ಮಗಳದೇ ಚಿಂತೆ.ಸಧ್ಯ ಪ್ರತಿಭಾವಂತ ವಿದ್ಯಾರ್ಥಿ
ಬಸವಜ್ಯೋತಿ ವಿಧ್ಯಾಭ್ಯಾಸಕ್ಕೆ ಸಮಾಜದ ಪ್ರಜ್ಞಾವಂತರ ಆಶ್ರಯದ ಅವಶ್ಯಕತೆ ಇದೆ.

ಬಸವಜ್ಯೋತಿ ಪ್ರತಿಭಾವಂತ ಮಗಳು,ಉತ್ತಮ ಸ್ವಭಾವ ಮತ್ತು ಅಧ್ಯಯನಶಿಲತೆ ಮೈಗೂಡಿಸಿಕೊಂಡ ಈಕೆಗೆ ಪ್ರಜ್ಞಾವಂತರು ಸಹಾಯ ಮಾಡಿದ್ದರೆ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುತ್ತಾಳೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸುತ್ತಾರೆ ಮುಖ್ಯಗುರು ಶಾಮಸುಂದರ ಖಾನಪೂರಕರ್.

ಯನಗುಂದಾ ಶಾಲೆ ಅನೇಕ ರಚನಾತ್ಮಕ ಚಟುವಟಿಕೆಯಿಂದ ರಾಜ್ಯದ ಗಮನ ಸೇಳೆಸಿದೆ. ಶಾಲೆಯ ಬಗ್ಗೆ ಸಮಾಜದಲ್ಲಿ ಸದ್ಭಾವನೆಯಿದೆ. ಶಾಲೆಯ ಅನೇಕ ಕಾರ್ಯಚಟುವಟಿಗೆ ಗ್ರಾಮಸ್ಥರು, ಶಾಲೆಯ ಹಿತೈಸಿಗಳು ಸಹಾಯ ಹಸ್ತಾ ನೀಡಿರುವುದು ಇಲ್ಲಿ ಸ್ಮರಿಸಬಹುದು. ಸಧ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡತನ ಮತ್ತು ಕೌಟುಂಬಿಕ ಸಮಸ್ಯೆ ಅಡ್ಡಿ ಆಗಬಾರದು, ಸಮಾಜದ ಪ್ರಜ್ಞಾವಂತರು, ದಾನಿಗಳು ಸಹಾಯ ಹಸ್ತ ನೀಡಿದ್ದರೆ ಈ ಮಗಳ ಭವಿಷ್ಯ ಉಜ್ವಲವಾಗಲಿದೆ.

ಪ್ರತಿವರ್ಷ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯ ಗ್ರಾಮದ ಮುಖಂಡರಾದ ಗುಂಡಯ್ಯ ಸ್ವಾಮಿ, ವೈಜಿನಾಥ ಯನಗುಂದೆ, ಹಾಗೂ ಸುಂಧಾಳ ಗ್ರಾಮ ಪಂಚಾಯತ್ ಮಾಡಿಕೊಂಡು ಬರುತ್ತಿರುವುದು ಸ್ವಲ್ಪಮಟ್ಟಿಗೆ ಸಹಾಯವಾಗಲಿದೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ ವಚನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ಅವರು ಮಗಳಿಗೆ ಸಹಾಯ ಮಾಡುವದಾಗಿ ತಿಳಿಸಿದ್ದಾರೆ‌.

ಶಾಲಾ ಸಿಬ್ಬಂದಿ ವರ್ಗದವರು, ಹಳೆಯ ವಿದ್ಯಾರ್ಥಿಗಳು ಹಾಗೇ ಮೀತ್ರರು ಸಹಾಯ ನೀಡಲಿದ್ದಾರೆ.ತಾವು ಸಹ ಅಗತ್ಯ ಸಹಾಯ ಮಾಡುವ ಮೂಲಕ ಮಗಳ ಬದುಕಿಗೆ ಆಶಾಕಿರಣ ಮೂಡಿಸಲು ಬಸವಜ್ಯೋತಿ ಬಾಬುಗೊಂಡ ಇವರ ಬ್ಯಾಂಕ್ ಖಾತೆ ಸಂಖ್ಯೆ – 62374226920
SBI AURAD.
IFSC CODE – 0020240 ಹಣಕಾಸಿನ‌ ನೇರವು ನೀಡಬಹುದು. ಮಗಳೊಂದಿಗೆ ಮಾತನಾಡಲು ದೂರವಾಣಿ ಸಂಖ್ಯೆ 9353419036 ಗೆ ಕರೆ ಮಾಡಬಹುದು.


ಮಲ್ಲಿಕಾರ್ಜುನ ಟಂಕಸಾಲೆ ಶಿಕ್ಷಕರು ಸ.ಪ್ರೌ.ಶಾಲೆ ಯನಗುಂದಾ.
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ