ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹೀನಾಯ ಸ್ಥಿತಿಗೆ ಬರಲು ಕೇಂದ್ರ ಸರ್ಕಾರವೇ ನೇರ ಹೊಣೆಗಾರರು

ಕರ್ನಾಟಕದಲ್ಲಿ ಚಾಣಕ್ಯ ಅಮಿತ್ ಶಾ ಚುನಾವಣೆ ಬಂದರೆ ಇಡೀ ರಾಜ್ಯದ ಚಿತ್ರಣವೇ ಬದಲಾಗುತ್ತದೆ… ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತೆ,ರಾಜ್ಯದಲ್ಲಿ ಅವರು ಪ್ರಚಾರ ಮಾಡಿದರೆ ಸಾಕು ಬಿಜೆಪಿ ಪಕ್ಷ ಗೆದ್ದು ಬರುತ್ತದೆ…ಹೀಗಂತ ರಾಜ್ಯ ಬಿಜೆಪಿ ಪಕ್ಷದ ನಾಯಕರು ಭಾವಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಪ್ರಚಾರ ಆರಂಭಿಸಿದರು…ಆದ್ರೆ ರಾಜ್ಯದ ಜನತೆ ಮತದಾನ ಪ್ರಭುಗಳು ಇವರನ್ನು ನಂಬಲಿಲ್ಲ…ಕರ್ನಾಟಕ ಜನತೆ ತಕ್ಕ ಪಾಠ ಕಲಿಸಿದ್ದಾರೆ…ಬಿಜೆಪಿ ಪಕ್ಷ ಇಷ್ಟೊಂದು ಅದೋ ಗತಿಗೆ ಬರುತ್ತದೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ…ಆದ್ರೆ ಅದೆಲ್ಲವೂ ಗತಿಸಿ ಹೋಗಿದೆ… ಹೀನಾಯ ಸೋಲಿಗೆ ಕಾರಣ ಹುಡುಕುವ ಸಮಯ… ಹಾಗಾದರೆ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು..?ಕಾಂಗ್ರೆಸ್ ಪ್ರಚಂಡ ಗೆಲುವಿಗೆ ಕಾರಣವೇನು..?ಒಂದೊಂದಾಗಿ ನೋಡುತ್ತಾ ಹೋಗೋಣಾ ಬನ್ನಿ…

ಭಾರತಿಯ ಜನತಾ ಪಕ್ಷಕ್ಕೆ ಹೀನಾಯವಾಗಿ ಸೋಲಿಗೆ ಕಾರಣ-1
ರಾಜ್ಯದಲ್ಲಿ ಬಿಜೆಪಿಯನ್ನು ಯಾರು ಮುಂದೆ ನಡೆಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ರಾಜ್ಯದ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಿದರೆ ಕರ್ನಾಟಕದಲ್ಲಿ ಮೋದಿ ಬಂದು ಇಲ್ಲಿ ಅಧಿಕಾರ ನಡೆಸುವುದಕ್ಕೆ ಆಗೋದಿಲ್ಲ ಅನ್ನೋದು ರಾಜ್ಯ ಜನತೆಗೆ ಗೊತ್ತಿತ್ತು ಬಿಜೆಪಿಯನ್ನು ಮುನ್ನಡೆಸುವ ನಾಯಕರು ರಾಜ್ಯದಲ್ಲಿ ಇಲ್ಲದೆ ಹಾಗಾಗಿದೆ.ಪ್ರಧಾನಿ ಮುಖ ನೋಡಿ ಹೇಗೆ ಮತ ಹಾಕೋದು ಅನ್ನೋ ಪ್ರಶ್ನೆ ಬಲವಾಗಿ ಕಾಡಿತ್ತು…ಆಗ ಕಾಂಗ್ರೆಸ್ ಪಕ್ಷ ಮುಂದೆ ಬಂತು…

ಭಾರತಿಯ ಜನತಾ ಪಕ್ಷ ಹೀನಾಯ ಸೋಲಿಗೆ ಕಾರಣ-2:
ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಬಿಜೆಪಿ ಪಕ್ಷ ಸಮರ್ಥ ಉತ್ತರ ನೀಡದೆ ಇರುವುದಕ್ಕೆ…ಕಾಂಗ್ರೆಸ್ ಪಕ್ಷ ಆಡಳಿತ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಇಡೀ ರಾಜ್ಯದ ತುಂಬಾ ಪ್ರಚಾರ ಮಾಡಿತು.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೇಟಿಎಂ ಎಂದು ಆರೋಪ ಮಾಡಿದರು… 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ಯಾವುದೇ ದಾಖಲೆಗಳನ್ನು ಕೊಟ್ಟಿರಲಿಲ್ಲ… ಆದ್ರೆ ಗುತ್ತಿಗೆದಾರನ ಆತ್ಮಹತ್ಯೆ ಹಾಗೂ ಗುತ್ತಿಗೆದಾರರ ಸಂಘ ಪ್ರಧಾನಿಗಳಿಗೆ ಪತ್ರ ಬರೆದಿರುವುದನ್ನು ಸಾಕ್ಷಿಯಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಾ ಬಂದರು. ಅದನ್ನು ರಾಜ್ಯದ ಜನತೆ ಮನಸ್ಸಿನಲ್ಲಿ ನಾಟುವಂತೆ ಮಾಡಿದರು… ಬಿಜೆಪಿ ನಾಯಕರು ಇದನ್ನು ಸಮರ್ಥವಾಗಿ ಅಲ್ಲಗೆಳೆಯಲಿಲ್ಲ… ಬದಲಾಗಿ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರ ಮಾಡಿಲ್ಲವೇ ಎಂದು ಪ್ರಶ್ನಿಸುತ್ತಾ ಬಂದರು…ಪ್ರಧಾನಿ ನರೇಂದ್ರ ಮೋದಿ ಅವರು ಗುತ್ತಿಗೆದಾರರು ಬರೆದ ಪತ್ರಕ್ಕೆ ಚುನಾವಣೆ ಸಮಯದಲ್ಲಾದರೂ ಉತ್ತರ ಇದರ ಬಗ್ಗೆ ತೆಲೆ ಕೊಡಬಹುದಿತ್ತು… ಅದರ ಬದಲಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 85 ಪರ್ಸೆಂಟ್ ಕಮಿಷನ್ ಹೊಡೆಯುತ್ತಿದ್ದರು ಎಂದು ಹೇಳುತ್ತಾ ಬಂದುರು… ನಾವು 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡಿಲ್ಲ ಎಂದು ಹೇಳಲಿಲ್ಲ… ಹೀಗಾಗಿ ಮತದಾರರ ಮನಸ್ಸಿನಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಲವಾಗಿ ಬೇರೂರಿತ್ತು.

ಭಾರತಿಯ ಜನತಾ ಪಕ್ಷ ಹೀನಾಯ ಸೋಲಿಗೆ ಕಾರಣ-3:
ಡಬಲ್ ಇಂಜಿನ್ ಸರ್ಕಾರ 4 ವರ್ಷದಲ್ಲಿ ರಾಜ್ಯದ ಜನತೆಗೆ ಏನು ಮಾಡಿದೆ ಎಂದು ಹೇಳಲಿಲ್ಲ.ಡಬಲ್ ಇಂಜಿನ್ ಸರ್ಕಾರ ಇದ್ದರೆ ರಾಜ್ಯ ಅಭಿವೃದ್ಧಿಯಾಗುತ್ತೆ… ಕರ್ನಾಟಕವನ್ನು ನಾವು ನಂಬರ್ ಒನ್ ಸ್ಥಾನಕ್ಕೆ ತರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾ ಬಂದುರು… ಆದ್ರೆ ಮತದಾರರ ಮನಸ್ಸಿನಲ್ಲಿ ಬೇರೆಯದೇ ಓಡಾಡುತ್ತಿತ್ತು… ಸದ್ಯ 4 ವರ್ಷದಿಂದ ಇರೋದು ಡಬಲ್ ಇಂಜಿನ್ ಸರ್ಕಾರವೇ…ಆಗ ಏನು ಮಾಡಲಿಲ್ಲ… ಬರಗಾಲ ಬಂದಾಗ, ಪ್ರವಾಹ ಬಂದಾಗ ಇದೇ ಪ್ರಧಾನಿಗಳು ರಾಜ್ಯದ ಕಡೆ ತಲೆ ಹಾಕಲಿಲ್ಲ… ನಮಗೆ ಮತ್ತೆ ಅಧಿಕಾರ ಕೊಟ್ಟರೆ ನಂಬರ್ ಒನ್ ಸ್ಥಾನಕ್ಕೆ ತರುತ್ತೇನೆ ಎನ್ನುತ್ತಿದ್ದಾರೆ ಇದು ನಂಬೋದಕ್ಕೆ ಆಗೋದಿಲ್ಲ ಆಗಲೇ ರಾಜ್ಯದ ಮತದಾರರು ತೀರ್ಮಾನಿಸಿದ್ದಾರೆ…

ಭಾರತಿಯ ಜನತಾ ಪಕ್ಷ ಹೀನಾಯ ಸೋಲಿಗೆ ಕಾರಣ-4
ಕಾಂಗ್ರೆಸ್ ಪ್ರನ್ನಾಳಿಕೆಯಲ್ಲಿನ ಭರವಸೆಗಳು ಜನರು ನಂಬಿರುವುದು… ಕಾಂಗ್ರೆಸ್ ಕೊಡುವ ಭರವಸೆಗಳು ಜನರಿಗೆ ಮೆಚ್ಚುಗೆ ಆಗಿರುವುದು… ಕಾಂಗ್ರೆಸ್ ಭರವಸೆ ನೀಡಿರುವುದು ಮುಂದಿನ ದಿನಗಳಲ್ಲಿ ಜನರಿಗೆ ಸೋಮಾರಿಗಳನ್ನಾಗಿ ಮಾಡುತ್ತೇವೆ… ರಾಜ್ಯದ ಖಜಾನೆಗೆ ನಷ್ಟವಾಗುತ್ತದೆ… ರಾಜ್ಯ ಆರ್ಥಿಕವಾಗಿ ದಿವಾಳ ಯಾಗುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಾ ಬಂದರು… ಕಾಂಗ್ರೆಸ್ ಪಕ್ಷ ಕೂಡ ಉಚಿತ ಗ್ಯಾಸ್ ಸಿಲಿಂಡರ್, ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳಿಗೆ ಸಹಾಯ ಧನ ಹೀಗೆ ಹಲವಾರು ಭರವಸೆ ನೀಡುತ್ತಾ ಬಂದರು… ಜನರಿಗೆ ಇದನ್ನೇ ಬೇಕಾಗಿದ್ದು ರಾಜ್ಯದ ಖಜಾನೆಗೆ ನಷ್ಟವಾದರೂ ಪರವಾಗಿಲ್ಲ ಜನರಿಗೆ ಇಂತಹಾ ಭರವಸೆಗಳೆ ಬೇಕು… ಬಿಜೆಪಿ ಪಕ್ಷ ಜನರಿಗೆ ಇಷ್ಟವಾಗುವಂತೆ ಯಾವುದೇ ಭರವಸೆಗಳು ಕೊಡಲಿಲ್ಲ…. ರಾಜ್ಯದ ಜನತೆಗೆ ಕಾಂಗ್ರೆಸ್ ಭರವಸೆಗಳೆ ಗಮನ ಸೆಳೆದವು… ಇದೇ ಕಾರಣಕ್ಕೆ ಬಿಜೆಪಿ ಹೀನಾಯವಾಗಿ ಸೋಲಿಗೆ ಕಾರಣರಾದರು…

ಭಾರತಿಯ ಜನತಾ ಪಕ್ಷ ಹೀನಾಯ ಸೋಲಿಗೆ ಕಾರಣ-5
ಬಿಜೆಪಿ ಪಕ್ಷ ಬೂತ್ ಮಟ್ಟದ ಕಾರ್ಯಕರ್ತರಿಗೆ ಸಮರ್ಥವಾಗಿ ಸಲಹೆ ನೀಡಿದರು… ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವುದು ಸಮರ್ಥವಾಗಿ ಕೆಲಸ ಮಾಡಿತ್ತು ಬಿಜೆಪಿ ಪಕ್ಷ… ಬಿಜೆಪಿ ಪಕ್ಷದವರು ಮನೆ ಮನೆಗೆ ಹೋಗಿ ಮತದಾರರಿಗೆ ಮನವೊಲಿಸುವ ಪ್ರಯತ್ನ ಮಾಡಿದರು… ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಮತ ಹಾಕುವಂತೆ ಮನ ಹೋಲಿಸುತ್ತಾರೆ… ಬಿಜೆಪಿ ಪರ ಕೆಲಸವಾಗುತ್ತದೆ ಎಂದು ನಂಬಿದ್ದರು… ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂಬ
ತೀರ್ಮಾನ ಈ ಬಾರಿ ಅಡುಗೆ ಮನೆಗಳಲ್ಲೇ ಆಗಿರೋದು…
ಕಾಂಗ್ರೆಸ್ ಪಕ್ಷ ಮನೆಯ ಒಡತಿಗೆ ಪ್ರತಿ ತಿಂಗಳಿಗೆ ಎರಡು ಸಾವಿರ ರೂಪಾಯಿ, ಮನೆಯ ವಿದ್ಯುತ್ 200 ರೂ ಯೂನಿಟ್ ಪ್ರೀ, 10 ಕೆಜಿ ಉಚಿತ ಅಕ್ಕಿ, ಮಹಿಳೆಯರಿಗೆ ಬಸ್ ಪಾಸ್ ಉಚಿತ ಹೀಗೆ ಹತ್ತು ಹಲವಾರು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷ ಇದೆಲ್ಲಾ ಮಹಿಳೆಯರಿಗೆ ಉಪಯೋಗವಾಗುತ್ತದೆ… ಹೀಗಾಗಿ ಬೂತ್ ಮಟ್ಟದ ತಂತ್ರಗಾರಿಕೆಗಿಂತ, ಅಡುಗೆ ಮನೆಯ ತಂತ್ರಗಾರಿಕೆ ಈ ಬಾರಿ ಕಾಂಗ್ರೆಸ್ ಪಕ್ಷ ಚೆನ್ನಾಗಿ ಕೆಲಸ ಮಾಡಿದೆ…

ಕಾರಣ-6
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಭಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳಿದರು ಇದು ನಾಲ್ಕೈದು ದಿನಗಳು ಕಾಲ ಕಳೆದಿದೆ… ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ ಕದಡುವ ಯಾವುದೇ ಸಂಸ್ಥೆಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿತು…ಪಿಎಪ್ಐ ಆಗಿರಬಹುದು ಭಜರಂಗದಳ ಆಗಿರಬಹುದು ಎಂದು ಉದಾಹರಣೆ… ಕಾಂಗ್ರೆಸ್ ಪಕ್ಷ ಭಜರಂಗದಳವನ್ನು ನಿಷೇಧ ಮಾಡಲು ಹೊರಟಿದೆ…ಇದು ಹಿಂದೂಗಳಿಗೆ ಮಾಡುವ ಅವಮಾನ ಎಂದು ಬೊಬ್ಬೆ ಹೊಡೆಯುವುದಕ್ಕೆ ಶುರು ಮಾಡಿತು… ಮೋದಿಯವರು ಹೋದಲ್ಲೆಲ್ಲಾ ಜನರ ಕೈಯಿಂದ ಜೈ ಭಜರಂಗ ಎಂದು ಕೂಡಿಸಿದರು… ಭಜರಂಗದಳ ನಿಷೇಧ ಮಾಡೋದು ನೇರವಾಗಿ ಆಂಜನೇಯನಿಗೆ ಮಾಡುವ ಅವಮಾನ ಎಂದು ಹೇಳಲಾಯಿತು… ಕಡೆಯ ನಾಲ್ಕೈದು ದಿನ ಬಿಜೆಪಿ ನಾಯಕರು ಇದೇ ವಿಷಯವನ್ನು ಹೇಳುತ್ತಲೇ ಕಾಲ ಕಳೆದರು… ಆದ್ರೆ ಹಿಂದುತ್ವ ಹಾಗೂ ಧರ್ಮ ಆಧಾರಿತ ಭಾವನಾತ್ಮಕ ವಿಚಾರಗಳು ಕರ್ನಾಟಕ ಜನಕ್ಕೆ ಯಾವತ್ತು ಕನೆಕ್ಟ್ ಆಗುವುದಿಲ್ಲ… ಕರಾವಳಿ ಜನರು ಮಾತ್ರ ಈ ವಿಚಾರಗಳನ್ನು ಹೆಚ್ಚು ಮಾತನಾಡುತ್ತಾರೆ… ಆದ್ರೆ ಕರ್ನಾಟಕ ಬಹುತೇಕ ಭಾಗದ ಜನಕ್ಕೆ ಇಂತಹ ಧರ್ಮದ ವಿಚಾರಗಳು ಬೇಕಾಗಿಯೇ ಇಲ್ಲ … ಅಷ್ಟೇ ಏಕೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಹುಪಾಲು ಜನಕ್ಕೆ ಭಜರಂಗದಳ ಸಂಘಟನೆ ಅಂದರೆ ಏನು..? ಅದು ಏನು ಮಾಡುತ್ತೆ ಅನ್ನೋದು ಗೊತ್ತಿಲ್ಲ… ಹೀಗಾಗಿ ಈ ವಿಚಾರ ಜನರಿಗೆ ಕನೆಕ್ಟ್ ಆಗಲೇ ಇಲ್ಲ… ಕನೆಕ್ಟ್ ಆಗುವ ಕರಾವಳಿ ಭಾಗದಲ್ಲಿ ನಮಗೆ ಮಾತು ಬರೋಲ್ಲ ಅಂತ ಕಾಂಗ್ರೆಸ್ ಪಕ್ಷ ತೀರ್ಮಾನಿಸಿದ್ದರು… ಹೀಗಾಗಿ ಬಿಜೆಪಿ ಪಕ್ಷ ಅದೇ ವಿಚಾರ ಮಾತನಾಡಲಿ ನಾವು ಬೇರೆಯದನ್ನು ಜನಕ್ಕೆ ಹೇಳೋಕೆ ಹೋರಟರು…
ಬಿಜೆಪಿಯವರು ಭಜರಂಗದಳವನ್ನು ನಿಷೇಧ ಮಾಡುವುದೇ ಹಿಂದುತ್ವಕ್ಕೆ ಮಾಡುವ ಅನುಮಾನ ಆಂಜನೇಯನಿಗೆ ಮಾಡುವ ಅಪಮಾನ ಎನ್ನುತ್ತಿದ್ದರೆ, ಅದಕ್ಕೆ ಕಾಂಗ್ರೆಸನವರು ಅದಕ್ಕೆ ತಕ್ಕ ಟಾಂಗ್ ಕೊಡುತ್ತಾ ಬಂದರು… ದೇವರು ಹೆಸರಿಟ್ಟುಕೊಂಡವರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ವಿಧಿಸಿದರೆ ದೇವರಿಗೆ ಹೇಗೆ ಅವಮಾನ ಆಗುತ್ತದೆ ಎಂದು ಪ್ರಶ್ನಿಸಿದರು ಜೊತೆಗೆ ನೀವೊಬ್ಬರೇ ಹಿಂದೂಗಳಲ್ಲಿ, ನೀವೊಬ್ಬರೇ ಹನುಮಾನ್ ಭಕ್ತರಲ್ಲಿ ಸಾರಿ ಸಾರಿ ಹೇಳಿದರು… ಡಿ.ಕೆ. ಶಿವುಕುಮಾರ ಅವರಂತೂ ನಾನು ಹನುಮಾನ್ ಭಕ್ತ ಎಂದರು… ಹನುಮಾನ್ ದೇಗುಲಗಳಿಗೆ ಭೇಟಿ ಕೊಟ್ಟರು… ನಮ್ಮ ಸರ್ಕಾರ ಬಂದರೆ ಹನುಮಂತನ ದೇವಸ್ಥಾನಗಳನ್ನು ಕಟ್ಟಿಸುತ್ತೇವೆ ಎಂದು ಹೇಳಿದರು… ಹನುಮಾನ್ ಹುಟ್ಟಿದ ಸ್ಥಳದ ಅಭಿವೃದ್ದಿಗೆ ಮಂಡಳಿ ಸ್ಥಾಪನೆ ಮಾಡುತ್ತೇನೆ ಎಂದರು… ಇದನ್ನು ಮತದಾರರು ನಂಬಿದ್ದರು…

ಭಾರತಿಯ ಜನತಾ ಪಕ್ಷ ಹೀನಾಯ ಸೋಲಿಗೆ ಕಾರಣ-7
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗಳನ್ನು ಮಾಡುತ್ತಾ ಹೋಗುತ್ತಿದ್ದರೆ… ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಸಾಮಾನ್ಯ ಜನರ ಬಳಿ ಹೋಗುತ್ತಿದ್ದರು… ರಾಹುಲ್ ಗಾಂಧಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದು… ಫುಡ್ ಡೆಲಿವರಿ ಬಾಯ್ ಜೊತೆ ಸಂವಾದ ನಡಿಸಿದ್ದು, ಅವರ ಜೊತೆ ಊಟ ಮಾಡಿದ್ದು, ಹೀಗೆ ಜನ ಸಾಮಾನ್ಯರ ಜೊತೆ ಬೆರೆತು ಹೋದರು… ಆಗಿ ಜನ ಸಾಮಾನ್ಯರ ಕಾಂಗ್ರೆಸ್ ಪಕ್ಷ ಮೇಲೆ ವಿಶ್ವಾಸ ಮೂಡಿಸುತ್ತಾ ಬಂದರು…

-8
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಚುಣಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳಲ್ಲಿ ಶೇ. 99 ರಷ್ಟು ಈಡೇರಿಸಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಪಟ್ಟಿ ಕೊಡುತ್ತಲೇ ಬಂದಿತು… ನಾವು ಆಗ ಹೇಳಿದ್ದನ್ನು ಮಾಡುತ್ತೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಡುತ್ತಾ ಬಂದರು… ಆದ್ರೆ ಬಿಜೆಪಿ ಪಕ್ಷ ಆರನೂರಕ್ಕೂ ಹೆಚ್ಚು ಭರವಸೆಗಳನ್ನು ಕಳೆದ ಚುನಾವಣೆಯಲ್ಲಿ ನೀಡಿದರು… ಆದ್ರೆ ಅದರಲ್ಲಿ ಹತ್ತು ಪರ್ಸೆಂಟ್ ಭರವಸೆಗಳನ್ನು ಕೂಡಾ ಈಡೇರಿಸಲಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದರು… ಆದ್ರೆ ಬಿಜೆಪಿ ಪಕ್ಷ ಇದಕ್ಕೆ ಉತ್ತರವೇ ನೀಡಲಿಲ್ಲ… ನಾವು ಇಂತಹ ಭರವಸೆಗಳನ್ನು ಕೊಟ್ಟಿದ್ದೇವೆ… ಹೀಗಾಗಿ ಮತದಾರರು ಬಿಜೆಪಿ ಏನನ್ನೂ ಮಾಡಿಲ್ಲ ಎಂದು ಜನರು ನಂಬಿದ್ದರು…ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಯಿತು.

– ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ