ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊನ್ನಾಳಿಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ

ದಾವಣಗೆರೆ:
ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಂಪಿ ರೇಣುಕಾಚಾರ್ಯ ಸೋಲನ್ನ ಅನುಭವಿಸಿ ಮತ್ತೊಮ್ಮೆ ಮಾಜಿ ಆಗಿದ್ದಾರೆ ,ನಿರೀಕ್ಷೆಯಂತೆ ಜಾತಿವಾರು ಮತಗಳ ಲೆಕ್ಕದಂತೆ ಎಂಪಿಆರ್ ಹೊಡೆತ ಬಿದ್ದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಡಿಜಿ ಶಾಂತನಗೌಡರು ಭರ್ಜರಿ ಜಯಸಾಧಿಸಿದ್ದಾರೆ
ಈ ಬಾರಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಂತ ಎಂಪಿ ಆರ್ ಅವರಿಗೆ ಕ್ಷೇತ್ರದಲ್ಲಿ ಪ್ರತಿಬಾರಿಯಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ನಡೆಯಿತು 2018 ರಲ್ಲಿ ಕೇವಲ 4233 ಮತಗಳ ಅಂತರದಿಂದ ಜಯಭೇರಿ ಬಾರಿಸಿದಂತ ಬಿಜೆಪಿ ರೇಣುಕಾಚಾರ್ಯರಿಗೆ
ಈ ಬಾರಿ ಗೆಲ್ಲುವ ಅತ್ಮವಿಶ್ವಾಸವಿತ್ತು ಆದರೆ ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಲ್ಲಿ ಇವರ ವಿಶ್ವಾಸ ಕೊಚ್ಚಿ ಹೋಗಿದೆ
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದಂತ ಡಿಜಿಎಸ್ ಇವರು ಇದು ನನ್ನ ಕೊನೆಯ ಚುನಾವಣೆ ಎಂಬ ಬ್ರಹ್ಮಾಸ್ತ್ರದಿಂದ ಜನರ ಅನುಕಂಪ ಅಲೆಯನ್ನು ಪಡೆದರು
ಎಂಪಿ ಅವರಿಗೆ ತಾನು ಕೋವಿಡ್ ಸಮಯದಲ್ಲಿ ಮಾಡಿರುವ ಕೆಲಸ ತನ್ನ ಕೈ ಹಿಡಿಯುತ್ತದೆ ಎಂದು ಪ್ರಬಲ ನಂಬಿಕೆಯು ಅವರಿಗೆ ಮುಳುವಾಯಿತು ನಾನು ಮಾಡಿರುವ ದಾನ,ಸಾರ್ವಜನಿಕ ಕೆಲಸ,ನನ್ನ ಪರ ಮತ ನೀಡುತ್ತಾನೆ ಮತದಾರ ಎಂಬ ದೃಢ ನಿರ್ಧಾರದಲ್ಲಿ ಎಂಪಿಆರ್ ಮೈಮರೆತರು
1 ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಸ್ತ್ರ ಕುರುಬ ಸಮಾಜದ ಮತಗಳನ್ನು ಸೆಳೆಯಿತು
2 ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ಹಿಂಪಡದಿದ್ದರಿಂದ ಲಿಂಗಾಯತ ಮತಗಳು ಡಿಜೆ ಎಸ್ ಪರವಾದವು
3 ಇದು ನನ್ನ ಕಡೆ ಚುನಾವಣೆಯೆಂಬ ಡಿಜೆ ಎಸ್ ಅಸ್ತ್ರವು ಕೆಲಸ ಮಾಡಿತ್ತು
ಕ್ಷೇತ್ರದ ಜನ ಲೆಕ್ಕಚಾರ ಇಟ್ಟಿದ್ದರು ಏನೇ ಆದರೂ ಇಬ್ಬರಲ್ಲಿ ಒಬ್ಬರು .1,000 ಅಥವ 2000ಸಾವಿರ ಮತಗಳ ಅಂತರದಲ್ಲಿ ಗೆಲುವು ನಿರೀಕ್ಷಿಸಿದ್ದರು
ಕ್ಷೇತ್ರದ ಜನರ ಲೆಕ್ಕಾಚಾರ ಖುಷಿಯಾಯಿತು ಡಿಜೆ ಶಾಂತನಗೌಡರು 17,560 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು ಎಂಪಿ ಅವರಿಗೆ 74, 832 ಮತಗಳು
ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದ ಕಾರಣ ಕ್ಷೇತ್ರದಲ್ಲಿ ರೇಣುಕಾಚಾರ್ಯರು ಸಾಕಷ್ಟು ಕೆಲಸ ಮಾಡಿದರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ ಪಿ ಆರ್ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದರು ಹೀಗಾಗಿ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಇರಲಿಲ್ಲ ಎಂಬ ನಂಬಿಕೆಯವರಿಗೆ ಹೊಡೆತ ನೀಡಿತು ಆದರೆ ಮತದಾರರ ಮನವೊಲಿಸುವಲ್ಲಿ ಎಂಪಿಆರ್ ಹಿಂದೆ ಬಿದ್ದರು ಜೊತೆಗೆ ಅತಿಯಾದ ಆತ್ಮವಿಶ್ವಾಸ ಅವರಿಗೆ ಮುಳುವಾಯಿತು
-ಪ್ರಭಾಕರ ಹೊನ್ನಾಳಿ ತಾಲೂಕಿನ ನ್ಯೂಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ