ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮುಖ್ಯಮಂತ್ರಿ ಸ್ಥಾನಕ್ಕೆ ನನ್ನನು ನನ್ನ ಜಾತಿಯಿಂದ ಗುರುತಿಸಬೇಡಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ ಗುರುತಿಸಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ


ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟ ಬಹುಮತದಿಂದ ಜನತೆ ಆರಿಸಿ ಕಳಿಸಿದ್ದಾರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಾರಿಗೆ ಎಂಬುವುದು ಯಕ್ಷಪ್ರಶ್ನೆಯಾಗಿದೆ. ರಾಜಕೀಯ ವಿದ್ಯಮಾನಗಳಲ್ಲಿ ಡಿ.ಕೆ.ಶಿವಕುಮಾರ ಇನ್ನೊಂದು ಕಡೆ ಸಿದ್ದರಾಮಯ್ಯ ತಮಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ಇಬ್ಬರು ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಅಧಿಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ದೆಹಲಿ ನಾಯಕರು (ಹೈಕಮಾಂಡ್) ಯಾರಿಗೆ ಅವಕಾಶ ನೀಡುತ್ತಾರೆ ಅಂತ ಕಾದುನೋಡಬೇಕಾಗಿದೆ ಆದರೆ ರಾಜ್ಯದ ಚುನಾವಣೆಯಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ನಾಯಕನಾದರು ಅಚ್ಚರ ಪಡುವಂತಿಲ್ಲ ಯಾಕೆಂದರೆ ರಾಷ್ಟ್ರೀಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಕೂಡಾ ಇದೆ
ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈಗ 82 ವರ್ಷ ವಯಸ್ಸು. ಖರ್ಗೆ ಅವರ ತವರು ಜಿಲ್ಲೆ ಕಲಬುರ್ಗಿ…ಪಕ್ಷಕ್ಕಾಗಿ ಶ್ರದ್ಧೆಯಿಂದ ದುಡಿದವರು. ತಳಮಟ್ಟದ ಪ್ರಚಾರದಿಂದ ತಂತ್ರಗಾರಿಕೆಯವರೆಗೆ ಎಲ್ಲೆಡೆ ಸಕ್ರಿಯಾರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರ ಉಪಸ್ಥಿತಿಯಲ್ಲಿ ದಲಿತ ಮತದಾರರನ್ನು ಕಾಂಗ್ರೇಸ್ ನತ್ತ ಒಲವು ಹೊಂದಲು ಹಾಗೂ ಪಕ್ಷವನ್ನು ಒಗ್ಗೂಡಿಸುವಲ್ಲಿ ಸಫಲವಾಯಿತು.
ರಾಜ್ಯದಲ್ಲಿ 36 ಎಸ್ ಸಿ (ಪರಿಶಿಷ್ಟ ಜಾತಿ) ಮತ್ತು 15 ಎಸ್ ಟಿ (ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರಗಳಿವೆ. ಈ ಪೈಕಿ 2018 ರ ಕ್ರಮವಾಗಿ 12 ಮತ್ತು 8 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತು. ಈ ಬಾರಿ ಒಟ್ಟು 15 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಅಂದರೆ ಕ್ರಮವಾಗಿ 21 ಮತ್ತು 14 ಸ್ಥಾನಗಳಲ್ಲಿ ಗೆದ್ದುಬೀಗಿದೆ.
ಮತ್ತೊಂದೆಡೆ , 2018 ರಲ್ಲಿ 16 ಎಸ್ ಸಿ ಕ್ಷೇತ್ರಗಳಲ್ಲಿ ಗೆದ್ದಿದೆ. ಬಿಜೆಪಿ ಈ ಬಾರಿ 12 ಸ್ಥಾನಗಳಿಗೆ ಕುಸಿದಿದೆ. ಅಲ್ಲದೆ ಒಂದೇ ಒಂದು ಎಸ್ ಟಿ ಸ್ಥಾನವನ್ನು ಗೆಲ್ಲುವಲ್ಲಿ ವಿಪುಲವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ (ಎಸ್ ಸಿ ಮೀಸಲಾತಿ)15 ರಿಂದ 17% (ಎಸ್ ಟಿ) 3 ರಿಂದ 5% ವಿಚಾರದಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ ಬಿಜೆಪಿ ಸರ್ಕಾರ ಈ ಸಮುದಾಯಗಳ ಮತ ಪಡೆಯಲು ಸಾಧ್ಯವಾಗಲಿಲ್ಲ.
ಬಿಜೆಪಿ ಕಾರ್ಯತಂತ್ರದ ಲೋಪಗಳನ್ನು ಎತ್ತಿಹಿಡಿದು ದಲಿತ ಮಾತುಗಳನ್ನು ಕಾಂಗ್ರೆಸ್ ನತ್ತ ತಿರುಗಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದರು. ದಲಿತರ ಒಟ್ಟು ಮಾತುಗಳಲ್ಲಿ ಶೇ60 ರಷ್ಟು ಮಾತುಗಳನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ.ಕಳೆದ ಚುನಾವಣೆಗೆ ಹೋಲಿಸಿದರೆ.ಶೇ 14 ರಷ್ಟು ದಲಿತ ಮಾತುಗಳನ್ನು ಕಾಂಗ್ರೆಸ್ ಪಕ್ಷ ಗಳಿಸಿದೆ.
ಕಾಂಗ್ರೆಸ್ ಪಕ್ಷ ಅತ್ಯಂತ ಪ್ರಭಾವಿ ದಲಿತ ನಾಯಕರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ದಲಿತ ಸಂಘರ್ಷ ಸಮಿತಿ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ತರುವಾಯ ದಲಿತ ಸಂಘರ್ಷ ಸಮಿತಿ ಹಲವಾರು ಬಾಣಗಳು ಏಪ್ರಿಲ್ ನಲ್ಲಿ ಪಕ್ಷಕ್ಕೆ ಬೆಂಬಲ ಘೋಷಿಸಿದವು. ಬಿಜೆಪಿ ಆರ್.ಎಸ್.ಎಸ್ ಅನ್ನು ಮಣಿಸಲು ಎಲ್ಲಾ ಬಣಗಳು ಒಗ್ಗೂಡುವ ಸಮಯ ಅದು.
ಅಲ್ಲದೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಸಕ್ರಿಯವಾಗಿದ್ದರು.
ಎಡಗೈ ದಲಿತರು ಮತ್ತು ಬಲಗೈ ದಲಿತರು – ಎರಡೂ ಸಮುದಾಯದಿಂದ ಗೆಲ್ಲಬಲ್ಲ ಉತ್ತಮ ವ್ಯಕ್ತಿಗಳಿಗೆ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳುವಲ್ಲಿ ಅವರು ಪಾತ್ರ ವಹಿಸಿದ್ದರು. ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಅವರು ಯಾವಾಗಲೂ ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಮಾತನಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದರು.
1972 ರಿಂದ 2009 ವರೆಗೆ ಗುರಮಿಠಕಲ್ ಮತ ಕ್ಷೇತ್ರದಿಂದ 37 ವರ್ಷಗಳ ಕಾಲ ಶಾಸಕರಾಗಿ ಮತ್ತು 2009 ರಿಂದ 2019 ರ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ ತಾಳ್ಮೆಯಲ್ಲಿ ಹೆಸರಾದ ವ್ಯಕ್ತಿತ್ವ ಉಳ್ಳವರು ಸರಳ ಸಜ್ಜನಿಕೆಯ ವ್ಯಕ್ತಿ ಇವರಿಗೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಸಿಗಬಾರದು. ಇದಕ್ಕೆ ಅವರು ದಲಿತ ಹಿನ್ನೆಲೆ ಕಾರಣವೆಂದು ಅನೇಕರು ಹೇಳುತ್ತಾರೆ. ಮತ್ತು ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿಲ್ಲವೆಂದು ಕಾಂಗ್ರೆಸ್ ಅನ್ನು ಟೀಕಿಸುತ್ತಾರೆ. ಆದರೆ ತಾನೊಬ್ಬ ದಲಿತ ನಾಯಕನೆಂದು ಗುರುತಿಸಿಕೊಳ್ಳುವ ಗೋಜಿನಿಂದ ಮಲ್ಲಿಕಾರ್ಜುನ ಖರ್ಗೆ ದೂರ ಉಳಿದ ವ್ಯಕ್ತಿ ಇವರು.
2018 ರ ಚುನಾವಣೆ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನು ಮಾಡಬೇಕು ಕೂಗು ಕೇಳಿಬಂತು ದಲಿತರನ್ನು ಮುಖ್ಯಮಂತ್ರಿ ಮಾಡುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ನನ್ನನು ನನ್ನ ಜಾತಿಯಿಂದಲ್ಲ ಹಿರಿತನದ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಗುರುತಿಸಬೇಕು ಎಂದು ಹೇಳಿದರು.
ಜಗಜೀವನ್ ರಾವ್ ನಂತರ ಪಕ್ಷದ ಇತಿಹಾಸದಲ್ಲಿ ಎರಡನೇ ದಲಿತ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಮೇಲೊಯ್ಯಲು ಸರಿಯಾದ ಹಾದಿಯಲ್ಲಿ ಎಲ್ಲಾ ರಾಜ್ಯದ ನಾಯಕರನ್ನು ಕೊಂಡೊಯ್ದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುಣಾವಣೆ ಎದುರಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ 82 ಇಳಿ ವಯಸ್ಸಿನಲ್ಲಿ ನಿರಂತರ ಸಮಾವೇಶ
82 ನೇ ವಯಸ್ಸಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗೆ ಮುಂಚಿತವಾಗಿ ರಾಜ್ಯದಾದ್ಯಂತ 40 ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಜಿಲ್ಲಾ ಮುಖಂಡರನ್ನು ಭೇಟಿಯಾಗುವುದರಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸಲು ಅವಿರತವಾಗಿ ದುಡಿದಿದ್ದಾರೆ. ಪಕ್ಷದ ಪ್ರಚಾರದಲ್ಲಿ ಎಲ್ಲಾ ಕಡೆ ಇವರು ಗೋಚರಿಸುತ್ತಿದ್ದರು.
ಆದರೆ ಡಿ.ಕೆ.ಶಿವುಕುಮಾರ ಮತ್ತು ಸಿದ್ದರಾಮಯ್ಯ ಅವರಂತೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ ಖರ್ಗೆ ಪಕ್ಷದ ಅಧ್ಯಕ್ಷರಾದಾಗಿನಿಂದ ರಾಜ್ಯದಾದ್ಯಂತ ಅವರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಗಮನಿಸಿದೆ. ಅವರು ರಾಷ್ಟ್ರೀಯ ನಾಯಕರಾಗಿದ್ದರೂ ಈ ವರ್ಷ ರಾಜ್ಯದಲ್ಲಿ ಎಲ್ಲಾ ತಳಮಟ್ಟದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರನ್ನು ಕೇಳಲಾಗಿತ್ತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.
ಮೇ 6 ರಂದು ಹುಬ್ಬಳ್ಳಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜಂಟಿಯಾಗಿ ಮೆಗಾ ಸಮಾವೇಶ ದಿಂದ ದೂರವಿದ್ದರು. ಕರ್ನಾಟಕ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಸೋನಿಯಾ ಗಾಂಧಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಷ್ಟ ಪ್ರಚಾರ ನಡೆಸಿದರು. ಅವರು ಸಮಾವೇಶಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿದ ನಾಯಕ ಖರ್ಗೆ
ರಾಜ್ಯ ಚುಣಾವಣೆಯಲ್ಲಿ ಖರ್ಗಯವರು ಉಪಸ್ಥಿತಿಯು ಕಾಂಗ್ರೆಸ್ ಆಂತರಿಕ ಕದನವನ್ನು ಹದಮಇಡಉವಲ್ಲಇ ಪ್ರಮುಖ ಪಾತ್ರ ವಹಿಸಿದ್ದರು. ಡಿ.ಕೆ.ಶಿವುಕುಮಾರ ಮತ್ತು ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಆಕಾಂಕ್ಷಿಗಳೆಂದುಕೊಂಡೇ ಪ್ರಚಾರದಲ್ಲಿ ಕಣಕ್ಕಿಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದವು
ಈ ಸಮಯದಲ್ಲಿ ಖರ್ಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಇಬ್ಬರೂ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಎಂದು ಹೇಳಲಾಗಿದೆ.
ಅವರು ಕೇವಲ ಹಿರಿಯ ನಾಯಕರಾಗಿ ಮಾತ್ರವಲ್ಲದೇ ಒಬ ರಾಷ್ಟ್ರೀಯ ನಾಯಕರಾಗಿಯೂ ಅಧಿಕಾರ ಹೊಂದಿದ್ದಾರೆ. ಅವರು ಸಣ್ಣ ವಿವಾದಕ್ಕೂ ಅದು
ಆಸ್ಪದ ಕೊಡದಂತೆ ರಾಜ್ಯದ ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸಿ‌. ಚುನಾವಣೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ ಕೆಲಸ ಮಾಡಿದರು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ