ಬೆಂಗಳೂರು ನಗರ ವ್ಯಾಪ್ತಿಗೆ ಒಳಪಡುವ ಬಾಗಲಗುಂಟೆ ಪೊಲೀಸ್ ಸ್ಟೇಷನ್ ಸಿಬ್ಬಂದಿ ವರ್ಗವು ಹೋಂ ಗಾರ್ಡ ಶ್ರೀನಿವಾಸ್ ಎಂಬುವರನ್ನುಇಟ್ಟುಕೊಂಡು ಬೀದಿಬದಿ ವ್ಯಾಪಾರಿಗಳ ಬಳಿ 50,100,500 ರಂತೆ ಪ್ರತಿದಿನ ಹಫ್ತಾ ವಸೂಲಿ ಮಾಡುತ್ತಿದ್ದು ಇದನ್ನು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಖಂಡಿಸಿ ದಾಸರಹಳ್ಳಿ ವಲಯ ಕೆಆರ್ ಎಸ್ ಪಕ್ಷದ ಕಾರ್ಯಕರ್ತರಾದ ಬೆಂಗಳೂರು ನಗರ ಕಾರ್ಯದರ್ಶಿ ಅಪ್ಪಾಜಿ ಗೌಡ್ರು,ಎಸ್ ಸಿ ಎಸ್ ಟಿ ಘಟಕ ಪದಾಧಿಕಾರಿಗಳಾದ ರಂಗರಾಜು,ಉಪಾಧ್ಯಕ್ಷರಾದ ತಿಪ್ಪೇಶ್,ಚೆನ್ನಯ್ಯ, ನಾಗರಾಜ್,ಅಶ್ವಥ್,ರಾಜು,ಕಾಂತರಾಜು ಮತ್ತು ಮಂಜು ಅವರು ಪೊಲೀಸ್ ಠಾಣೆಯ ಬಳಿ ಹೋಗಿ ವಸೂಲಿ ಮಾಡುತ್ತಿದ್ದ ಹೋ ಗಾರ್ಡನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
