ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಆರ್ ಬಿ ತಿಮ್ಮಾಪೂರಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಹೈ ಕಮಾಂಡಗೆ ಮಾದಿಗ ಸಮುದಾಯ ಒತ್ತಾಯ

ಕೊಟ್ಟೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ತಾಲೂಕಾಧ್ಯಕ್ಷರಾದ ಟಿ.ಹನುಮಂತಪ್ಪ ವಕೀಲರು ಮಾತನಾಡಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಈ ಮೂಲಕ ಮನವಿ
ಮಾಡಿಕೊಳ್ಳುವುದೇನೆಂದರೆ ಎಡಗೈ ಸಮುದಾಯ ಮುಧೋಳ ಕ್ಷೇತ್ರದ ಶಾಸಕರಾಗಿರುವ ಆರ್ ಬಿ
ತಿಮ್ಮಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಅವಳಿ ಜಿಲ್ಲೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದ್ದರು.

ಈವರೆಗೆ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಯಾವ ಫಲಾಪೇಕ್ಷೆಯನ್ನು ಅಪೇಕ್ಷಿಸದೆ ಜನ ಸೇವೆಗೆ ಬದ್ಧರಾಗಿ. ಪಕ್ಷ ಸಂಘಟಿಸಿ ಕೆಲಸ ಮಾಡಿದ ಮಾಜಿ ಸಚಿವ ತಿಮ್ಮಾಪೂರರವರಿಗೆ ಕಾಂಗ್ರೇಸ್‌ ಪಕ್ಷದಿಂದಲೂ ಸಹ ಸಾಕಷ್ಟು ಬೆಂಬಲ, ಪ್ರೋತ್ಸಾಹ ದೊರಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಪ್ರತಿ ಬೆಳವಣಿಗೆಯಲ್ಲಿ ಕಾಂಗ್ರೇಸ್ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತನವರೆಗೂ ಮತ್ತು ಅಭಿಮಾನಿಗಳು ಮತ್ತು ನಾಯಕರು ಜೊತೆಯಾಗಿ ನಿಂತು,
ಮಾಜಿ ಮುಖ್ಯಮಂತ್ರಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರನ್ನು ಹೀನಾಯವಾಗಿ ಸೋಲಿಸುವ ಮೂಲಕ ತಮ್ಮ 20ವರ್ಷದ ಕಹಿಬೇವಿಗೆ ಜೇನುತುಪ್ಪದ ಸವಿಯ
ವಿಜಯ ಪತಾಕೆ ಹಾರಿಸಿದ್ದಾರೆ.

ಈ ಮೂಲಕ
ಆರ್. ಬಿ. ತಿಮ್ಮಾಪೂರರನ್ನು 2023ರ ಕಾಂಗ್ರೇಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ರಾಜ್ಯದ ಮಾದಿಗ ಎಡಗೈ ಸಮುದಾಯವು ಕಾಂಗ್ರೆಸ್ ಪಕ್ಷದ ಹೈ ಕಮಾಂಡವು ಸಾಮಾಜಿಕ ನ್ಯಾಯದಡಿಯಲ್ಲಿ ಆರ್ ಬಿ ತಿಮ್ಮಾಪೂರಗೆ ಉಪ ಮುಖ್ಯಮಂತ್ರಿ ಸ್ಥಾನ ಒದಗಿಸುತ್ತಾರೆಂದು ನಂಬಿದ್ದೇವೆ.

ಶ್ರೀಯುತರು 1989 ರಲ್ಲಿ ಪ್ರಪ್ರಥಮ ಬಾರಿ ತಮ್ಮ 27 ನೇ ವಯಸ್ಸಿನಲ್ಲಿಯೇ ಮುಧೋಳ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದಾಗ ಕೈಮಗ್ಗ ಮತ್ತು ಜವಳಿ ನಿಗಮದ ಅಧ್ಯಕ್ಷರಾಗಿ ನೇಕಾರರ ಬಗ್ಗೆ ಅಪಾರ ಕಾಳಜಿ ವಹಿಸಿ ಅನುಪಮ ಸೇವೆ ಸಲ್ಲಿಸಿದ್ದಾರೆ.

  • 2000 ರಿಂದ 2004 ರಲ್ಲಿ ಮಾನ್ಯ ಶ್ರೀ ಎಸ್. ಎಮ್. ಕೃಷ್ಣರವರ ಸರಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಮುಧೋಳ ಕ್ಷೇತ್ರಕ್ಕೆ ಹತ್ತು ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ
  • 2013 ರಲ್ಲಿ ಮಾನ್ಯ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದರು. ಆಗ ಕಾಂಗ್ರೆಸ್ ಜಯಗಳಿಸಿದ ಸಮಯದಲ್ಲಿ ಹಿನ್ನೆಡೆ ಕಂಡ ಆರ್ ಬಿ ತಿಮ್ಮಾಪೂರ ಕಾಂಗ್ರೆಸ್ ಪಕ್ಷವು ಮರು ಜೀವ ನೀಡಿತು ,ಪಕ್ಷ ನಿಷ್ಠೆಗೆ ಮತ್ತೆ ವಿಧಾನ ಪರಿಷತ ಸದಸ್ಯರನ್ನಾಗಿಸಿತು. ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು. ಅಂದು ಕಬ್ಬು ಬೆಳಗಾರ ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿಗಳ ಮನವೊಲಿಸಿ, ಪ್ರತಿ ಟನ್ ಕಬ್ಬಿಗೆ ರೂ. 350/- ಹೆಚ್ಚುವರಿ ಸರ್ಕಾರದ ಸಾಹಯ ಧನ ದೊರಕಿಸಲು ಶ್ರಮಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಬೀರಲು ಕಾರಣವಾದರು,
    2018 ರ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅಬಕಾರಿ ಖಾತೆ ನಿರ್ವವಹಿಸಿದ್ದಾರೆ.

ಈ ಹಿಂದೆ 2019 ರಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಶ್ರೀ ರಾಹುಲ್‌ ಗಾಂಧಿಜಿ ಮುಧೋಳಕ್ಕೆ ಆಗಮಿಸಿದ ಸಮಯದಲ್ಲಿ ಪ್ರಸುತ್ತ ಕೆಪಿಸಿಸಿ ಉಪಾಧ್ಯಕ್ಷ ಆರ್ ಬಿ ತಿಮ್ಮಾಪೂರ ಅವರು ಅತ್ಯಂತ ಚುರುಕಿನಿಂದ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ,ಭರ್ಜರಿ ಕಾರ್ಯಕ್ರಮ ಮಾಡಿ ಕ್ಷೇತ್ರದ ಮಾಹಾಜನತೆ ಹಾಗೂ ಪಕ್ಷದ ಹಿರಿಯ ನಾಯಕರ ಸೈ ಕರೆಯಿಂದ ಅನ್ನಿಸಿಕೊಂಡಿದ್ದಾರೆ.

ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ
ಎಮ್. ಬಿ. ಪಾಟೀಲರಿಂದ ಮಂಜೂರಾತಿ ದೊರಕಿಸಿ ತಂದಿದ್ದು
ಮಾಜಿ ಸಚಿವರು ಆರ್ ಬಿ ತಿಮ್ಮಾಪೂರರವರಿಗೆ ಈ ಸರಕಾರದ ರಚನೆಯಲ್ಲಿ ಸಾಮಾಜಿಕ ನ್ಯಾಯಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಶ್ರೀ ಆರ್ ಬಿ ತಿಮ್ಮಾಪೂರ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಲು ರಾಜ್ಯದ ಮಾದಿಗರ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಟೀ ಮೈಲಪ್ಪ, ಬುಗ್ಗೇಹಳ್ಳಿ ಕೊಟ್ರೇಶ್, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಎನ್ ಎಸ್ ಯು ಐ ಕಾರ್ಯದರ್ಶಿ ಕೆ ತಿಪ್ಪೇಸ್ವಾಮಿ ಹೊಸಮನಿ, ಪರಶುರಾಮ್.ಬೇವೂರ್ ಕೊಟ್ರೇಶ್, ಟಿ ಸುರೇಶ್, ಅಜ್ಜಯ್ಯ.ಜಿ ಕೊಟ್ರೇಶ್, ಕಂದಗಲ್ ಕೊಲ್ಲಾರಿ, ಆರ್. ಅಂಬರೀಶ್, ಬದ್ರಿ . ರಾಮಣ್ಣ.ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ