ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.) ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರು ನಗರದ ಬೂದಿಹಾಳ ಕುಟುಂಬ ಹಾಗೂ ಕುರುಕುಂದ ಗ್ರಾಮದ ಬಸವ ಬಳಗದ ವತಿಯಿಂದ “ಕರುಣಾಮಯಿ ಅನುಬಂಧ” ಕಾರ್ಯಕ್ರಮದಲ್ಲಿ ವಿಶಾಲಾಕ್ಷಮ್ಮ ದಿವಂಗತ ಬಸವರಾಜಪ್ಪ ಬೂದಿಹಾಳ ಇವರ ಮೊಮ್ಮಗನಾದ ಕು.ಸಾತ್ವಿಕ್ ಹಾಗೂ ಕುರುಕುಂದ ಗ್ರಾಮದ ಶ್ರೇಯಾ ವೀರೇಶ ಪಾಟೀಲ್ ಅವರ ಮಗನಾದ ಕು.ಸ್ಮಯನ್ ಪಾಟೀಲ್ ಇವರುಗಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಅನುಷಾ ಶರಣಪ್ಪ ಬೂದಿಹಾಳ ಮಾತನಾಡಿ ಸಿಂಧನೂರಿನ ಕಾರುಣ್ಯ ಆಶ್ರಮದ ಭಿಕ್ಷಾಟನೆ ಅನಾಥರ ಬಾಳಿಗೆ ಬೆಳಕಾಗಿದೆ ನೊಂದ ಜೀವಿಗಳ ನಾಡಿಮಿಡಿತವಾಗಿರುವ ನಮ್ಮ ಸಿಂಧನೂರಿನ ಕಾರುಣ್ಯ ಆಶ್ರಮ ನಾಡಿನ ಕರುಣಾಮಯಿ ಕುಟುಂಬವಾಗಿ ಸಿಂಧನೂರಿನ ಘನತೆ ಗೌರವವನ್ನು ಕಾಪಾಡುತ್ತಿದೆ.ನಿಸ್ವಾರ್ಥತೆ ಗುಣವನ್ನು ಹೊಂದಿರುವ ಈ ಸಂಸ್ಥೆ ನಿರಂತರ ಭಿಕ್ಷಾಟನೆ ಮಾಡುವುದರ ಮೂಲಕ ನಾಡಿನ ಕರುಣೆಯ ಶಕ್ತಿಯನ್ನು ಬಿಂಬಿಸಿದೆ ಹಿರಿಯ ನಾಗರಿಕ ಸೇವಾ ಕ್ಷೇತ್ರದಲ್ಲಿ ಹಿರಿಯ ಜೀವಿಗಳನ್ನು ಕಾಪಾಡುತ್ತಿರುವ ಕಾರುಣ್ಯ ಆಶ್ರಮ ಕಾರುಣ್ಯ ಎನ್ನುವ ಪದವನ್ನು ಸಮಾಜಕ್ಕೆ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದೆ ಇಂತಹ ಕಾರುಣ್ಯ ಆಶ್ರಮದಲ್ಲಿ “ಕರುಣಾಮಯಿ ಅನುಬಂಧ “ಎನ್ನುವ ಕಾರ್ಯಕ್ರಮ ಸಮಾಜದ ಅಂಗವಾಗಿರುವ ದಾನದ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದೆ.ಈ ಕಾರುಣ್ಯ ಸಂಸ್ಥೆಗೆ ನಮ್ಮ ಕುಟುಂಬ ಮತ್ತು ನಮ್ಮ ಸಿಂಧನೂರಿನ ಎಲ್ಲಾ ಕರುಣಾಮಯಿ ಮನಸ್ಸುಗಳು ಸಹಾಯ ಸಹಕಾರ ಹೆಚ್ಚಿನ ಮಟ್ಟದಲ್ಲಿ ನೀಡಿದರೆ ಕರುಣಾಮಯಿ ನಾಡು ಸಿಂಧನೂರು ಆಗುವುದರಲ್ಲಿ ಸಂದೇಹವಿಲ್ಲ.ಈ ಎಲ್ಲಾ ಹಿರಿಯರ ಆಶೀರ್ವಾದ ನಾಡಿನ ಜನತೆಯ ಮೇಲಿರಲಿ ಎಂದು ಭಾವನಾತ್ಮಕವಾಗಿ ಮಾತನಾಡಿ ಆಶ್ರಮದ ಸೇವಕ ದಂಪತಿಗಳಾದ ಸುಜಾತ ಡಾ.ಚನ್ನಬಸವ ಸ್ವಾಮಿ ಸನ್ಮಾನಿಸಿ ಗೌರವಿಸಿದರು ನಂತರ ಕಾರುಣ್ಯ ಆಕ್ರಮದ ವತಿಯಿಂದ ವಿಶಾಲಾಕ್ಷಮ್ಮ ದಿ.ಬಸವರಾಜಪ್ಪ ಅಮ್ಮನವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಅಧ್ಯಕ್ಷತೆ ವಹಿಸಿಕೊಂಡು ಜಂಗಮನ ಜೋಳಿಗೆ ಅನಾಥರ ಬಾಳಿಗೆ ಎನ್ನುವುದನ್ನು ಸಾಬೀತುಪಡಿಸಿದ ನಾಡಿನ ಜನತೆಗೆ ಯಾವತ್ತಿಗೂ ಈ ಕಾರುಣಿ ಸಂಸ್ಥೆ ಚಿರಋಣಿಯಾಗಿರುತ್ತದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುರುಕುಂದ ಬಸವ ಬಳಗದ ಮುಖಂಡರಾದ ಬಸವರಾಜ ಪಗಡದಿನ್ನಿ ಸಾ||ಕುರುಕುಂದ ಸಿಂಧನೂರು ಎಸ್ ಆರ್ ಎಸ್ ಟ್ರಾವೆಲ್ಸ್ ಮಾಲೀಕರಾದ ಶರಣಪ್ಪ ಬೂದಿಹಾಳ, ದೇವಮ್ಮ,ಷಣ್ಮುಖಪ್ಪ ರತ್ನಮ್ಮ,ವೀರನಗೌಡ,ಸಾತ್ವಿಕ್,ಇಂದುಮತಿ ಏಕನಾಥ ಮರಿಯಪ್ಪ ಯಂಕಯ್ಯ ಶ್ರೇಷ್ಟಿ, ಶರಣಮ್ಮ,ಶರಣು ಸ್ವಾಮಿ,ಬಸವ ಸ್ವಾಮಿ ಅನೇಕರು ಉಪಸ್ಥಿತರಿದ್ದರು.
One Response
ನೊಂದ ಮನಸ್ಸುಗಳ ಗೂಡು ಪುನೀತ್ ಪುಣ್ಯಾ ವೃದ್ಧಾಶ್ರಮ ಸಿಂಧನೂರ್